ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಕ್ಷತ್ರಗಳ ಮುಡಿಸಲೇ ಇಲ್ಲ ಮಾಧವ..

ಶುಭಾ ಎ.ಆರ್.

ರಾಧೆ ಎಂಬ  ಖಾಲಿತನಕೆ
ರಾಧೆ ಹೆರಳು ಬರಿದಾಗೇ
ಉಳಿದಿದೆ ಇನ್ನು
ಮಾಧವನೋ ನಕ್ಷತ್ರಗಳ
ಮುಡಿಸಲೇ ಇಲ್ಲ

ರಾಧೆ ಕೊರಳು ಬರಿದಾಗೇ
ಬಣಗುಡುತಿದೆ ಇನ್ನು
ಮಾಧವನೋ ಪಾರಿಜಾತದ
ಮಾಲೆ ತೊಡಿಸಲೆ ಇಲ್ಲ

ರಾಧೆ ಹೆಜ್ಜೆಗಳು ಬರಿದಾಗೇ
ಉಳಿದಿವೆ ಇನ್ನು
ಮಾಧವನೋ ಒಲವ
ಮದರಂಗಿ ಹಚ್ಚಲೆ ಇಲ್ಲ

ರಾಧೆ ಜಗ ಬರಿದಾಗೆ
ಉಳಿದಿದೆ ಇನ್ನು
ಮಾಧವನೊ ವೇಣು
ಗಾನ ನುಡಿಸಲೆ ಇಲ್ಲ

‍ಲೇಖಕರು admin

26 February, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading