ವಿದ್ಯಾಶಂಕರ್ ಹರಪನಹಳ್ಳಿ
ದಾಂಪತ್ಯದಲಿ
ಸಾಂಗತ್ಯವೆಂದರೆ,
ಭಾನುವಾರ ಉಪಹಾರಕೆ
ಅವಳ ಮಾಡು ಪಲ್ಯಕ್ಕೆ
ನೀವು ತರಕಾರಿ ಹೆಚ್ಚುವುದು…
ಅವಳ ಅಡಿಗೆಗೆ
ಪರವಶವಾಗುವುದು….
ಒಂದಿಷ್ಟು ಜಾಸ್ತಿ ದುಡಿದು
ಅವಳಲ್ಲಿ ಬೆರಗು, ಕಾಳಜಿ ಹುಟ್ಟಿಸುವುದು…
ಶುಕ್ರುವಾರ ರಾತ್ರಿ
ಒಂದಿಷ್ಟು ಕುಡಿದು ತಡವಾಗಿ ಬಂದು
ಅವಳ ಬೈಗುಳಿಗೆ
ಪೆಚ್ಚಾದಂತೆ ನಟಿಸುವುದು….
ಅವಳಿ ಅರ್ಥವಾಗುವುದಿಲ್ಲ
ಎಂದು ಗೊತ್ತಿದ್ದರು
ಎಲ್ಲಾ ಇನ್ವೆಷ್ಟುಮೆಂಟ್-ಗೆ
ಅವಳಿಂದ ಹೂಂ ಅನ್ನಿಸಿ
ಮುಂದುವರೆಯುವುದು…
ಅನವಶ್ಯವೆಂದು ಗೊತ್ತಿದ್ದು
ಮಕ್ಕಳ ಭವಿಷ್ಯಕೆ ಸಿಕ್ಕಾಪಟ್ಟೆ
ಪ್ಲಾನ್ ಮಾಡಿ ಬೀಗುವುದು…
ಇಳಿಗಾಲಕೆಂದು ಕೂಡಿಡುವುದು
ಆಗಾಗ ಕೂಡಿಟ್ಟಿದ್ದನ್ನು
ಜೊತೆಯಾಗಿ ಎಣಿಸುವುದು…
ಹೇಳಲಾಗದ ಸಂಕಟಕೆ, ದುಃಖಕೆ
ಮೌನವಾಗಿ ಒಂದಿಷ್ಟು ದೂರ
ಕೈಹಿಡಿದು ನಡೆಯುವುದು…
ದಾಂಪತ್ಯದಲ್ಲಿ
ಸಾಂಗತ್ಯವೆಂದರೆ ಅಷ್ಟೇ…







ತುಂಬಾ ಚೆನ್ನಾಗಿ ಅರ್ಥೈಸಿದ್ದೀರ ವಿದ್ಯಾ ಶಂಕರ್..
ಆಧುನಿಕ ಕಾಲದ ದಾಂಪತ್ಯವನ್ನು ಸರಿಯಾಗಿ ಬಿಂಬಿಸುತ್ತದೆ. ಇಷ್ಟವಾಯಿತು.
ಇಳಿಗಾಲಕೆಂದು ಕೂಡಿಡುವುದು
ಆಗಾಗ ಕೂಡಿಟ್ಟಿದ್ದನ್ನು
ಜೊತೆಯಾಗಿ ಎಣಿಸುವುದು…
ಹೇಳಲಾಗದ ಸಂಕಟಕೆ, ದುಃಖಕೆ
ಮೌನವಾಗಿ ಒಂದಿಷ್ಟು ದೂರ
ಕೈಹಿಡಿದು ನಡೆಯುವುದು…
ದಾಂಪತ್ಯದಲ್ಲಿ
ಸಾಂಗತ್ಯವೆಂದರೆ ಅಷ್ಟೇ…manamuttuva manakaaduva chintane…
Written from a man’s perspective, nice one.
Good one
-Anil