ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದ್ವೇಷದ ಜ್ವಾಲೆ ಹಾಗೆ ತಣಿಯುವ ಮಾತೇ ಇಲ್ಲ

ದ್ವೇಷದ ಜ್ವಾಲೆ

ಡಾ ಪ್ರತೀಭಾ ಕಾಗೆ


ಕಾದ ಕಬ್ಬಿಣದ ಸರಳು
ಅದು ಬಿಳುತ್ತಲೇ ನೀರಿಗೆ
ಚುರ್ ಎನ್ನುವದು
ಅದಕ್ಕೊ ಅದ್ಯಾವ ಬೇನೆಯೊ
ಒಂದೆ ಸಮನೆ ಅತ್ತಿಂದಿತ್ತ
ಹೊರಳಾಡುತಿಹುದು
ಕೆಂಡದಂತ ತಾಪ
ಮೈ ಮನವೆಲ್ಲ
ಕುದಿಯುತಿಹುದು ದ್ವೇಷದ
ಬೆಂಕಿಯ ಜ್ವಾಲೆಯದು
ತಣ್ಣಗಾಗುವ ಮಾತು
ಆಡದು ಅದ್ಯಾವ ದ್ವೇಷವೋ
ಜನಾಂಗಿಯ ನಿಂದನೆಯೋ
ಒಟ್ಟಿನ ಮೇಲೆ
ನಾಗರಹಾವಿನಂತೆ ಭುಸುಗುಟ್ಟುತಿಹುದು.
ಅದಕ್ಕೋ ಚಿಕ್ಕವರು ,ದೊಡ್ಡವರು
ಏನು ಅರಿಯದ ಕಂದಮ್ಮಗಳು
ಯಾವುದೇ ಭೇದವಿಲ್ಲ
ಕಂಡ ಕಂಡವರ ಮೇಲೇ
ಕೆಂಡಕಾರುತಿಹುದು.
ರಕ್ತಸಿಕ್ತವಾದ ದೇಹಗಳು
ಕೆಲವೊಮ್ಮೆ ರಾಶಿ
ಹೆಣಗಳು ಆದರೂ
ದ್ವೇಷದ ಜ್ವಾಲೆ ಹಾಗೆ
ಕುದಿಯುತಿಹುದು
ತಣಿಯುವ ಮಾತೇ
ಇಲ್ಲ.
 

‍ಲೇಖಕರು G

12 July, 2015

2 Comments

  1. noorullathyamagondlu

    ಕವಿತೆಯಲ್ಲಿ ದ್ವೇಷದ ಅನಾಹುತಗಳನ್ನು ಕಾಣಬಹುದು. ಆದರೆ ಕಾದ ಕಬ್ಬಿಣದ ಸರಳು ತಣಿಯುವ ಮಾತೇಯಿಲ್ಲ ಎಂದಿರುವುದು ಸಮಂಜಸವಲ್ಲ ಎನಿಸುತ್ತದೆ. ದ್ವೇಷವನ್ನು ಕಾದಕಬ್ಬಿಣಕ್ಕೆ ಹೋಲಿಸಿರುವುದು ಸರಿಯನಿಸಿದಾಗ ಕಾದ ವಸ್ತು ತಣ್ಣಗಾಗಬೇಕಾದುದು ಆಶಾವಾದವಾದದು.ಇದು ಕವಿತೆಯ ಉದ್ದೇಶವೂ ಆಗಬೇಕು.

  2. pratibha kage

    ಕಾದ ವಸ್ತು ತಣ್ಣಗಾಗಬೇಕೆಂಬುದು ಆಶಾವಾದ ಹಾಗೇಯೆ ಮುಂದೊದುದಿನ ಆಗಬಹುದೆನೋ ಆದರೆ ಸಧ್ಯದ ಸ್ಥಿತಿಯನ್ನು ನೊಡಿದರೆ ಬೇಗನೆ ತಣ್ಣಗಾಗುವ ಹಾಗೆ ಕಾಣುತ್ತಿಲ್ಲ ಅದಕ್ಕೆ ಆ ಪದ ಬಳಸಿದ್ದು ಸಮಂಜಸವಲ್ಲವೆಂದರೆ ಪದವನ್ನು ತೆಗೆದು ಹಾಕಬಹುದು.ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading