ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದುಃಖಕ್ಕೆಯಾವುದೇ ಭಾನುವಾರವಿಲ್ಲ..

ಹಿಂದಿಯ ಪ್ರಸಿದ್ಧ ಕವಿಗಳಾದ

ಚಂದ್ರಕಾಂತದೇವತಾಲೆಯವರ ಕವಿತೆಗಳು

‘ಪತ್ಥರ್ ಫೇಂಕ್ರಹಾ ಹೂಂ’ ಈ ಕೃತಿಗೆ ಈ ಸಾಲಿನ ಕೇಂದ್ರ ಸಾಹಿತ್ಯಅಕಾಡೆಮಿ ಪುರಸ್ಕಾರ ಬಂದಿದೆ.

ಇದರ ಅನುವಾದಿತ ಕೃತಿ ‘ಕಲ್ಲೆಸೆಯುತ್ತಿದ್ದೇನೆ’

 

 
 
 
ಅನುವಾದ – ಸಿ ವಿ ಶೇಷಾದ್ರಿ ಹೊಳವನಹಳ್ಳಿ

ದುಃಖಕ್ಕೆಯಾವುದೇ ಭಾನುವಾರವಿಲ್ಲ

 
ಪ್ರೇಮಕ್ಕೆ ಹೇಗೋ ಹಾಗೇ ದುಃಖಕ್ಕೂಯಾವುದೇ ಭಾನುವಾರವಿಲ್ಲ .
ತಥಾಗತನೇಇದೇನು ನಿನ್ನಕೃಪೆಯಿಂದಆಗಿದೆಯೇ..?
ಒಂದು ವೇಳೆ ಹೀಗಾಗಿದ್ದರೆ
ಬೇರೊಬ್ಬನು ಬೆಟ್ಟವನ್ನೊಅಥವಾಕಲ್ಲನ್ನೊ ನೋಡುವಂತೆ
ದುಃಖವನ್ನು ನಮ್ಮಿಂದ ಪ್ರತ್ಯೇಕವಾಗಿ ನೋಡುವಂತಹ ತಿಳುವಳಿಕೆ
ನಿನ್ನಲ್ಲಿಇತ್ತಲ್ಲ..ಅದನ್ನುಎಲ್ಲರಿಗೂ ಏಕೆ ಸಮನಾಗಿ ನೀಡಲಿಲ್ಲ..?
ಯಾರೇ ಆಗಲಿ ಬೆಟ್ಟದಿಂದಅಥವಾಕಲ್ಲಿನಿಂದ
ತಮ್ಮ ಹಣೆ ಚಚ್ಚಿಕೊಳ್ಳುವುದು ಬಯಸುವನೇ..?
ಬುದ್ಧನೇ..ಇದೇರೀತಿ ನೀನು ದುಃಖದಿಂದ ಬಚಾವಾಗಿಬಿಟ್ಟೆ.
ಆದರೆಅದನ್ನುಇಲ್ಲವಾಗಿಸಲಿಲ್ಲ.
ನಿನಗೆ ಏನು ಹೇಳಬೇಕಾಗಿತ್ತೋ ಹೇಳಿಬಿಟ್ಟೆ.
ಆದರೆದುಃಖವು ನಮ್ಮನ್ನು ಒಳಗೊಳಗೇ..ತಿರುವುತ್ತದೆ , ಮಥಿಸುತ್ತದೆ ಮತ್ತುಚಿವುಟುತ್ತದೆ.

ನಿನ್ನ ನೆರಳ ಅನುಯಾಯಿಗಳು ಕೆಲವರು ಈಗಲೂ ಇದ್ದಾರೆ.
ಅವರಿಗೆದುಖವುಅಗಸಗಿತ್ತಿಯಂತೆಅಥವಾರೆಪ್ಪೆಗೂದಲಿನಂತೆ ಕೆಲಸ ಮಾಡುತ್ತದೆ.
ಮತ್ತುಅವರೆಲ್ಲ ಬೆಳ್ಳಗೆ ತೊಳೆದ , ಹೊಳೆಯುವ ದರ್ಪ ಹಬ್ಬಿಸಿ
ದುಃಖದಜಾಹೀರಾತಿನ ಕೆಲಸದವರಂತೆಕಾಣುತ್ತಾರೆ.
ಆದರೆ..ಮಹಾರಾಜರೇ ನಾವೆಲ್ಲಿ ಹೋಗೋಣ..?
ದುಃಖವು ನಾಲ್ಕೂ ಕಡೆಯಿಂದ ಮುತ್ತಿಎರಗುತ್ತದೆ.
ಗಾಳಿ ಮತ್ತು ಬಿಸಿಲು ತೂರಿ ಬರುವಎಲ್ಲ ಕಿಂಡಿಗಳಿಂದ
ಎಲ್ಲವನ್ನೂ ತಳ್ಳಿ ದುಃಖವು ಮೊದಲುತೂರಿ ಬಂದು ಹೆದರಿಸುತ್ತದೆ.
ಏನೇನು ಮಾಡುವುದಿಲ್ಲ ಅದು..?
ಕುತ್ತಿಗೆ ಹಿಸುಕುತ್ತದೆ.
ಉಸಿರುಗಳು ಒದ್ದೆಯಲ್ಲಿ ಮತ್ತು ಹೊಗೆಯಲ್ಲಿದೇಕುತ್ತವೆ.
ಮನೆಯ ನೆರಳು ಎಷ್ಟು ಮಲಿನ ಮತ್ತುದಯನೀಯವಾಗುತ್ತದೆಎಂದರೆ
ನಿನ್ನ ಶಾಂತ ಪ್ರತಿಮೆ ಆಗಾಗ ಕರುಣೆಯಿಂದ ,ಕಾತರದಿಂದಕಾಣುವ. ಜೊತೆಗೆಕರಗುತ್ತಿರುವಂತೆಯೂತೋರುತ್ತಿರುವ – ಆ ಕತ್ತಲಲ್ಲಿ ಇಡೀಜೀವನ ಬೆರೆತುಹೋಗುತ್ತದೆ.
 
 

ಹೊಸ ನಾಣ್ಣುಡಿ

ಈಗ ಒಂದುಒರೆಯಲ್ಲಿ
ಅನೇಕ ಕತ್ತಿಗಳು ಮನಸೋ ಇಚ್ಛೆ ಮತ್ತು
ವಿಶ್ವಾಸದಿಂದಇರುತ್ತವೆ.
ಇದನ್ನು ಸಮನ್ವಯ, ಬಹುವಚನ ಇತ್ಯಾದಿ ಹೇಳಿಕೊಂಡು
ಸಂತೋಷಪಡಬಹುದಾಗಿದೆ.
ಮತ್ತುಇದರಅಪಾಯಕಾರೀ – ನಿಂದನೀಯ ವ್ಯಾಖ್ಯೆಗಳ ಸಂಭವ ಬಹಳವಿದೆ.
 
ಒರೆಯ ಬಳುಕಾಟ ಮತ್ತು ಸಾಮಥ್ರ್ಯದ ಬಗ್ಗೆ
ಏನೇ ಆಗಲಿ ಮಾತಾಡುವುದು ಈ ಸಮಯದಲ್ಲಿಉಚಿತವಲ್ಲ.
ಆದರೆ..
ಒಂದುಒರೆಯಲ್ಲಿಇಟ್ಟ ಈ ಕತ್ತಿಗಳಿಗೆ ಹೋಲಿಸಿದರೆ
ವೇಶ್ಯೆಯರ ಹಾಸಿಗೆಗಳ ಕೆಳಗೆ ಬಚ್ಚಿಟ್ಟುಕೊಂಡಿರುವ
ಹಳೆಯ ಮೊಂಡು ಚಾಕುಗಳೆಷ್ಟೊ ನಿಜವಾಗಿಚೂಪಾಗಿರುವಂತೆಕಾಣುತ್ತವೆ.
ಈ ಕತ್ತಿಗಳಿಂದ
ರಕ್ತದ ಬೀಜಗಳನ್ನು ಬಿತ್ತುವಂತಾಗಲೀ
ಮತ್ತು ಅವುಗಳ ತಿಕ್ಕಾಟದಿಂದಗರ್ಭಪಾತವಾಗಲೀ ಸಂಭವವಿಲ್ಲ.
ಹೌದು !ಒಂದುಒರೆಯಲ್ಲಿ ಅನೇಕ ಕತ್ತಿಗಳು ಇರುತ್ತವೆ ಎಂಬ ಈ ಹೊಸ ನಾಣ್ಣುಡಿ ಅಸ್ತಿತ್ವಕ್ಕೆ ಬಂತು.
ಆದರೆಯಾರುಯಾರಿಗೆ ಎಷ್ಟೆಷ್ಟು ನಾಚಿಕೆತರುವಂಥದ್ದುಎಂಬುದುಯೋಚಿಸುತ್ತಲೇಇರಬೇಕಾದ ವಿಷಯವಾಗುವುದು.
ನಿಸ್ಸಂದೇಹವಾಗಿ ಹೂದಾನಿ ಹಾಗೂ ಲೇಖನಿಡಬ್ಬಗಳಿಗೆ ಪಯರ್ಾಯವಾಗಿ
ಒರೆಯನ್ನುಕೂಡ ಇಟ್ಟುಕೊಳ್ಳಬಹುದಾಗಿದೆ.
ಆದರೆ ಈ ಪ್ರಯತ್ನದಲ್ಲಿ ಗೆಳೆತನ ಮತ್ತುದ್ವೇಷ ಇವುಗಳ ವ್ಯತ್ಯಾಸದಅರಿವು ಮರೆಯಾಗಿರುತ್ತದ
 

‍ಲೇಖಕರು G

27 January, 2013

1 Comment

  1. mmshaik

    dhannyavaadagaLu..!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading