ನೆನ್ನೆ (೫ನೇ ಫೆಬ್ರುವರಿ) ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಹಿಳಾ ಸಮಾಜದಲ್ಲಿ ಕವಿಗೋಷ್ಟಿ ಆಯೋಜಿಸಲಾಗಿತ್ತು. ೨೪ ಕವಿಗಳು ಅದರಲ್ಲಿ ಭಾಗವಹಿಸಿದ್ದರು. ಬಹಳ ಕುತೂಹಲದಿಂದ ಅಲ್ಲಿಗೆ ಹೋಗಿದ್ದೆ.
೨-೩ ಕವಿ(ತೆ)ಗಳನ್ನು ಹೊರತು ಪಡಿಸಿದರೆ ಮಿಕ್ಕಿದವರೆಲ್ಲ ಬರೀ ತೌಡು ಕುಟ್ಟಿದ್ದೇ. ಎತ್ತ ಸಾಗುತ್ತಿದೆ ನಮ್ಮ ಕಾವ್ಯ ಕೃಷಿ ಎಂದೆನಿಸಿತು. ಹಿಂದೆ ಬೇಂದ್ರೆ ಯವರು ಕನ್ನಡದ ಇನ್ನೊಬ್ಬ ಕವಿಗೆ ಹೇಳಿದ ಮಾತುಗಳು ಜ್ಞಾಪಕಕ್ಕೆ ಬಂತು “ನೀ ಹೀಂಗ ಪದ್ಯ ಬರಕೋತ ಹೋಗು ಅಂದ್ರ ನಿನ್ನ ಗದ್ಯ ಸುಧಾರಸತದ”






ಸಂಗೀತ ಪ್ರಧಾನವಾದ ಕಾವ್ಯ ಹುಟ್ಟುತ್ತಾ ಇಲ್ಲ ನಿಜ. ಭಾವನೆಗಳನ್ನು ಅನಾವರಣಗೊಳಿಸಲು ಪದಗಳ ತೋರಣ ಕಟ್ಟುವುದು ನಡಿಯಲಿ ಅಲ್ಲವೇ ? . ಮುಂದೊಂದು ಬದಲಾವಣೆಯ ಪರ್ವದಲ್ಲಿ ಇವುಗಳೆಲ್ಲಾ ಕವನ ವಾಗ ಬಹುದು. ಮನಸ್ಸಿಗೆ ಬಂದದ್ದು ಬರೆಯಲಿ ಅದರೆ ನಾಜೂಕಾಗಿ ಇರಲಿ ಅಲ್ಲವೇ?
ಮನಸ್ಸಿಗೆ ಬಂದದ್ದನ್ನೆಲ್ಲ ಬರೆದರೆ ಅದು ಕವನ ಹೇಗಾದೀತು? ಸಾಹಿತ್ಯದ ಇತರ ಪ್ರಕಾರಗಳೂ ಇವೆ…..ಅವುಗಳಲ್ಲಿ ಯಾವುದಕ್ಕಾದರೂ ಹೊಂದಿಕೆಯಾಗಬಹುದೇನೋ..ಕವನವೆಂದರೆ ಅದು ಕೇವಲ ಸಂಗೀತ ಪ್ರಧಾನವಾಗಿರಬೇಕೆಂದೇನೂ ಇಲ್ಲವಲ್ಲ….
ಸರಿ , ಒಪ್ಪ ತಕ್ಕ ವಿಚಾರ. ಪ್ರಕಾರದಲ್ಲಿ ಭಾಗಿಯಾಗದ್ದನ್ನು ಕವನ/ಕಾವ್ಯ ಅಂಥ ಕರೆಯದೇ ಬೇರೆಯಾಗಿ ಗುರುತಿಸುವ ಪ್ರಯತ್ನ ನಡೆಯಬೇಕೇನೊ?. ಇಂದು ಕವನ (ರಚಿಸುವವರ ಹಾಗೂ ) ಆಸ್ವಾದಿಸುವವರ ಸಂಖ್ಯೆ ಕಡಿಮೆಯಾಗಿರುವುದು, ಸಾಹಿತ್ಯ ಪ್ರಕಾರದಲ್ಲಿ ಮುಳುಗಿ ಕವನ ರಚಿಸದೇ ಮನಬಂದಂತೆ ಬರೆದಿರುವುದೆ ಕಾರಣವೆ?. ನಮ್ಮ ಕವನ ಸಾಹಿತ್ಯವನ್ನು ಪೋಷಿಸುವುದು ಹೇಗೆ?. ಕವನ ತನ್ನ ಇರುವಿಕೆಯಿಂದ ತನ್ನನ್ನು ಕಾಯ್ದುಕೊಳ್ಳುತ್ತದೆಯೇ?.