ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಕ್ಷತ್ರವೊಂದು ಭೂಮಿಗೆ ಬೀಳುವ ಮುನ್ನ.. 

ಮೆಹಬೂಬ ಮುಲ್ತಾನಿ

ಒಂಟಿ ನಕ್ಷತ್ರವೊಂದು
ಭೂಮಿಗೆ ಬೀಳುವ ಮುನ್ನ
ಕನಸಿಗೆ ಬಂದು ಕವಿತೆ ಬರೆಯುವುದು ಹೇಳಿಕೊಟ್ಟಿದೆ..

ತಾರಕ್ಕಿ ಬೀಳುವಾಗ
ಅವಳ ಆಸೆಯೊಂದು ಗರ್ಭಗಟ್ಟಿ
ಮೊಳಕೆಯೊಡುವ ಭಾಷೆಗೆ ತಡಕಾಡಿದೆ..

ಭೂಮಿ ಆಗಸದ ನಡುವೆ
ಪ್ರೀತಿಯ ನೇಹ ಬೆಸೆಯುವ
ಸ್ವರ್ಗದ ಭಾಷೆಯ ಹೇಳಿಕೊಟ್ಟ ನಕ್ಷತ್ರ
ನಿನ್ನೆನೆ ಭೂಮಿಗೆ ಬಿದ್ದಿದೆ..

ಭುವಿಯ ತುಂಬಾ ಸ್ವರ್ಗದ ಭಾಷೆ ಆವರಿಸಿದೆ
ಅವಳ ಗರ್ಭದಲ್ಲಿಗ ಮೊಳಕೆಗಳ ಹಾವಳಿ ಉಂಟಾಗಿದೆ….

‍ಲೇಖಕರು avadhi

19 April, 2019

1 Comment

  1. berlinder

    1. nanna mechchuge. 2. tiddupaDi: garbhadalleega

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading