ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಕೆನ್ನೆಯಲ್ಲಿ ಮರೆತು ಹೋದ ನಿನ್ನ ತುಟಿಯ ಗುರುತಿಗೆ…

ವಿನಯ್ ಭಾರದ್ವಾಜ್


ಒಳಗೊಳಗೇ ಕ್ಷಣಗಣನೆ,
ಕಾಯುತ್ತಿದ್ದೇನೆ….
ಧುತ್ತೆಂದು ಆಗಮಿಸುವ
ಮೂಲವಿಲ್ಲದ ಕವನಕ್ಕೆ,
ಪಕಳೆ ಕಳಚಿದರೂ
ಘಮವ ಒಸರುವ ನೀಲಿ ಹೂವಿಗೆ,
ನೋವೆಲ್ಲಪ ಹೆಪ್ಪುಗಟ್ಟಿಸಿ
ನಿಂತಂತೆಯೆ ನಿಂತ ಗಾಢ ಕ್ಷಾರ ಸಮುದ್ರಕ್ಕೆ,
ನನ್ನ ಕೆನ್ನೆಯಲ್ಲಿ ಮರೆತು ಹೋದ
ನಿನ್ನ ತುಟಿಯ ಗುರುತಿಗೆ,
ಹಾಗು ಎಂದೋ ಸ್ಪುರಿಸಿ ಉರುಟಿ ಹೋದ
ನಮ್ಮಿಬ್ಬರ ಪ್ರೀತಿಗೆ….

‍ಲೇಖಕರು avadhi-sandhyarani

3 February, 2013

4 Comments

  1. pravara

    ವಿನಯ್,
    ಪಕಳೆ ಕಳಚಿದರೂ
    ಘಮವ ಒಸರುವ ನೀಲಿ ಹೂವಿಗೆ, ಚೆಂದದ ಸಾಲುಗಳು

  2. Mohan V Kollegal

    ವಾಹ್… ಸಾಲುಗಳು ಜರಡಿಗೆ ಮತ್ತೆ ಮತ್ತೆ ಹಾಕಿ ಶೋಧಿಸಿ ಶೋಧಿಸಿ ತೆಗೆದಂತಿದೆ. ಇಷ್ಟವಾಯಿತು…

  3. shanthi k.a.

    very nice…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading