ಹೇಮಲತಾ
ಕದಂಬ ಬಾಹುಗಳ ಭಯದ ಬಿಳಲುಗಳು
ಕಪ್ಪಗೆ ನೆರಳುಗಳ ಹಾಸುತ್ತವೆ ಹಾದಿ ಉದ್ದ
ಬದುಕು ಬಂದು ನಿಲ್ಲುತ್ತದೆ ತಿರುವಿಗೆ ಮಿಕಮಿಕ
ಬೇಲಿಯಿಂದೀಚೆ ಕಿತ್ತೊಗೆದ ನೆನಪುಗಳೂ
ವಿಧಿಮಳೆಗೆ ಚಿಗುರಿ
ಇಣುಕುತ್ತವೆ ತೆವಳಿ

ಸೋತ ಕಣ್ಣಿಗೆ ನಿದ್ದೆಯದೂ ಸಾಂತ್ವಾನವಿರುವುದಿಲ್ಲ
ಕಣ್ಣೀರಿಗಂತೂ ಮೊದಲೇ ಕರುಣೆಯಿಲ್ಲ..
ಅನೂಹ್ಯ ಭಾವ ಕಣ್ಣುತೆರೆವಾಗ ಮತ್ತದೆ
ಭಯದ ರೆಪ್ಪೆಗಳ ಪಟಪಟ ಬಡಿತ
ತೂ… ಧೈರ್ಯಬೇಕು ನಿರ್ದಾರಕ್ಕೆ, ನಿಶ್ಚಯಕೆ, ನಿರ್ಲಜ್ಜೆಗೆ..
ಧೈರ್ಯಬೇಕು ಸಾವಿಗಿಂತ ಬದುಕಿಗೆ..
ಕಿವಿಮುಚ್ಚಿ ಕಣ್ಣುಮುಚ್ಚಿ ಬದುಕಿಬಿಡಬೇಕು
ಒಮ್ಮೆ ಸಾವಿನಿಂದ ಎಚ್ಚೆತ್ತು..
ಪೂಟರೆಪೂಟರೆಗಳಲಿ ಅವಿತು ಬಚ್ಚಿಟ್ಟುಕೂಂಡ
ಬಯಕೆಗಳಿಗೆ ರೆಕ್ಕೆ ಕಟ್ಟಿ ಹಾರಿಬಿಡಬೇಕು
ಸೆರಗಿಗಂಟಿದ ಬಿಕ್ಕುಗಳ ಹರಿಯಬಿಡಬೇಕು
ಅರ್ಥವಾಗುವವರೆದುರು
ಕಿವಿಮುಚ್ಚಿ ಕಣ್ಣುಮುಚ್ಚಿ ಬದುಕಿಬಿಡಬೇಕು
ಒಮ್ಮೆ ಸಾವಿನಿಂದ ಎಚ್ಚೆತ್ತು
ಮತ್ತು ಕಟ್ಟಿಕೊಳ್ಳಬೇಕು ಬದುಕು
ಒಂದೇ ಹದತಟ್ಟೋ ನಾಲ್ಕು ಕೈಗಳಿಂದ…
ಅದಕ್ಕೂ ಮೊದಲು ಬುಡಕಡಿದು
ಕಿತ್ತೊಗೆಯಬೇಕು ರುಂಡವಿರದ ಭಯದಬೇರು






ಅತ್ತ್ಯಾಚಾರ, ಅನಾಚಾರಗಳಂಥ ನೀಚತನಗಳ ಬಗ್ಗೆ ಮನ ಮುಟ್ಟುವಂತೆ ಹೇಳಿದ್ದೀರಿ.ಇಷ್ಟ ವಾಯಿತು.
ಧೈರ್ಯಬೇಕು ಸಾವಿಗಿಂತ ಬದುಕಿಗೆ… Yes! Thums up!
ತೂ… ಧೈರ್ಯಬೇಕು ನಿರ್ದಾರಕ್ಕೆ, ನಿಶ್ಚಯಕೆ, ನಿರ್ಲಜ್ಜೆಗೆ..
ಧೈರ್ಯಬೇಕು ಸಾವಿಗಿಂತ ಬದುಕಿಗೆ………
ಹೌದು ಧೈರ್ಯಬೇಕು ಸಾವಿಗಿಂತ ಬದುಕಿಗೆ
ಅಧ್ಬುತ ರಚನೆ ಹೇಮಲತಾರವರೆ ಹೀಗೆ ಮುಂದುವರೆಸಿ
Chennagide. “Seragigantida bikkugala hariyabidabeku” nice
manatattida kaaduva kavite…..nija dhyrya beku saaviginta badukige..very nice poetry……..!
‘ಕಿತ್ತೊಗೆಯಬೇಕು ರುಂಡವಿರದ ಭಯದಬೇರು’ ತುಂಬಾ ಚೆನ್ನಾಗಿದೆ
tumba channagide..tangemma..!
Thanks manjunath,Vidhyashankar,haritha,mmshaik,anil and all mecchidakke
ಕದಂಬ ಬಾಹುಗಳು? “ಕಬಂಧ” ಒಬ್ಬ ರಾಕ್ಷಸ. ರಾಮಾಯಣದಲ್ಲಿ ಬರುವ ಪಾತ್ರ. ಈತ ನಿಗೆ ರುಂಡವಿಲ್ಲ. ಬರೀ ಮುಂದವಷ್ಟೇ ಇದ್ದು ಅತೀವ ಉದ್ದವಾದ ಬಾಹುಗಳಿವೆ. ರಾಮ ಲಕ್ಷ್ಮನರಿಬ್ಬರೂ ಈತ ಬಾಹುಗಳ ಮೇಲೆ ಕುಳಿತು ಅವನ್ನು ತುಂಡರಿಸಿ ಕಬಂಧನ ಶಾಪ ವಿಮೋಚನೆ ಮಾಡುತಾರೆ. “ಕದಂಬ” ಸಾಮ್ರಾಜ್ಯ ಬನವಾಸಿಯನ್ನು ರಾಜಧಾನಿಯಾಗಿ ಮಾಡಿಕೊಂಡು ಆಳಿದ ಕರ್ನಾಟಕದ ಹೆಮ್ಮೆಯ ರಾಜವಂಶ. ದಯವಿಟ್ಟು ಕನ್ನಡದ ನುಡಿಗಟ್ಟುಗಳನ್ನು ಉಪಯೋಗಿಸುವ ಹುಮ್ಮಸ್ಸಿನಲ್ಲಿ ಅರ್ಥವ್ಯತ್ಯಾಸವಾಗದಿರಲಿ.
ನಮಸ್ಕಾರ ಕವಿತೆ ಚೆನ್ನಾಗಿದೆ
Ramesh thanks.
Tappu tiddi salahe needidake anonymous avargu thanks…
ಧೈರ್ಯಬೇಕು ಸಾವಿಗಿಂತ ಬದುಕಿಗೆ…ಇಷ್ಟ ವಾಯಿತು ಕವಿತೆ ಚೆನ್ನಾಗಿದೆ ಹೇಮಲತಾ.