ಬಿದಲೋಟಿ ರಂಗನಾಥ್
ಎಣ್ಣೆ ತೀರಿದ ಬಳಿಕವು
ದೀಪ ತುಂಬಿ
ನೋಡುತ್ತಾ ಕುಂತೆ
ಅದು ಗಾಳಿಗೂ ಹೆದರದ ದೀಪ
ಎಣ್ಣೆ ತೀರಿದ ಬಳಿಕವೂ
ನನ್ನ ಕಣ್ಣಲ್ಲಿ ಉಳಿದಿದ್ದ ಅಷ್ಟೇ ಬೆಳಕು
ನಾನು ಕತ್ತಲಲ್ಲೇ ನಡೆದೆ
ಕಾಣವಷ್ಟು ದೂರ…
ಅದೇ ಬೆಳಕು ಆಸರೆಯಲಿ
ತುಂಬು ಬೆಳಕಿನ ಕನ್ಯೆ
ಮನಸ ಆಸನದಲಿ ಕೂತು
ಅತ್ಮಬಲದ ಎಣ್ಣೆ ಹೊಯ್ದು
ಬತ್ತಿ ಎರಾಕುತ್ತಿದ್ದಳು
ಹುಲಿ-ಸಿಂಹ ಚಿರತೆಗಳು
ಎದುರು ತಾಕಿದವು.
ನೋಡಿ ನನ್ನ ಕಣ್ಣಲ್ಲಿದ್ದ ಬೆಳಕು
ಮತ್ತವೇ ವಾರಾದವು
ನನ್ನ ಕಣ್ಣಲ್ಲಿ
ಚೂರಿ ಇರಲಿಲ್ಲ
ಬಂದೂಕು ಇಣುಕುತ್ತಿರಲಿಲ್ಲ.







arthpoorNa kavana…
‘batthi eraakuttiddhalu’ mattu ‘matthave vaaraadavu’ emba padagalannu ranganath maatra balhasa ballaru! intha padagalhe avara padyagalannu ulhidavariginta bhinna vagisuttave. belhakannu hosa bageylli bittida kavi ge thanks.idhondhu ollheya padya.