ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ನಡುರಾತ್ರಿಯ ಜಡಿಮಳೆಯಲ್ಲಿ ನಿದ್ದೆಗೆಡಿಸುವ ಚಂದಿರ…' ಪ್ರಜ್ಞಾ ಮತ್ತೀಹಳ್ಳಿ ಕವಿತೆ

ಮಳೆಗಾಲದಲ್ಲಿ

ಪ್ರಜ್ಞಾ ಮತ್ತೀಹಳ್ಳಿ

ಬಿಡುವೇ ಸಿಗುತ್ತಿಲ್ಲ ಪದ್ಯ ಬರೆಯಲು
ಮುಂಗಾರಿನ ಹಂಗಾಮಲಿ
 
ಕೂಗಿಸಬೇಕು ನನ್ನ ಕುಕ್ಕರು
ಇನ್ನೂ ಒಂದಿಷ್ಟು ಸಲ
ಒಳಗೆ ಕಾವು ಕೂಡಿಸಿಕೊಳ್ಳುತ್ತಿರುವ ಸೂರ್ಯ
ಒದ್ದೆ ಬಟ್ಟೆ ನೀರು ಹೀರಿ ಹೀರಿ
ಛಳಿ ಹಿಡಿದು ಬಂದುಬಿಡುತ್ತಾನೆ
ಸೀದಾ ಅಡಿಗೆಮನೆ ಕಿಡಕಿಯಿಂದ
 
ನಡುರಾತ್ರಿಯ ಜಡಿಮಳೆಯಲ್ಲಿ
ನಿದ್ದೆಗೆಡಿಸುವ ಚಂದಿರ
ಹಿಂಡುಮೋಡದ ಕರಿ ಮೆತ್ತಿ
ಬಚ್ಚಲಿಗಿಳಿಯುತ್ತಾನೆ
ನೊರೆ ಶ್ಯಾಂಪೂ ಸ್ನಾನಕ್ಕೆ
ಹೊಟ್ಟು ಹೋಗಿಸುವುದೇ ಕಷ್ಟ
 
ಚುಕ್ಕು ತಟ್ಟದೇ ನಿದ್ದೆ ಮಾಡುವುದಿಲ್ಲ
ಚುಕ್ಕಿ ಮಕ್ಕಳು ಹೊಡಸಲೆದುರ
ಸೊಳ್ಳೆಪರದೆಯಲಿ ಬೆಚ್ಚಿ ಬೀಳುತ್ತವೆ
ಪದೇಪದೇ ಗುಡುಗು ಸಿಡಿಲ ಸದ್ದಿಗೆ
 
ಅಂಡಲೆದು ಥಂಡಿ ಹಿಡಿಸಿಕೊಂಡ
ಗಾಳಿ ನುಸುಳುತ್ತದೆ ತಣ್ಣಗೆ
ಎದೆಗೆ ವಿಕ್ಸ ಸವರಿಕೊಂಡು ಕಷಾಯ
ಗುಟುಕರಿಸಲು
 
ಇದೆಷ್ಟನೆಯ ಬರ್ತಡೆಯೋ
ಲೆಕ್ಕ ತಪ್ಪಿದೆ ಮುಂಗಾರಿಗೆ

ಆದರೂ ಪಾಯಸ ಮಾಡಬೇಕಂತೆ 
ಅಯ್ಯೊ ವೇಳೆಯೇ ಸಿಗುತ್ತಿಲ್ಲ
ಮುಂಗಾರಿನ ಹಂಗಾಮಲಿ
 

‍ಲೇಖಕರು avadhi

3 August, 2013

12 Comments

  1. D.Ravivarma

    ಇದೆಷ್ಟನೆಯ ಬರ್ತಡೆಯೋ
    ಲೆಕ್ಕ ತಪ್ಪಿದೆ ಮುಂಗಾರಿಗೆ
    ಆದರೂ ಪಾಯಸ ಮಾಡಬೇಕಂತೆ
    ಅಯ್ಯೊ ವೇಳೆಯೇ ಸಿಗುತ್ತಿಲ್ಲ
    ಮುಂಗಾರಿನ ಹಂಗಾಮಲಿ…very nice…tumbaa arthapurnavaada kavya….

  2. pravara kottur

    ಪದ್ಯ ಬರೆಯಲು ಆಗುತ್ತಿಲ್ಲ ಎಂದುಕೊಂಡೇ ಬರೆದಿರಿ… ಚೆನ್ನಾಗಿದೆ

  3. mmshaik

    payasadate sihi..kavana

  4. vishwanath sunkasala

    Tumbaa chennaagide kavite..

  5. Anonymous

    chennagide kavite madam

  6. Siddarama G M

    super madam

  7. nagraj.harapanahalli

    ಇದೆಷ್ಟನೆಯ ಬರ್ತಡೆಯೋ
    ಲೆಕ್ಕ ತಪ್ಪಿದೆ ಮುಂಗಾರಿಗೆ
    ಆದರೂ ಪಾಯಸ ಮಾಡಬೇಕಂತ
    ……ಸೊಗಸಾದ ರೂಪಕ

  8. ರುದ್ರೇಶ ಕಿತ್ತೂರ ಮುದ್ದೇಬಿಹಾಳ

    ತುಂಬಾ ಚೆನ್ನಾಗಿದೆ,

  9. ಎನ್ವೀ ವೈದ್ಯಹೆಗ್ಗಾರ್

    cholo iddu padya… khushi aaatu.

  10. sangeetha raviraj

    ಕವಿತೆ ತುಂಬಾ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading