
ಯಾರೂ ಇಲ್ಲದ ಜಾಗದಲ್ಲಿ
ಯಾರೂ ಕೇಳದ ಸಮಯದಲ್ಲಿ
ಯಾರೂ ಕಾಣದ ರೀತಿಯಲ್ಲಿ ಬಚ್ಚಿಟ್ಟಿದ್ದೆ.
ಹೇಗೆ ಪತ್ತೆ ಹಚ್ಚಿದರು ಅವರು?

ನುಚ್ಚಾಯ್ತು ನೀರ ಹೊಳಿಯಾಗೆ
ಅಂತ ಅಳುವಂತೆಯೂ ಇಲ್ಲಾ
ಗಡಿಗೆ ಒಡೆದ ಕಾರಣ ಬಹಿರಂಗ
ಆದರೂ ಗೂಢಚಾರರ ವರದಿ ಆಧರಿಸಿ
ಎಂದು ಸಮರ್ಥಿಸಿಕೊಂಡು ದಂಡು ಬಂದು
ಕೈಕೋಳ ಹಾಕಿ ಎಳೆದುಕೊಂಡು ಹೋದರು
ಗೋಪ್ಯವಲ್ಲ ಈಗ ಯಾವುದೂ
ಸಭ್ಯವಲ್ಲ ಮಾತನಾಡದಿರುವುದೂ
ಮೌನಕ್ಕೂ ನೂರು ಕಾರಣ ಕೊಟ್ಟು
ಧರ್ಮಾಂಧರು ಹಠ ತೊಟ್ಟು
ಭಕ್ತಗಣ ಉಘೇ ಉಘೇ ಎನ್ನುತ್ತಿರಲು
ಯತ್ನಿಸಿ ಚಿಂತನೆಯ ಮೂಲವನ್ನೇ ಅಳಿಸಲು

ಸನ್ನದ್ಧರಾದರು ಹೇಗೆ ಎಂದರೆ
ಪುಣ್ಯವಂತರ ಮೇಲೆ
ಪಾಪಿಷ್ಠರೇ ಕಲ್ಲು ಹೊಡೆಯುವುದಂತೆ.






0 Comments