ಪ್ರತಿಭಾ ಹಳಿಂಗಳ
ನಮ್ಮ ಅಜ್ಜನ ಮನೆಯ ಮುದ್ದು ನಾಯಿ ರೂಬಿ ಅದು ಎರಡು ದಿನಗಳ ಹಿಂದೆ ಸಾವನ್ನಪ್ಪಿದೆ. ಹುಟ್ಟು, ಸಾವು ಇವು ಸಹಜ ಸಂಗತಿಗಳು ಆದರೆ ಅವುಗಳಿಂದ ಆಗುವ ನಿರ್ವಾತವನ್ನು ತುಂಬಲು ಸಮಯ ಬೇಕಾಗುತ್ತದೆ. ಇದು ಯಾವುದೇ ಮನುಷ್ಯರ ವಿಷಯದಲ್ಲಿ ಆದರೆ ಹೌದೆನ್ನಬಹುದೆನೊ ಇದಾಗಿದ್ದು ನಮ್ಮ ಮನೆಯ ನಾಯಿ ರೂಬಿ ವಿಷಯದಲ್ಲಿ ಎಲ್ಲರ ಮನಸಿನಲ್ಲೂ ಒಂದು ತೆರನಾದ ವಿಷಾದ ಭಾವ ,ಹೇಳಲಾಗದಂತಹ ನೋವು. ಒಂದು ನಂಬಿಕಸ್ಥ ಜೀವ ಅದು ಮನುಷ್ಯನೆ ಇರಲಿ ಪ್ರಾಣಿಯೇ ಇರಲಿ ಅದಕ್ಕೊಂದು ಬೆಲೆ ಇರುತ್ತದೆ.
ರೂಬಿ ಯಾರೆ ಮನೆಗೆ ಬಂದರು ಅವರ ಹಿಂದಿನಿಂದಲೆ ಒಳಗೆ ಬರೊದು ಯಾರನ್ನು ಕಚ್ಚಲು ಹೋಗತಿರಲೀಲ್ಲಾ ಬಂದವರು ತನ್ನನ್ನು ಮುದ್ದು ಮಾಡಲಿ ಅಂತ ಬಯಸೊದು, ನಮ್ಮ ತಂದೆ ಅಲ್ಲಿಗೆ ಹೋದರೆ ಅವರು ಅದನ್ನೊಂದು ರೌಂಡ್ ವಾಕ್ ಕರೆದುಕೊಂಡು ಹೋಗಿ ಬರುವವರೆಗೆ ಅವರ ಹತ್ತಿರದಿಂದ ಸರಿಯುತ್ತಿರಲಿಲ್ಲ. ಅದಕ್ಕೆ ನಾವಾಡುವ ಭಾಷೆ ಅರ್ಥ ಆಗತಿತ್ತು ಹೊರಗೆ ಹೋಗು ರೂಬಿ ಅಂದರೆ ಹೊರಗೆ ಹೋಗೊದು, ಕೂಡು ರೂಬಿ ಅಂದರೆ ಕೂತಕೊಳ್ಳೊದು.
ಮತ್ತೊಂದು ವೀಶೇಷ ಹೇಳಬೇಕೆಂದರೆ ನಾವೆಲ್ಲರೂ ಕುರ್ಚಿ ಮೇಲೆ ಕುಳಿತು ಮಾತಾಡುತ್ತಾ ಕೂತಿದ್ದರೆ ಅದು ಕೂಡ ಕುರ್ಚಿ ಮೇಲೆ ಬಂದು ಕೂಡೊದು, ಕೆಳಗೆ ಕೂಡತಿರಲಿಲ್ಲ.ನಾವೆಲ್ಲರೂ ತಮಾಷೆ ಗಾಗಿ ಇದು ಎಲ್ಲೊ ಹಿಂದಿನ ಜನ್ಮದಲ್ಲಿ ಲಿಡರ್ ಇದ್ದಿರಬೇಕು ನೋಡು ಅಂತಿದ್ದೆವು. ಚಿಕ್ಕವರಿಂದ ದೊಡ್ಡವರೆವರೆಗೊ ಪ್ರಿಯವಾಗಿದ್ದ ರೂಬಿ ಸತ್ತಾಗ ನಮ್ಮ ತೊಂಬತ್ತಾರು ವರ್ಷದ ಅಜ್ಜ ಬಿಕ್ಕಿ ಬಿಕ್ಕಿ ಅತ್ತರು. ಏನಾಯಿತು ಎಂದು ನಾನು ಫೊನ್ ಮಾಡಿದಾಗ ನಮ್ಮ ಸೊದರತ್ತೆ ಮಾತನಾಡಲು ಆಗದಷ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಇದಿಷ್ಟು ನಮ್ಮ ರೂಬಿ ಕಥೆ.
0 Comments