ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದುನಿಯಾ ಸಾಕೆನಿಸುತ್ತದೆ ಗೆಳತಿ..

ಗೆಳತಿಗೊಂದು ಪತ್ರ..

ನವೀನ ಸೊರಬ

ದೆಹಲಿಯ ಮರಗಟ್ಟಿದ ಮುಂಜಾನೆ
ಮುಸುಕಿದ್ದು ಮಂಜಲ್ಲ ಕಣೇ
ಇಲ್ಲಿ ಎಲ್ಲಿ ನೋಡಿದರಲ್ಲಿ
ಜನಗಳು
ದಕ್ಷಿಣದ ಹುಡುಗಿಯರು ಇಲ್ಲಿ
ಸಿಗುವುದಿಲ್ಲ, ಮೋಟು ಕರ್ಲಿ
ಕೂದಲಿನವರು ಕಾಣುವುದೇ ಇಲ್ಲ ಗೆಳತಿ.

ಕರೋಲ್ ಭಾಗಿನ ಇಕ್ಕೆಲದಲ್ಲೂ
ಭಾಯಿ-ಬೆಹೆನ್ ಗಳ ವ್ಯವಹಾರಗಳು
ಅಲ್ಲಲ್ಲಿ ಬಿಹಾರಿಗಳ ಚೌಕಾಶಿಗಳು
ಅರ್ಜೆಂಟಿಗೆ ರಸ್ತೆಯಲ್ಲೇ
ಕೈಮುಗಿಯಲು ಮಂದಿರಗಳು.

ಇಲ್ಲಿ ಪಾರ್ಕಿನಲ್ಲಿ ಜನಗಳು
ಏದುಸಿರು ಬಿಡುತ್ತಾರೆ- ಮಂಜಲ್ಲದ
ಮಂಜಿನಲ್ಲಿ ಮುದುಕರು
ಜೋರಾಗಿ ಹರಟುತ್ತಾರೆ
ಡಿಸೆಂಬರ್ ಮೊದಲ ವಾರದಿಂದ
ಯುವ ಜೋಡಿಗಳಿಗೆ ಹಬ್ಬ
ಪುಸ್ತಕಕ್ಕೂ ಚಳಿಯಾಗುತ್ತದೆ ಗೆಳತಿ
ಅದಕ್ಕೂ ಸ್ವೆಟರ್ ತೊಡಿಸಬೇಕು.

ಪರಾಟಗಲ್ಲಿಯ ವಾಸನೆ ಅರಸುತ್ತ
ಉಪ್ಪಿನಕಾಯಿ ಜೊತೆಗೆ ರಾಯ್ತಾ ಬಯಸುತ್ತ
ಸುತ್ತುವರೆಯುತ್ತವೆ ಆಮ್ ಆದ್ಮಿಗಳು
ಮಫ್ಲರ್ ಕೊಡವುತ್ತ
ಚಪ್ಪರಿಸುತ್ತವೆ ರಿಕ್ಷಾವಾಲಾಗಳು.

ತೂಕಹಾಕಿ ಅಳೆದು ಆಡುವ
ನನ್ನ ಹಿಂದಿ ತಡವರಿಸುತ್ತದೆ
ಭಾಯಿಗೆ ಅರ್ಥವಾಗುವಷ್ಟರಲ್ಲೇ
ಪರಾಟ ಕರ್ರಗೆ ಸೀದಿರುತ್ತದೆ
ಅಂದಾಜಿನಲ್ಲಿ ಹೊಟ್ಟೆ ತುಂಬಿಸಿಕೊಂಡು
ಹೋಗುವಷ್ಟರಲ್ಲಿ ದುನಿಯಾ ಸಾಕೆನಿಸುತ್ತದೆ ಗೆಳತಿ.

‍ಲೇಖಕರು admin

3 January, 2017

1 Comment

  1. Anand

    beautifully captured

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading