ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ದಾರಿಯೂದ್ದಕೂ ನೂರಾರು ದರ್ಪಣಗಳು…’ – ಪ್ರತಿಭಾ ಕವಿತೆ

ಜಗದ ಗುಡಿಯೊಳು

ಡಾ ಪ್ರತಿಭಾ ಸಂಜೀವ ಕಾಗೆ

ದಾರಿಯೂದ್ದಕೂ ನೂರಾರು
ದರ್ಪಣಗಳು,ಮುಖ ನೋಡಲಾರದಷ್ಟು
ಧಾವಂತ.
ಹೆಜ್ಜೆಹೆಜ್ಜೆಗೂ ಮೂಡುತಿಹವು
ರಕ್ತದ ಕಲೆಗಳು
ಆಧುನಿಕ ಜಗತ್ತಿನ ಒಂದು
ಗುರುತಾಗಿ,
ಕತ್ತಲು, ಬೆಳಕು ಒಂದೆ ಸಮನಾಗಿ
ತೋರುತಿಹವು ಮನದಲಿ
ದ್ವೇಷದ ಕತ್ತಲೆ ಆವರಿಸಿರುವಾಗ.
ಬೆಂಕಿ ಸುಡಲೊಪ್ಪದಂತೆ
ಮನದ ಬೆಂಕಿ ಪ್ರಜ್ವಲಿಸಿತಿರುವಾಗ.
ಗತ್ತಿನಿಂದ ತಿರುಗುತಿಹರು

ಈ ಜನ
ಗೋತ್ತಿದ್ದೋ, ಗೋತ್ತಿಲ್ಲದೆಯೋ
ತಪ್ಪುಗಳ ಮಾಡುತ
ಸಾತ್ವಿಕ ಮನದ ಮನುಜ
ಹುಚ್ಚನಂತಾಗಿಹನು.
ರಾಜಸ್ಸೇ ತುಂಬಿರುವ
ಜಗದ ಗುಡಿಯೋಳು.
 

‍ಲೇಖಕರು G

19 November, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading