ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ನಭಾ’ ಪಾರಿಜಾತ

ನಭಾ ವಿ ಎಂ

ಮಳೆ ಬರಲಿ

 

ಹನಿ ಹನಿ ಹನಿಯಾಗಿ

ಮಳೆ ಬರಲಿ

ತೆನೆ ತೆನೆ ತೆನೆಯಾಗಿ

ಬೆಳೆ ತರಲಿ

ವನ ವನ ವನದಲಿ

ಹೂವರಳಲಿ

ಗಿಡ ಪ್ರಾಣಿ ಪಕ್ಷಿಗಳಿಗೆ

ನೀರು ಸಿಗಲಿ

ರೈತರು ಬೆಳಗಳ

ಬೆಳೆಯುತ್ತಿರಲಿ

ಸುತ್ತ ಮುತ್ತ ಎಲ್ಲಾ

ಹಸಿರಾಗಲಿ

ಜಗವು ನೋಡಲು

ಸುಂದರವಾಗಲಿ

 

ಪಾರಿಜಾತ

 

ನಮ್ಮ ಮನೆಯ ಮುಂದೆ ಒಂದು

ಪಾರಿಜಾತ ಗಿಡವಿದೆ

ಘಮ ಘಮ ಘಮ ಎಂದು

ಸುವಾಸನೆಯ ಬೀರಿದೆ

ರಾತ್ರಿಯೆಲ್ಲಾ ಪಾರಜಾತ

ಅರಳುತ್ತ ಇರುತದೆ

ಆ ಹೂವು ಎಲ್ಲರಿಗೂ

ತುಂಬ ಇಷ್ಟವಾಗಿದೆ

ಎಷ್ಟು ಕಡಿದರೂನೂ ಪಾರಿಜಾತ

ಮತ್ತೆ ಚಿಗುರುತದೆ

ಹುವು ಹೂವು ಚೆಲ್ಲಿ ಚೆಲ್ಲಿ

ಅಂಗಳವ ತುಂಬಿದೆ

 

 

‍ಲೇಖಕರು G

22 November, 2012

2 Comments

  1. Swarna

    ನಭಾ ಕನಸು ನನಸಾಗಲಿ .ನಭಾ ಸ್ಕೂಲ್ ಹುಡುಗಿ ಅನ್ನಿಸ್ತಾರೆ. ಸಾಧ್ಯವಾದರೆ ವಿವರ ಕೊಡಿ, ಚೆನ್ನಾಗಿದೆ.

    • Jayaprakash Shetty.H

      Magoo Channagide Ninna Haage.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading