ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನೊಳಗೂ-ನಿನ್ನೊಳಗೂ

ಸಂಘಮಿತ್ರೆ ನಾಗರಘಟ್ಟ

ಆಗಾಗ್ಗೆ ಇಲ್ಲಿ‌ ಕತ್ತಲು
ಆವರಿಸುತ್ತಿದೆ… ಮನದೊಳಗೂ-
ಹೊರಗೂ…!
ನಾ ಮಾತ್ರ ಕುರುಡಿಯಾದೆ
ಎಂದು ಗಾಬರಿಗೊಂಡೆ,
ಆ ಮಬ್ಬು.. ಮಬ್ಬು ಇರುಳಲೇ
ಮೆಲ್ಲಗೆ ಗಾಬರಿಯಲ್ಲೇ
ತಡಕುತ್ತಾ ತೊಡರುತ್ತಾ
ಬೆಳಕ ಹಾದಿಯ ಅರಸುತ
ಹೆಜ್ಜೆಗಳನ್ನಿರಿಸಿದೆ…. ಮಧ್ಯದಲ್ಲಿ
ಕಾಲಿಗೆ ಏನೋ ಸಿಕ್ಕಿತು

ತಕ್ಷಣಕ್ಕೆ ಭಯವಾಯ್ತು
ಆದರೂ ಅದು ಬೆಳಕ
ಭಂಡಾರವಾಗಿರಬಹುದೇ
ಎಂಬ ಕುತೂಹಲದಲೇ…
ನನ್ನೆರೆಡು ಕೈಗಳಲಿ ಅದ
ಸ್ಪರ್ಶಿಸಿದೆ… ಬಿಸಿಯ ಶಾಖವೂ
ಇಲ್ಲ… ಮುಟ್ಟಿದರೆ ಬೊಗಸೆ
ತುಂಬಾ ಬೆವರ ಹನಿ ಸಿಕ್ಕಿತು
ಆಗ ನೀ ನನಗಿಂತಲೂ ಮೊದಲೇ
ಕುರುಡನಾಗಿ ಈ ಕತ್ತಲ ಕೂಪದಲಿ
ಕುಳಿತಿದ್ದೆ ಎಂದು ಖಾತ್ರಿಯಾಯ್ತು…!

‍ಲೇಖಕರು Admin

13 October, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading