ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೊಡ್ಡವರ ಸಾವಿಗೇನಿದ್ದರೂ ಪುಟದ ಮೇಲಿನ ಜಾಗ..

 ⁠⁠⁠ಶ್ರದ್ಧಾಂಜಲಿ

sutarya c malayalam

ಮಲಯಾಳಂ ಮೂಲ- ಸುತಾರ್ಯ ಸಿ.

kajoor sathish

ಕನ್ನಡಕ್ಕೆ- ಕಾಜೂರು ಸತೀಶ್

ತೀರಿಕೊಂಡವರು ನವ ವಧುವಾಗಿದ್ದರೆ
ಮದುವೆ ಆಲ್ಬಮ್ಮಿನಿಂದ ಒಂದು ಸುಂದರವಾದ ಚಿತ್ರ.
ಮಗುವಾಗಿದ್ದರೆ
ಹುಟ್ಟುಹಬ್ಬದ್ದು
ಅಥವಾ ಆಟವಾಡುವಾಗ ತೆಗೆದದ್ದು.
ಇಪ್ಪತ್ತು, ಮೂವತ್ತರ ಪ್ರಾಯದವರಾಗಿದ್ದರೆ
ಪಾಸ್ಪೋರ್ಟಿನ ಅಥವಾ ಐಡಿ ಕಾರ್ಡಿನ
ಕಪ್ಪು-ಬಿಳುಪು ಅಥವಾ ಬಣ್ಣದ ಚಿತ್ರ
ಪತ್ರಿಕೆಯಲ್ಲಿ ಅಚ್ಚಾಗುತ್ತದೆ.

ಪ್ರತಿಯೊಬ್ಬರಲ್ಲೂ ಹೀಗೆ ಅಳಿಸಲಾಗದ ನಗುವಿನ ಕ್ಷಣಗಳು
ಉಳಿದುಬಿಟ್ಟಿರುತ್ತವೆ ಚಿತ್ರಗಳಲ್ಲಿ.

hanging photos

ದೊಡ್ಡವರ ಸಾವಿಗೇನಿದ್ದರೂ ಪುಟದ ಮೇಲಿನ ಜಾಗ.
ಮಿಕ್ಕವರು ಪುಟದ ಇಷ್ಟಿಷ್ಟೇ ಸಣ್ಣ ಜಾಗದಲ್ಲಿ.

ಯಾರೂ ಕೇಳಿಸಿಕೊಳ್ಳಲಾಗದ ರಹಸ್ಯ ಹೇಳುತ್ತಾರೆ.
ಅವರ ಕಣ್ಣಗುಡ್ಡೆಗಳು ಓದುಗರ ದಿಟ್ಟಿಸಿ
ಕ್ಯಾಕರಿಸಿ ಉಗಿಯುತ್ತವೆ.
ನಾನೂ ನೀನೂ ಪುಟ ತಿರುಗಿಸಿ ಸುದ್ದಿಯನ್ನೋದುವಾಗ
ನಮ್ಮ ಸಾವಿಗಿರುವ ಅಂತರ ಒಂದು ನಿಮಿಷದಷ್ಟು ಕಡಿಮೆಯಾಗುತ್ತದೆ.
ನಮ್ಮಿಬ್ಬರಿಗಾಗಿ ಯಾರೋ ಎಲ್ಲೋ
ಇಷ್ಟು ಜಾಗವನ್ನು ಮೀಸಲಿಟ್ಟು
ಶ್ರದ್ಧಾಂಜಲಿ ಬರೆಯಲು ತೊಡಗುತ್ತಾರೆ.

 

‍ಲೇಖಕರು admin

31 March, 2016

2 Comments

  1. smitha

    Olledide mestre

  2. KOODAKANDI PREETHU RAJEEV

    ನೀರಿನಂತೆ ಸರಾಗವಾಗಿ ಹರಿದಿದೆ ಕವಿತೆ,ಸರಳ ಸುಂದರವಾಗಿ ಮೂಡಿ ಬಂದಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading