ಕಲಸುಮೇಲೋಗರ
(ಮರಾಠಿ ಕವಿ ಬರೆದ ” ದೂರ ದೇಶಿ ಗೇಲಾ ಬಾಬಾ” ದ ಕನ್ನಡ ಅವತರಣಿಕೆ)
ದೂರ ದೇಶಕ್ಕ ಹೊಗ್ಯಾನ ಅಪ್ಪಾ
ನೌಕರಿಗೆ ಹೊಗ್ಯಾಳ ಅವ್ವಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ
ಗುಬ್ಬಿಯಂಥ ಜೀವಾ
ಒದ್ದ್ಯಾಡಿ ಹಾರಾಡಿ ಸುಸ್ತಾದರೂ
“ಸಾಕು , ಮಲಕೋ ಪುಟ್ಟಾ”
ಅಂತ ಹೇಳೋರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
ಎದಕೋ ಏನೋ ಯಾರಿಗೆ ಗೊತ್ತು
ಕೊಡತಾರ ಯಾಕ ಸಾಲಿಗಿ ಸುಟ್ಟಿ
ಮಾತಾಡ್ಲಿಕ್ಕೂ ಯಾರೂ ಇಲ್ಲಾ
ನನಗ ನಾನ ಹೇಳೀನಿ ಕತಿ ಕಟ್ಟೀ
ಆಟಗಿ ಎಲ್ಲಾ ಹಚ್ಚಿಟ್ಟೀನಿ
ಆಡವರೂ ಯಾರೂ ಇಲ್ಲಾ
ಮನ್ಯಾಗ ಯಾರೂ ಇಲ್ಲಾ
ಹೊರಗಿನ ಜಗಾ ಕಿಡಿಕ್ಯಾಗಿಂದ
ಕಾಣಸ್ತದ ಭಾಳ ಛಂದ
ಬಾಗಲಾ ತಗದು ಹೊರಹೋಗಬೇಕಂದ್ರ
ನನ್ನ ಮುಷ್ಟ್ಯಾಗ ಯಾರದೂ ಬೆರಳಿಲ್ಲಾ
ಮನ್ಯಾಗ ಯಾರೂ ಇಲ್ಲಾ
ಕಣ್ಣೀರು ಕಪಾಳ ದಾಟಿ ತುಟಿಗೆ ಬಂದಾವ
ಮನ್ಯಾಗ ಯಾರೂ ಇಲ್ಲಾ]]>
ಹೃದಯ ಸ್ಪರ್ಶಿಯಾದ ಕವನ. – ವಾದಿರಾಜ್ ಕುಲಕರ್ಣಿ
I kavana tuMbaa chologyaatri. makkaLna manassanna nOysibyaaDri bEga avna shaalig kaLisirri sar.