ಒ೦ದು ಗಜಲ್
– ಎಂ ಎಂ ಶೇಕ್, ಕತ್ತನೂರ್
ನನ್ನಲ್ಲಿ ಕತ್ತಲಿಗಂಜದೆ, ಮೌನಕ್ಕಂಜುವ ಕ್ಷಣಗಳಿವೆ
ಸಾವಿಗಂಜದೆ ಬದುಕಲು ಅಂಜುವ ಕ್ಷಣಗಳಿವೆ
ಹುಟ್ಟಿ ಬೆಳೆದು ಹೊಸ್ತಲಿಗೆ ಬಂದು ನಿಂತವು
ನಡೆಯಲು ಅಂಗಳಕ್ಕಿಳಿಯದೆ ಅಂಜುವ ಕ್ಷಣಗಳಿವೆ.
ಕುಳಿತಲ್ಲೆ ಕುಳಿತು ಕಥೆ ಕೇಳಿ ಸುಖಿಸುತ್ತವೆ,
ತನ್ನ ತಾನೆ ಉರಿಯುವ ದೀಪಕ್ಕೆ ಅಂಜುವ ಕ್ಷಣಗಳಿವೆ.
ಜಲಪಾತಕ್ಕೀಗ ಯೌವ್ವನ ಕಂಡಾಯ್ತು; ಆದರೂ
ಶಾಂತವಾಗಿ ಹರಿಯುವ ನದಿಗೆ ಅಂಜುವ ಕ್ಷಣಗಳಿವೆ.
ಎದ್ದ ಒಂದು ಮುಂಜಾನೆಗೆ ದೇವಿ ಎನ್ನಿಸಿಕೊಂಡೆ,
ಮಾತು ಏರಿದಂತೆಲ್ಲಾ ಬಿಸಿಲಿಗೆ ಅಂಜುವ ಕ್ಷಣಗಳಿವೆ.
]]>





0 Comments