ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಾರಿಗೆ ಗಾಜಿನ ಚೂರುಗಳೆಸೆದ ಕೈಗಳೇ..

ಮರೆಯಲ್ಲಿ ನಿಂತು

– ಸಿ ವಿ ಶೇಷಾದ್ರಿ, ಹೊಳವನಹಳ್ಳಿ

ಮರೆಯಲ್ಲಿ ನಿಂತು

ದಾರಿಗೆ ಗಾಜಿನ ಚೂರುಗಳೆಸೆದ ಕೈಗಳೇ

ಏನಾದವು ನೀವು ಬಿಡಿಸಿದ ಹೂಗಳು ?

ತುಂಬು ಮೆರವಣಿಗೆಗೆ

ಬಾಂಬೆಸೆದ ಬುಟ್ಟಿಗಳೇ

ಏನಾದವು ನೀವು ಕಂಡ ಹಣ್ಣುಗಳು ?

 

ಮರೆಯಲ್ಲಿ ನಿಂತು ನಿಂತು

ತಪ್ಪಿತು ಹೂ ಹಣ್ಣುಗಳ ಸಹವಾಸ.

ನಡೆದಿತ್ತೊ ನಡೆದಿರಲಿಲ್ಲವೋ

ಮರುಕಳಿಸಿತು ಇತಿಹಾಸ

 

ನಾನೊಬ್ಬನೆ ದೇವರೆಂದ

ಹಿರಣ್ಯಕಶಿಪುವನ್ನು ಕೂಡ ಚೀಪಿತು ಸಾವು.

ಕಂಸ ಕೂಡ ಆದ ಧ್ವಂಸ.

ರಾಜ ಮಹಾರಾಜರುಗಳಿಗೆ

ಮುಳುವಾಯಿತು ತಮ್ಮದೇ ಆಜ್ಞೆ.

ದೇವದೂತ ಸಂತರುಗಳಿಗೆ

ತಿರುಗುಬಾಣವಾಯ್ತು ತಮ್ಮದೇ ಪ್ರಜ್ಞೆ.

 

ಮರೆಯಲ್ಲಿ ಕೂಪ ಮಂಡೂಕ ಕುಣಿತ.

ಈಚೆ ಬಂದರೆ ಸಾಗರ ಸೆಳೆತ.

ಬನ್ನಿ ಬಿಂಧುಗಳೇ ಸಿಂಧುವಾಗಿ

ಮಿಂಚು ಮಿಂಚುಗಳ ಸೇರಿಸಿ

ಕತ್ತಲಿಗೆ ಸವಾಲಾಗಿ.

]]>

‍ಲೇಖಕರು G

8 August, 2012

1 Comment

  1. mmsahaik

    sheshadri avare uttama kavana

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading