– ಪಿ ಮಂಜುನಾಥ
ನನ್ನ ಮನೆಯ
ದೀಪವೆಂದರೆ
ಕತ್ತಲೆಯ ತುರುಬಿಗೆ
ಮುಡಿಸಿದ
ಮಲ್ಲಿಗೆ ಹೂವಿನ ದಂಡೆ…!
*
ಕೂಡು ಸಂತೆಯಲ್ಲಿ
ಕಳೆದು ಹೋದ ನನಗೆ
ಸಿಕ್ಕವರೆಲ್ಲರೂ
ಕಳೆದುಕೊಂಡವರೇ ಆಗಿದ್ದರು…!
*

ನನ್ನನ್ನು
‘Half ‘ ಎಂದು
ಕರೆದವರ ಮನಸ್ಸುಗಳೆಂದೂ
Full ಆಗಲೇ ಇಲ್ಲ…!
*
ಹರಕಲು ಬೂಟುಗಳ
ಹೊಲೆದಷ್ಟೂ
ಪಾದಗಳನು
ಮುಚ್ಚಲು ಯತ್ನಿಸಿದವು;
ಅವನ್ನು ಕಂಡ ವಿಕ್ಷಿಪ್ತರು
ನನ್ನನ್ನು ಅಳೆದಳೆದು
ಪಾದಗಳನು ಬೆತ್ತಲಾಗಿಸಿದರು.
*
ನಂಬಿದ ಅಂಬಿಗ
ಕೈಕೊಟ್ಟ:
ಹರಾಮಿ
ಮನಸ್ಸು ಕಾಲನ ತೆಕ್ಕೆಯಲ್ಲೂ
ಭರವಸೆಯ ರೆಕ್ಕೆಗಳ
ಕನಸು ಕಾಣತೊಡಗಿತು…!






kavithe musth adavappa manjanna…
chennaagide kavite-smitha
too good..!
Thank u vijaykantanna and all..