ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಮ್ಮ ಸಂಸಾರ, ಗೋಡೆಯ ಮೇಲಿನ ಗಡಿಯಾರ!

ಸಂಸಾರ! ಗಡಿಯಾರ!! –  ಡಾ ಡಿ ಟಿ ಕೃಷ್ಣ ಮೂರ್ತಿ

ನಮ್ಮ ಸಂಸಾರ,

ಎದುರಿನ ಗೋಡೆಯ ಮೇಲಿನ

ಗಡಿಯಾರ,

ಎರಡಕ್ಕೂ ಎಷ್ಟೊಂದು ಸಾಮ್ಯ!

ನನ್ನ ಹೆಂಡತಿ,

ಶಿಸ್ತಿನ ಸಿಪಾಯಿ !

ಸೆಕೆಂಡಿನ ಮುಳ್ಳಿನ ಹಾಗೆ

ಸಪೂರ……

ಮೂಗಿಗೆ ಕವಡೆ ಕಟ್ಟಿಕೊಂಡ

ಗಾಣದೆತ್ತಿನ ದುಡಿತ !

ಅವಳ ನಿರಂತರ

ಪ್ರೀತಿಯ ತುಡಿತವೇ

ನಮ್ಮ ಸಂಸಾರದ

ನಾಡಿಯ ಮಿಡಿತ !

ಮಕ್ಕಳೋ ……….

ನಿಮಿಷದ ಮುಳ್ಳುಗಳಂತೆ !

ನಿಮಿಷಕ್ಕೊಂದು ರೀತಿ !

ಗಂಟೆಗೆ ಅರವತ್ತರ

ಅವಸರದ ಓಟ !

ಇನ್ನು,ಅರವತ್ತರದ ಸನಿಹದ

ನಾನೋ……………..

ಗಂಟೆಯ ಮುಳ್ಳು !

ಧಡಿಯ !ನಿಧಾನಿ!

ಮನೆಯ ಪ್ರಧಾನಿ (?) !

ಗಂಟೆಗೊಮ್ಮೆ ಕದಲಿಕೆ!

ಮನೆಯೊಡತಿಯಿಂದ

‘ಎಷ್ಟು ಸ್ಲೋ’, ಎಂಬ ಸಣ್ಣದೊಂದು ಮೂದಲಿಕೆ!

ಪ್ರೀತಿಯ ಬ್ಯಾಟರಿ ಮುಗಿದಾಗ

ಮನೆಯಲ್ಲಿ ಹಠಾತ್ ಮುಷ್ಕರ!

ಸ್ವಲ್ಪ ಕಾಲ ………..

ಎಲ್ಲವೂ ,ಎಲ್ಲರೂ ಸ್ತಬ್ಧ!

ಮತ್ತೆ ಪ್ರೀತಿಯ ಹೊಸ ಚೈತನ್ಯ

ಮರು ಚಾಲನೆ ನೀಡುವ

]]>

‍ಲೇಖಕರು G

4 August, 2012

2 Comments

  1. malathi S

    wow tumbaa istaa aaytu nimma kavana Dr. Krishnamurthy avare!!
    🙂
    malathi S

  2. Badarinath Palavalli

    ಸಂಸಾರವನ್ನು ಗಡಿಯಾರಕ್ಕೆ ಹೋಲಿಸಿದ ನಿಮ್ಮ ಜಾಣ್ಮೆಗೆ ಶರಣು.
    ಇಲ್ಲಿ ಮತ್ತೊಂದಿದೆ ಸಾರ್. ಯಾವ ಮುಳ್ಳು ಕಳೆದರೂ ಗಡಿಯಾರ ನಡೀ ಒಲ್ಲದು ಅಲ್ಲವೇ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading