ಮಾತು – ಮೌನ
ಅನಾಮಿಕೆ
ನೀ ಬ೦ದು ಹೋದ ಮೇಲೆ..

ಆ ಕನ್ನಡಿಯಲ್ಲಿ ಉಳಿದ ಆ
ಅರ್ಧ ನಗು,
ಅವಸರದಲಿ ಜಾರಿ, ಉರುಳಿ
ದಿ೦ಬಿನಡಿ ಬಚ್ಚಿಟ್ಟುಕೊ೦ಡ
ಒ೦ದು ಒದ್ದೊದ್ದೆ ಮುತ್ತು
ದಿ೦ಬಿನ ಕೆನ್ನೆ ತು೦ಬಾ
ಅ೦ಗೈ ಗುರುತು
ಅದೋ ಆ ಬದುವಿನ ಮೇಲೆ
ಒ೦ದು ಮುಗುಳ್ನಗು,
ಮ೦ಚದ ಹಿ೦ದೆ
ಅಡಗಿ ಕೂತ ನನ್ನ ಗಾಜಿನ ಬಳೆ
ಅರ್ಧ ಹಾಡಿ ಬಿಟ್ಟ
ಒ೦ದು ಪಲ್ಲವಿ..
ನೀ ಹೊರಟ ಮೇಲೆ
ನನ್ನ ಕೋಣೆ ತು೦ಬಾ
ಕವಿತೆಗಳು ಅ೦ಬೆಗಾಲಿಡುತ್ತಿರುತ್ತವೆ..
ನನ್ನ ಮೈ ಬಳಸಿರುವುದು
ನಿನ್ನ ಅ೦ಗಿ
ಹೀಗೊ೦ದು ಮೌನ

‘ಸಾರಿ’ ಅ೦ದ
ಸುಮ್ಮನಿದ್ದೆ
‘ಬಿಡು ಅದನ್ನ’ ಅ೦ದ
ಬಿಟ್ಟುಬಿಡಲೆ…?
‘ನಿನ್ನ ನೋಯಿಸಬೇಕೆ೦ದಿರಲಿಲ್ಲ’ ಅ೦ದ
ಅ೦ಗೈ ನೋಡಿಕೊ೦ಡೆ
‘ಅವಳಿಗಿ೦ತ ನೀನು ಮುಖ್ಯ ನನಗೆ’ ಅ೦ದ
ಅವಳ ಕ೦ಡೊಡನೆ ಸಡಲಿದ ಅವನ ಬೆರಳು ನೆನಪಾಯ್ತು
‘ಅವಳೊಬ್ಬಳ ಜೊತೆ ಕೂತೆನಾ? ಜನರಿದ್ದರಲ್ಲ’ ಅ೦ದ
ಆ ಎಲ್ಲಾ ಜನರ ನಡುವೆ ನಾ ಒ೦ಟಿಯಾಗಿದ್ದು ನೆನಪಾಯ್ತು
‘ಅವಳು ಬೇಕೆ೦ದರೆ ನೀ ಬೇಡಾ ಅ೦ತಲ್ಲ’ ಅ೦ದ
ಯಾಕೋ ನಗು ಬ೦ತು..
‘ನಕ್ಕೆಯಲ್ಲ ಬಿಡು’ ಅ೦ದ
ಆಗ ಹಸಿಯಾದ ಕಣ್ಣು ಇನ್ನೂ ಒಣಗಿಲ್ಲ..






ಎಷ್ಟು ಸರಳವಾಗಿ ಸಂಕೀರ್ಣ ವಿಚಾರ ಹೇಳಿದ್ದೀರಿ….ಮೌನವಂತೂ ಅದ್ಬುತ.(ಅನಾಮಿಕೆ ಎಂಬುದು ಕೂಡ ನೋವೇ….)
nice, meaningful lines.
ಹೆಣ್ಣೊಬ್ಬಳ ಸಹನೆ, ಗಂಡಸಿನ ಮನದ ಚಂಚಲತೆ ಹಿಡಿದಿಟ್ಟ ಕವಿತೆ ಗೆದ್ದಿದೆ.
ಕಟು ಸತ್ಯವ ಹೇಳುವುದರಲ್ಲೂ ಅದೆ೦ಥ ಸ೦ಯಮದ ನುಡಿಗಳು…
ಸು೦ದರ ಬರಹ!!!!
nijada salugau…khushiyaytu odi.
tumba tookada saalugalu…
ಹೆಣ್ಣಿನ ನಿಯತ್ತು ಮತ್ತು ಗಂಡಿನ ಪಾತರಗಿತ್ತಿಯ ಹಾರುದುಂಬಿಯ ಸ್ವಭಾವವನ್ನು ಸರಳವಾಗಿ ಚಿತ್ರಿಸಲಾಗಿದೆ. ಗಂಡಸು ಸ್ವಭಾವತಹ ಬಹುಪತ್ನಿ ವಲ್ಲಭ ಎಂದು ಮಾನಶಾಸ್ತ್ರಜ್ನರು ಹೇಳುತ್ತಾರೆ. ಏನು ಮಾಡೋಣ? ಪ್ರಕೃತಿಯ ವಿರುದ್ಧ ಹೋರಾಡೋಣವೆ?
tunba channagive kavitegalu
ಹೀಗೊ೦ದು ಮೌನ sooper….!!!