ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಪಾದ ತುಳಿತಕ್ಕೆ ಹುಲ್ಲುಗರಿಗಳು ನರಳುವ ಸದ್ದು…

ಬಿ ಎಂ ಬಶೀರ್

1.ಅಕೌಂಟ್

ಇತ್ತೀಚೆಗೆ ದುಬೈಯಿಂದ
ಬಂದ ಗೆಳೆಯ ಕೇಳಿದ
ಹೇಳು ನಿನ್ನ ಅಕೌಂಟ್
ನಲ್ಲಿ
ಎಷ್ಟು ದುಡ್ಡಿದೆ…?
ಫೇಸ್ಬುಕ್ ಅಕೌಂಟ್
ತೆರೆದು ತೋರಿಸಿದೆ
ಸಾವಿರಾರು
ಗೆಳೆಯರು
ಅಲ್ಲಿ ನಗುತ್ತಿದ್ದರು

.
2. ಸದ್ದು
.
ಮರ ಗಿಡಗಳಿಗೂ ಆತ್ಮ
ಇರಬಹುದೇ
ಎಂಬ ಪ್ರಶ್ನೆ ಹೊಳೆದಂದಿನಿಂದ
ನಡೆಯುವಾಗೆಲ್ಲ
ನನ್ನ ಪಾದ ತುಳಿತಕ್ಕೆ
ಹುಲ್ಲುಗರಿಗಳು
ನರಳುವ
ಸದ್ದು ಕೇಳುತ್ತಿವೆ…
.
3. ಮಾವಿನ ಗೊರಟೆ
.
ನಾನು ತಿಂದು ಎಸೆದ
ಮಾವಿನ ಗೊರಟೆ
ನನ್ನ
ಕವಿತೆ!
ಅದು
ಯಾವುದಾದರೂ
ಹಸಿ ಎದೆಯ ಮೇಲೆ ಬಿದ್ದು
ಮೊಳಕೆಯೊಡೆದು
ಗಿಡವಾಗಿ,
ಮರವಾಗಿ
ಹಣ್ಣುಗಳು ತೂಗಿ
ಹಕ್ಕಿಗಳಿಗೆ ಗುಡಿಲಾಗಿ,
ನೂರಾರು ಜನರಿಗೆ
ನೆರಳಾಗಿ
ಬೆಳೆದರೆ ಅದಕ್ಕೆ ನಾನು
ಹೊಣೆಯಲ್ಲ…!
.
4.ಮತ್ತೊಮ್ಮೆ

ಗಣರಾಜ್ಯೋತ್ಸವದ ದಿನ
ಬೀದಿಯಲ್ಲಿ
ಸಂಭ್ರಮಗಳೆಲ್ಲ ಕಳಚಿ
ಅನಾಥವಾಗಿ ಬಿದ್ದಿದ್ದ
ಪ್ಲಾಸ್ಟಿಕ್ ಧ್ವಜಗಳ
ಮೇಲೆ
ಯಾರ್ಯಾರದೋ
ಪಾದ ಗುರುತುಗಳು!
ಮರುದಿನ ಬೀದಿ ಗುಡಿಸುವವರ
ಮಕ್ಕಳ ಕೈಯಲ್ಲಿ

ದೇಶಕ್ಕೆ ಮತ್ತೊಮ್ಮೆ
ಗಣರಾಜ್ಯೋತ್ಸವ!

‍ಲೇಖಕರು avadhi-sandhyarani

29 January, 2013

5 Comments

  1. chalam

    ನಾನು ತಿಂದು ಎಸೆದ
    ಮಾವಿನ ಗೊರಟೆ
    ನನ್ನ
    ಕವಿತೆ
    ಚೆನ್ನಾಗಿದೆ ಬಶೀರ್ ಸರ್

  2. Swarna

    ಚೆನ್ನಾಗಿದೆ.ಮೊಳಕೆಗಿಂತ ಬೇರೆ ಕವಿತೆ ಬೇಕೇ ?
    “ಅವ ನಡೆವ ಹಾದಿಲಿ ಗರಿಕೆನೂ ಬೆಳೆಯಲ್ಲ “

  3. sunil Rao

    beautiful

  4. Santhoshkumar LM

    Superb ree basheer!!
    I enjoyed reading them.

  5. mmshaik

    nice baseer sir..!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading