ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೀಪಾವಳಿ ಹಬ್ಬದ ತಿಂಗಳಿಗೆ ಮುಂಚೆ ಅಮ್ಮನಿಗೆ ಚಿಂತೆ..

ಚೈತ್ರಾ ಸಂತೋಷ್

ದೀಪಾವಳಿ ಹಬ್ಬದ ತಿಂಗಳಿಗೆ ಮುಂಚೆ ಅಮ್ಮನಿಗೆ ಚಿಂತೆ: ಪರ್ಬ ಬಂತಲ್ಲಾ ಮಗ, ಒಂದು ಬಾಳೆಗಿಡದಲ್ಲೂ ಗೊನೆ ಬಿಟ್ಟಿಲ್ಲ ಅಂತ.

ಒಮ್ಮೊಮ್ಮೆ ಬಾಳೆಗಿಡ ನೆಡುವಾಗಲೇ ಮುಂದಿನ ಪರ್ಬದ ಹೊತ್ತಿಗೆ ಇದು ಗೊನೆ ಬಿಡಲಿ ಎಂದು ದೇವರಿಗೆ ಪ್ರಾರ್ಥಿಸುತ್ತಿದ್ದಳು. ಯಾಕೆಂದರೆ ಬಾಳೆಗಿಡ ಗೊನೆ ಬಿಡುವಾಗಲೇ ಮಂಗಗಳಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತಿತ್ತು.

ಒಟ್ಟಿನಲ್ಲಿ ದೀಪಾವಳಿ ಬಂದರೆ ಬಾಳೆ ಗೊನೆಗಳನ್ನು ತಂದು ಅಟ್ಟದ ಮೇಲೆ ನೇತು ಹಾಕುವುದು ಅಥವಾ ಅಡಿಗೆ ಮನೆಯಲ್ಲಿ‌ ನೇತುಹಾಕುವುದು…ಅದು ಹಬ್ಬದ ದಿನಕ್ಕೆ ಹಣ್ಣಾಗಬೇಕು.

ಒಂದು ವೇಳೆ ನಮ್ಮ ತೋಟದಲ್ಲಿ ಗೊನೆ ಇಲ್ಲವೆಂದರೆ ಊರು, ಅಂಗಡಿಗಳಿಗೆ ಅಲೆದಲೆದು ಹೇಗೋ ಬಾಳೆಗೊನೆ ತಂದು ಹಬ್ಬಕ್ಕೆ ವಾರ ಮೊದಲು ನಮ್ಮ ಕೈಗೆ ಸಿಗದ ಹಾಗೆ ಮೇಲಕ್ಕೆ ನೇತುಹಾಕುತ್ತಿದ್ದಳು. ಹಬ್ಬದ ದಿನ ಆ ಗೊನೆ ಕೈಗೆಟುಕುವಂತೆ ಮಾಡುತ್ತಿದ್ದಳು.

ಇದೊಂದು ತರ ಚಂದ, ಸಂಭ್ರಮ. ಹಬ್ಬದ ಖುಷಿಯಲ್ಲಿ ಮನೆತುಂಬಾ ಜನ, ನೆಂಟರು..ಎಲ್ಲರೂ ಮನೆಯಲ್ಲಿ ಓಡಾಡಿಕೊಂಡು ಒಂದೊಂದೇ ಕಿತ್ತು ತಿನ್ನುವುದು…

ಇಂದು ಚಾಮರಾಜನಗರದ ದೀನಬಂಧು ಮನೆಯಲ್ಲಿ ಹೀಗೆ ನೇತುಹಾಕಿದ್ದು ನೋಡಿದಾಗ ಇಷ್ಟೆಲ್ಲಾ ನೆನಪಾಯಿತು.

‍ಲೇಖಕರು Admin

24 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading