
****
ಭವ್ಯ ಗೌಡ
ಕಾಡುತಿದೆ ಪಡೆದ ಜೀವ
ಬಯಕೆಗಳಿಗೆ ಸಿಲುಕಿಸಿ
ಭೇದಕಾಣದ ಸೃಷ್ಠಿ
ನಗುತಲಿದೆ ಸೋತು
ಒಳಗೊಳಗೆ ಅಣಕಿಸಿ
ತಿಳಿನೀರನೇ ಬಯಸಿ
ಅರಳಿತೇ ಕಮಲ?
ನಗುತಲೇ ಕಳೆದಿಹುದು
ದಿನವೊಂದನು
ಧಿಕ್ಕರಿಸಿ ಅರಳಿ
ಎಲ್ಲ ಅಡೆತಡೆಗಳನು
ನಗಬೇಕಿದೆಯಷ್ಟೆ
ಮನದ ಮುಖಕೆ ತರೆಯೆಳೆದು
ಮಣ್ಣ ಬಸಿರನೆ ಭೇದಿಸಿ
ಸಹಜವೆಂಬಂತೆ ಭ್ರಮಿಸುವ
ಹೂವಿನಂತೆ..
ನಗುವನ್ನೇ ಮುಡಿದು
ಆಗ ತಾನೆ ಅರಳಿದ ತಾವರೆಯಂತೆ
ನಗುವಷ್ಟೆ ಒಲಿದೀತು
ಕಾಣುವ ಕಣ್ಣಿಗೆ
ಬಚ್ಚಿಟ್ಟ ತಾಪ ನೀರಿನೊಳಗೆ
ಹೂವ ಮುಡಿದು
ಸಂಭ್ರಮಿಸುವ
ನೀರೆಯೆದೆಯೊಳಗೆ
2
ಕನಸು ನಿನ್ನ ಕಂಗಳಲೆ
ಯಾವ ಜನ್ಮದಲಿ ಮರಕೆ ಸುತ್ತಿದ
ಹರಕೆಯ ಅರಿಸಿನದ ಹಸಿ ಎಳೆಯೊ
ನಿನ್ನ ಕೈ ಸೇರಿದೆ ಈಗ
ನಂಬಿಕೆಯ ಸೆರಗಲಿ ಕಟ್ಟಿ
ಅಂಬಿಗನ ಕಾದವಳು
ಮನದ ಹೊಸ್ತಿಲನೊರಗಿ
ಇನ್ನು ತಡವಿಲ್ಲ ಬಿಡುವಿಲ್ಲ
ರೆಕ್ಕೆ ಬಲಿತಾಯಿತೆನ್ನ ಆಸೆಗಳಿಗೆ
ಉತ್ತರ ಕಣ್ಣೆದುರಿನಲಿ
ಕರುಳು ಬೆಚ್ಚಗೆನಿಸುತಿದೆ
ಕರಿಮಣಿಗೆ ಕೊರಳು
ಬಾಗಿ ನಿಂತಾ ಸಮಯ
ಕೂಗಿ ಹೇಳಿಬಿಡಲೆ? ಒಮ್ಮೆ ದಿಟ್ಟಿಸಿ
ಉಳಿದೆಲ್ಲ ಬದುಕು ನಿನ್ನ ಜೊತೆಯಲ್ಲೆ
ಇನ್ನೆಲ್ಲ ಕನಸು ನಿನ್ನ ಕಂಗಳಲೆ






Soooper lines……
Thank you 🙂
ನಗಬೇಕಿದೆಯಷ್ಟೆ
ಮನದ ಮುಖಕೆ ತರೆಯೆಳೆದು
ಮಣ್ಣ ಬಸಿರನೆ ಭೇದಿಸಿ
ಸಹಜವೆಂಬಂತೆ ಭ್ರಮಿಸುವ
Ultimate