– ನರೇಶ ಮಯ್ಯ
ಧ್ಯಾನ ಪೌರ್ಣಿಮಾ
ನೀನೋ ಮಲೆನಾಡ ಸಿರಿ ಸೊಬಗಿ
ಬಿಮ್ಮನೆ ಅದ್ಭುತಗಳ ತಿಳಿಹೇಳುವ ತವಕದಲ್ಲಿ
ಘಳಿಗೆ ಘಳಿಗೆಗಳ ತೇಲಿಸುತ್ತಿದ್ದೀಯೆ
ನನ್ನ ತಿಳಿಗೊಳವೆಂಬ
ನಿನ್ನ ಸ್ನಿಗ್ಧ ಸರೋವರದಲ್ಲಿ.
ನಾನೋ
ನೆಟ್ಟು-ಪ್ಲಾನೆಟ್ಟುಗಳ
ಪ್ರಪಂಚದ ಪಪ್ರಲೋಭನೆಯೊಳಗೆ,
ನುಡಿಸಿರಿಯ ನೋಂಪಿಯಲ್ಲಿ
ನೆನೆದು ನೀರಾಗಿದ್ದೇನೆ;
ನಿನ್ನಾ ಕಣ್ಣ ಕಾಂತಿಯ ಝಳಪಿಗೆ ಸಿಕ್ಕು
ಸಿಕ್ಕಾಗಿದ್ದೇನೆ.
ನಿನ್ನ ಸೋಕಿಕೊಂಡು
ಓಡೋಡಿ ಬಂದ ಮೋಡದ ಹಿಂಡೊಂದು
ನನ್ನಲ್ಲಿ ಉಸುರಿತ್ತು,
ಹಸಿರ ಹರಿವಾಣದ ಜೊತೆಗೆ
ಭಾವಾಡಗಿತ್ತೀ ನೀ
ಬಿತ್ತಿಹೋದ ಬಕುಳ-ಮಲ್ಲಿಗೆಯ ಘಮಲಿನ
ಗೇಯ ಕಾವ್ಯವೊಂದನ್ನು.
ನನ್ನ ಸ್ಮೃತಿ ಪರಿಧಿಗೇ
ನೇರ ನೇವರಿಸಿಕೊಂಡು ಹೋಗಬೇಕೆಂದೇ
ನೀನರುಹಿದ್ದೆ ಆ ಹಿಮಪುಂಖಗಳಿಗೆ
ಅಲ್ಲವೇ ?
ನದಿಯಂಚಿನ ನಿಚ್ಛಳ ನೀರಲ್ಲಿ
ನೀ ಮಿಂದ ಜ್ಞಾನಧಾರೆ
ನನ್ನಲ್ಲಿಗೂ ಹರಿದು ಬಂದಿತ್ತು.
ಮೊಗೆದುಕೊಂಡ ಆ ತೀರ್ಥವ
ಸೇವಿಸಲೋ?
ಇಡೀ ನನ್ನ ಭಾವಕೋಶಗಳನೆಲ್ಲ
ಬಿಡಿ ಬಿಡಿಯಾಗಿ ಮಿಂದುಕೊಳ್ಳಲೋ?
ಬೊಗಸೆಯೊಳಗೆ ತುಂಬಿಕೊಂಡಿದ್ದ
ಆ ಜೀವ ದ್ರವದ ಒಳಗಲ್ಲೇ
ಹಾಯುತ್ತಿದೆ ನನ್ನೆಲ್ಲ
ವಿಲೋಪ ವಾಂಛೆಗಳು.
ಬನದ ಭಾಷೆ
ಬೀಗಿ, ಕೂಗಿ ಹೇಳುತ್ತಿತ್ತು
ಮೊಗೆದುಕೋ ಮೌನದಲ್ಲಡಗಿರುವ
ಆ ಎಲ್ಲ
ಮಿಲನ ಮಹೋತ್ಸವಗಳ.
ಅವಳದ್ದೇ ಆ ಎಲ್ಲ.
ಆ ಆಜ್ಞೆ ನೀನಿತ್ತ ಆರ್ಡರು ಎಂದು
ಅವು ತಿಳಿಸಲಿಲ್ಲ,
ಅನುಭವವಾಗಿಸಿ ಬಿಟ್ಟು ಹೋಗಿದ್ದವು.
ಅಧೀರನಾಗಿ
ಶರಣುಹೋಗಿದ್ದೆ,
ನಿನ್ನ ಮೋಹದ
ಸೂಜಿಮೊನೆ ತಿವಿತದ ಪುಳಕಕ್ಕೆ.
ಮೆಲ್ಲನೆಚ್ಚರವಾದಾಗ
ಇಡೀ ಕಾನನವೇ ಸ್ಥಬ್ದವಾಗಿ,
ಅದರ ಮೌನವೇ ಮೈವೆತ್ತಿ
ನನ್ನ ಮರ್ದಿಸುತ್ತಿತ್ತು,
ನೀ ಕೊಟ್ಟ ಕಾವಿನೊಳಗಿನ
ವಿಲಾಸವನ್ನು
ನನ್ನ ಮೈಯ್ಯ ಕಣಕಣಕ್ಕೂ
ಇಳಿಸಿ-ತಿಳಿಸಿ ಹೋದವಮ್ಮಾ
ಅಹಾ . . ,
ಜ್ಞಾನವಾಗಿತ್ತು;
ಸಿರಿಗಣ್ಣ ತೇಜವೇ
ಪ್ರಕೃತಿ ನೀನು
ನೇಸರ ನಾನು.
ಈ ಮಧುಬನದ
ಕಾವ್ಯ ಮಂಡಲದೊಳು ಬೆಳಗುವ
ನಿಲ್ಲದ ನಿರಂತ ರಾತ್ರಿಗಳ
ಹುಣ್ಣಿಮೆ ನಾವು.
]]>







ಪದ್ಯ ಖುಷಿ ಕೊಡ್ತು. ಇಷ್ಟ ಆಯ್ತು. ಭಾವಾಡಗಿತ್ತಿ ,ವಿಲೋಪ ವಾಂಛೆ
ಇವೆರಡರ ಪ್ರಯೋಗ ನಾನಿಲ್ಲೆ ನೋಡಿದ್ದು. ಹೀಗೆ ಭಾಷೆಯಲ್ಲಿ ಮಾಡುವ ಹೊಸ ಪ್ರಯೋಗಗಳು ಬರಹದ ಸೊಗಸನ್ನು ಹೆಚ್ಚಿಸಿದಾಗ ಓದಲೊಂದು ಖುಷಿ.
Nanage tiLidante bhaavaDagitti’ annuva prayogavannu `Nisar Ahmed’ avaru eegaagale maaDiddare!
kavana tumbaa channagide maiyyaa,
ittechina kannadada pratinidhika kavanakke ninna maadari tumbaa hondutte.
kavya krushi heege munduvaresu.
naresh..really.. beautiful…feeelings are..!! bhavanegalannu sakatthhagi ilisideeera..nillada niranthara raathrigala hunnime naaavu….!!
ಅದ್ಭುತ ಪರಿಕಲ್ಪನೆ 🙂