ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಡೆಯುವಾಗ ನಡೆದದ್ದನ್ನೆಲ್ಲ ಇಡಿಇಡಿಯಾಗಿ ನೆನಸಿಕೊಳ್ಳಲೇಬೇಕು..

ಗಜಲ್

ಸುರೇಶ ಎಲ್ ರಾಜಮಾನೆ

ಜಗತ್ತು ನೂಕಿಬಿಟ್ಟಿದೆ ಸಂಸಾರದ ಸಾಗರದಲ್ಲಿ ಭೂಮಿಯಲಿ ಬಿತ್ತಿದಂತೆ,
ಬೀಜ ಸಹಜ ಮುಳುಗಿ ಮೃದುವಾಗಿ ಮೊಳಕೆಯೊಡೆಯಲೇಬೇಕು|
ಅಲೆಗಳೆಲ್ಲ ಬದುಕಲು ಒದ್ದಾಡುತ್ತಿವೆ ದಡದಲ್ಲಿ ನೋಡುಗರ ಕಣ್ಣಿಗೆ
ಹಬ್ಬವನ್ನುಂಟು ಮಾಡಿ ಹಣ ಕೊಟ್ಟಾದರೂ ನೋಡಿ ಆನಂದಿಸಲೇಬೇಕು|
 
ಅವರವರ ಕಷ್ಟ ಅವರವರಿಗೆ ಗೊತ್ತಾಗುವುದು ಹಾಗಂತ,
ಸುಮ್ಮನಿದ್ದರೇ ಒಂದಿಲ್ಲೊಂದು ದಿನ ನಾವು ಅನುಭವಿಸಲೇಬೇಕು|
ಎಲ್ಲರೂ ಬಲ್ಲವರಾದರೂ ಎಡವುವವರು ಇರುವಾಗ ನಡೆಯುವವರು
ನಡೆಯುವಾಗ ನಡೆದದ್ದನ್ನೆಲ್ಲ ಇಡಿ-ಇಡಿಯಾಗಿ ನೆನಸಿಕೊಳ್ಳಲೇಬೇಕು|

ಕಷ್ಟವನ್ನು ಸಹಿಸಿಕೊಂಡು ನಷ್ಟವ ಅನುಭವಿಸುವಾಗ ಪಟ್ಟ
ಪ್ರಯತ್ನಗಳ ಮೇಲೊಮ್ಮೆ ವಿಫಲತೆಗೆ ಉತ್ತರವಾಗಿ ಕಣ್ಣು ಹಾಯಿಸಲೇಬೇಕು|
ಕಲಿತ ಪಾಠಕೆ ಪ್ರಶ್ನೆ ಪ್ರಶ್ನೆಗೊಂದು ಉತ್ತರ ಹುಡುಕಲು ತತ್ತರಿಸುವಾಗ
ಸೂತ್ರ ಹಚ್ಚಿ ಉತ್ರ ಬಿಡಿಸೋವಾಗ ಪಾತ್ರಗಳಬಗ್ಗೆ ಚಿತ್ರಿಸಲೇಬೇಕು|
 
ಕಳೆದ ಕ್ಷಣಗಳ ದುಡಿದ ದಿನಗಳ ಮೇಲೆ ನೆನಪೊಂದು ನಿದ್ರಿಸುವಾಗ
ಕನಸೊಂದು ಮೊಳೆತು ಒಳಿತು-ಕೆಡಕುಗಳನರಿತು ಎಚ್ಚರವಾಗಿರಲೇಬೇಕು|
ಸುರಿದ ಹನಿಗಳಿಗೆ ಕಾರಣವ ಕೇಳುವಾಗ ಕಣ್ಣೊರೆಸಿದವರ ಕೈ
ಒರೆಸಿದ ರೀತಿ ಸಂತೈಸಿದ ಸಂಗತಿಯನ್ನೊಮ್ಮೆ ನೆನಸಿಕೊಳ್ಳಲೇಬೇಕು|
 
ತಿಂದು ಉಂಡ ಭಂಡ ಜಗಕೆ ದಂಡ ಜಗಮೊಂಡ ಎಂದುಚ್ಚರಿಸುವವರ ಮದ್ಯೆ
ಶುಧ್ಧ ನೀರಿನ ಹಾಗೆ ನಟಿಸಿದರೇ ಬೆಲೆ ಕಟ್ಟಿ ಬೀಸಾಕಿದವರನ್ನು ಮೆಚ್ಚಲೇಬೇಕು|
ನುರಿತ ನಾಗರಿಕರ ನಾಡಿನಲಿ ತುರ್ತಾಗಿ ತಪ್ಪೆಸಗಿದರೇ ತಪ್ಪದೇ
ತುಪ್ಪವನ್ನು ಕೈಚೆಲ್ಲಿ ಕಪ್ಪು ಬಣ್ಣದ ಕೈ ಹಿಡಿದು ಸೊತ್ತನ್ನೆಲ್ಲ ಕಿತ್ತೆಸೆಯಲೇಬೇಕು|
 
ಅಳಿದು ಹೋಗುವ ಬಾಳೀನಲಿ ಹೊಳೆದು ನಿಲ್ಲುವ ನಗೆಯಾಗಲು
ಬಗೆದು ನಿಲ್ಲಬೇಕು ನೋವಿನ ಹೊಗೆಯನ್ನು ಸಾಯಿಸಿ ಬದುಕಲೇಬೇಕು||

‍ಲೇಖಕರು G

20 September, 2014

4 Comments

  1. ಡಾ.ಶಿವಾನಂದ ಕುಬಸದ

    ಚೆನ್ನಾಗಿದೆ.

  2. suresh rajamane

    ತುಂಬಾ ಧನ್ಯವಾದಗಳು ಸರ್

  3. Anonymous

    Nice dosth…..

  4. Mallu waggar

    Nicen ‘n sir. Artha garbitaagive saalugalu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading