
ಕರ್ಣ ಕುಮಾರ್
ನಾನು ನೆನ್ನೆ ನಮ್ಮ ಆಫೀಸ್ ಮುಂದಿನ ಹೋಟೆಲ್ ನಲ್ಲಿ ಊಟ ಮಾಡ್ತಾ ಇದ್ದೆ.. ಸುಮಾರು 60 ವಯಸ್ಸಿನ ಆಸು-ಪಾಸಿನ ಒಬ್ಬರು ಹಿರಿಯರು ಆ ಹೋಟೆಲ್ ಮುಂದೆ ಬಂದು ನಿಂತರು
ನಾನು ಅವರನ್ನೇ ಸುಮಾರು ಹೊತ್ತು ಗಮನಿಸಿದೆ.. ಅವರ ಕೈಯಲ್ಲಿದ್ದ ಕೈ-ಗಡಿಯಾರ, ಅವರ ಬಟ್ಟೆ ಎಲ್ಲವೂ ಬಾಳಿ-ಬದುಕಿದವರ ರೀತಿಯೇ ಇತ್ತು
ನಾನೇ ಆವರನ್ನು ಪ್ರೀತಿಯಿಂದ ಮಾತನಾಡಿಸಿ.. ”ಯಾವ ಊರು ಗೌಡ್ರೆ” ಅಂದೆ.. ಅವರು ಅಳೋದಿಕ್ಕೇ ಶುರು ಮಾಡಿಬಿಟ್ರು
“ಯಾಕೆ ಏನಾಯ್ತು” ಅಂತ ಅವರ ಹೆಗಲ ಮೇಲೆ ಕೈಹಾಕಿ ಪ್ರೀತಿಯಿಂದ ಕೇಳಿದೆ.. ಅದಕ್ಕೆ ಅವರು, ನಮ್ಮ ಊರು ಚನ್ನರಾಯಪಟ್ಟಣ ನನಗೆ ಒಬ್ಬನೇ ಮಗ.. ಅವನಿಗೆ ಐದು ವರ್ಷದ ಹಿಂದೆ ಮದುವೆ ಮಾಡಿದೆ.. ಮೊದ-ಮೊದಲು ಚೆನ್ನಾಗಿದ್ದ ಮಗ.. ಸೊಸೆ ಬಂದಮೇಲೆ ನನ್ನನ್ನು ಕಾಲಿನ ಕಸಕ್ಕಿಂತ ಕಡೆಯಾಗಿ ಕಂಡುಬಿಟ್ಟ ಅಂತ ಕಣ್ಣೀರ್ ಹಾಕಿಬಿಟ್ರು
ನನಗೆ ಅಷ್ಟರಲ್ಲಾಗಲೇ ವಿಷಯ ಅರ್ಥವಾಗಿ ಹೋಗಿತ್ತು.. ”ಸರಿ ಗೌಡ್ರೆ, ನಿಮ್ಮ ಮಡದಿ ಏನ್ ಮಾಡ್ತಾ ಇದಾರೆ” ಅಂತ ಕೇಳಿದೆ. ”ಅವಳು ಎರಡು ವರ್ಷದ ಹಿಂದೆ ಕ್ಯಾನ್ಸರ್ ಬಂದು ಸತ್ತೋದ್ಲೂ” ಅಂದ್ರು
“ಮಗನ ಮನೆ ಎಲ್ಲಿ.. ಇಲ್ಲಿಗ್ಯಾಕೆ ಬಂದಿದ್ರಿ” ಅಂದೆ. ”ಮಗನ ಇಂಜಿನಿಯರ್ ಓದಿಸೋಕೆ, ಅವನ ಮದುವೆಗೆ ಅಂತ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದೆ.. ಈಗ ಅದರ ಬಡ್ಡಿ ಎಲ್ಲಾ ಸೇರಿ ಬರೋಬ್ಬರಿ ಎರಡು ಲಕ್ಷ ಆಗಿದೆ.. ಅದಕ್ಕೆ ಹೇಳ್ಬಿಟ್ಟು ಹೋಗೋಣ ಅಂತ ಬಂದೆ” ಅಂದ್ರು
ಹೇಳಿದ್ರಾ.? ಅಂದೆ.. ”ಹೇಳೋದು ಎಲ್ಲಪ್ಪ ಬಂತು.. ನನ್ನ ಮಗ ಕೆಲಸಕ್ಕೆ ಹೋಗಿದ್ದ.. ನನ್ನ ಸೊಸೆ ನನ್ನ ಬಾಯಿಗೆ ಬಂದಂತೆ ಬಯ್ದು, ಒಂದು ಗ್ಲಾಸ್ ನೀರನ್ನೂ ಕೊಡದೆ ಕಳುಹಿಸಿಬಿಟ್ಟಳಪ್ಪ” ಅಂದ್ರು
“ಅದೆಲ್ಲಾ ಸರಿ, ನಿಮ್ಮ ಮಡದಿಗೆ ಕ್ಯಾನ್ಸರ್ ಬಂತಲ್ಲ.? ಆಸ್ಪತ್ರೆಗೆಲ್ಲಾ ಯಾರು ದುಡ್ಡು ಖರ್ಚು ಮಾಡಿದ್ದು” ಅಂದೆ.. ” ಆಸ್ಪತ್ರೆ ಎಲ್ಲಪ್ಪ.. ಅವಳಿಗೆ ಯಾವಾಗ ಕಾಯಿಲೆ ಇದೆ ಅಂತ ಗೊತ್ತಾಯಿತೋ.. ಮಗನ ದುರ್ಬುಧ್ಧಿ, ಸೊಸೆಯ ಕಿಡಿಗೇಡಿ ಬುದ್ದಿ, ನನ್ನ ಅಸಹಾಯಕತೆ ನೋಡೋಕೆ ಆಗದೇ ಅವಳೇ ನೇಣು ಹಾಕ್ಕೋಂಡು ಸತ್ತೋದ್ಲೂ” ಅಂದ್ರು
… ನನಗೆ ಕಣ್ಣೀರ್ ಬಂದಿದ್ದೇ ಆವಾಗಲೇ
ಅವರಿಗೆ ಹೊಟ್ಟೆ ತುಂಬಾ ಊಟ ಕೊಡಿಸಿ, ನಮ್ಮ ಮನೆ ತೋರಿಸಿ, ಅವರು ಬೇಡವೇಂದರೂ ಅವರ ಖರ್ಚಿಗೆ ಅಂತ ಜೇಬಿಗೆ ದುಡ್ಡಿಟ್ಟು ”ನೀವು ಯಾವಾಗ ಬೇಕಾದರೂ ನಮ್ಮ ಮನೆಗೆ ಬರಬಹುದು.. ನಿಮ್ಮ ಕಷ್ಟ-ಸುಖಕ್ಕೆ ನಾನಿದೀನಿ” ಅಂತ ಧೈರ್ಯ ಹೇಳಿದೆ
ನನ್ನನ್ನೇ ತುಂಬಾ ಹೊತ್ತು ದಿಟ್ಟಿಸಿ ನೋಡಿದ ಅವರು, ನೀನಾದರೂ ನನ್ನ ಹೊಟ್ಟೆಯಲ್ಲಿ ಹುಟ್ಟಬಾರದಿತ್ತಾ.. ಅಂತ ಕಣ್ಣೀರ್ ಹಾಕಿದ್ರು..
ನಾನು ಮೂರು ತಿಂಗಳು ಮಗುವಾಗಿದ್ದಾಗಲೇ ನನ್ನ ತಂದೆ ಸತ್ತುಹೋಗಿದ್ದಾರೆ ಆನ್ನೋ ಸತ್ಯ ನಾನು ಅವರಿಗೆ ಹೇಳಲಿಲ್ಲ
ಮೂರು ತಿಂಗಳು ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ನನ್ನಂತವನಿಗೆ ಮಾತ್ರ ಗೊತ್ತು ತಂದೆಯ ಬೆಲೆ..
ಅಪ್ಪ ಇಲ್ಲದೆ ಬೆಳೆಯೋದು ಎಷ್ಟು ಕಷ್ಟ ಅಂತ





ನಿಮಗೆ ನಿಮ್ಮ ಪಾಲಕರು “ಕಣ೯ಕುಮಾರ್” ಅಂತ ಹೆಸರಿಟ್ಟಿದ್ದು ಸಾಥ೯ಕವಾಯಿತು ಬಿಡಿ. ಪರರ ಕಣ್ಣೀರ ಒರೆಸುವ ನಿಮ್ಮ ಗುಣ ಮೆಚ್ಚಿದೆ.
Badukin sarthkate avlokisuva prasang.
Hettavar Moulyagalige nannadounda Salaam
Heart touching story
jeevanada kahi satya oppalu aaguttilla