ಪ್ರೀತಿಯ ಸೆಲೆ

ನಾ ದಿವಾಕರ್
ಮನದ ಚೂರುಗಳು
ಹೃದಯದ ತುಣುಕುಗಳೊಡನೆ
ಬೆರೆತಾಗ ಸುಳಿದುಹೋಗುವ
ಅಲೆಗಳೇ ಪ್ರೀತಿ !
ನೆಳಲು ಬಿಸಿಲಿನ ನಡುವೆ
ಹೊಯ್ದಾಡುವ
ನೆರೆದ ಹಸಿರೆಲೆಗಳ ಸದ್ದು
ಹೃದಯದ ಪ್ರೀತಿಯ ಬಡಿತ !
ಮೌನ ಮಾತುಗಳ
ನಡುವೆ ಸರಿದು ಹೋಗುವ
ಭಾವನೆಗಳು
ಸುಪ್ತ ಪ್ರೀತಿಯ ಸೆಲೆಗಳು !
ಕಂಗಳ ನೋಟಕ್ಕೂ
ಕರುಳ ಮಿಡಿತಕೂ
ಇರುವ ಅಂತರವೇ
ಪ್ರೇಮಾಂಕುರದ ನೆಲೆ !
ದೇಹ ಆತ್ಮಗಳ ನಡುವೆ
ನೆಟ್ಟು ನವಿರಾಗುವ
ಅಂತರಂಗದ ಅಲೆಗಳೇ
ನೈಜ ಪ್ರೀತಿಯ ಅಂತಃಸತ್ವ !





nice,,very nice!