ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಧಾರವಾಡದಲ್ಲಿ ಸಾಹಿತ್ಯ ಕಮ್ಮಟ..

ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆ (ರಿ) ಧಾರವಾಡ

ಸಾಹಿತ್ಯ ಒಂದು ವ್ಯಕ್ತಿತ್ವವನ್ನು ತನ್ಮೂಲಕ ಸಮುದಾಯದ ಒಟ್ಟಂದವನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಾಜದ ಎಲ್ಲ ಅಂಗಗಳು ಶಿಥಿಲಗೊಂಡಿರುವ ಈ ದಿನಗಳಲ್ಲಿ ಬರಹಗಾರರು ತುಂಬ ಎಚ್ಚರಿಕೆಯಿಂದ ತಮ್ಮ ಪ್ರಜ್ಞೆಯನ್ನು ಕಟ್ಟಿಕೊಳ್ಳುವುದು ಇಂದಿನ ತುತರ್ು ಅಗತ್ಯವಾಗಿದೆ. ಒಬ್ಬ ಲೇಖಕನಿಗೆ ಸಾಮಾಜಿಕ ಬದ್ಧತೆ ಇರಲೇಬೇಕು ಎಂಬ ಮಾತು ಸರ್ವ ಕಾಲಕ್ಕೂ ಸಲ್ಲುವಂತಹುದು.

ಈ ನಿಟ್ಟಿನಲ್ಲಿ ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯು ಧಾರವಾಡದ ಬಾಲ ಬಳಗ ಶಾಲೆಯ ಸುಂದರ ಪರಿಸರದಲ್ಲಿ ಇದೇ ತಿಂಗಳ ದಿನಾಂಕ 15 ಮತ್ತು 16 ರಂದು ಎರಡು ದಿನಗಳ ಕಾಲ ಯುವ ಬರಹಗಾರರ ಸಾಹಿತ್ಯ ಕಮ್ಮಟಕ್ಕೆ ತಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತದೆ.

ತಾವು ಗಮನಿಸಬೇಕಾದ ಸೂಚನೆಗಳು

1)      ನೀವು ಬರುವಾಗ ನಿಮ್ಮ ಕಥೆ/ಕವಿತೆಗಳನ್ನು ಜೊತೆಗೆ ತರಬೇಕು.

2)      ನೀವು ಮೆಚ್ಚಿದ ಲೇಖಕರ ಒಂದು ಕವಿತೆ/ಕಥೆ/ಪ್ರಬಂಧವನ್ನು ತರಬೇಕು.

3)      ನಿಮ್ಮ ಜೊತೆ ಒಂದು ಹೊದಿಕೆ, ಎರಡು ಜೊತೆ ಬಟ್ಟೆ ಇದ್ದರೆ ಒಳ್ಳೆಯದು.

4)      ನಿರ್ವಹಣಾ ಶುಲ್ಕವಾಗಿ ಒಬ್ಬ ಶಿಬಿರಾಥರ್ಿಗೆ ರೂ. 200 ನ್ನು ನಿಗದಿ ಪಡಿಸಲಾಗಿದೆ. ಇದರಲ್ಲಿ ಎರಡು ದಿನಗಳ ಊಟ ಮತ್ತು ವಸತಿ ವ್ಯವಸ್ಥೆ ಸೇರಿದೆ.

ನಿಮ್ಮ  ಆಗಮನಕ್ಕಾಗಿ ನಾವು ಕಾತರದಿಂದ ಕಾಯುತ್ತೇವೆ.

ನಿಮ್ಮ ಪ್ರಯಾಣ ಸುಖಕರವಾಗಲಿ

ಮಾಹಿತಿಗಾಗಿ ಸಂಪಕರ್ಿಸಿ;

ಸೂರ್ಯಕಾಂತ್- 9902865762

ಗಂಗಾಧರ ಬಡಿಗೇರ- 7795687703

 

 

‍ಲೇಖಕರು avadhi

13 October, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading