-ಸುಬ್ರಾಯ ಮತ್ತೀಹಳ್ಳಿ
ಹಸಿರು ತೇರನ್ನೇರುತೀಯಂತೆ
ವರ್ಷವರ್ಷವೂ ಬರುತೀಯಂತೆ 1
ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ
ಸ್ವರ್ಗವ ಧರೆಗೆ ತರುತೀಯಂತೆ
ದಸರೇ-ಇದು ನಿನ್ನ ಹೆಸರೇ—?
ಇವನಮ್ಮ ಅವನಮ್ಮ ಎಂಬ ಭೇದ ವಿಲ್ಲದೇ
ಎಲ್ಲಮ್ಮ ಎಲ್ಲರಮ್ಮನಾಗಿ ಸೀದಾ ಸಾದಾ. 2
ಬರುತ್ತಲೇ ಹೆರುತ್ತ ಹೆರುತ್ತಲೇ ಬರುತ್ತ
ಕನಸ ಹಂಚುವೆಯಂತೆ ಸುತ್ತ ಮುತ್ತ
ಹೌದೇ ದಸರೇ—–?
ತಗ್ಗು ದಿನ್ನೆಗಳ ದಾರಿ ಸವೆದಿದೆ
ಕಂಡಲ್ಲಿ ಗುಂಡಿ ಕೆಸರಾಗಿದೆ 3
ಭಕ್ತ ವೇಷದ ಭಕ್ಷಕರು ರಕ್ಕಸರು
ರಥ ಸಾಗಿದೆ ಕುದುರೆ ಕೆನೆದಿದೆ
ಇಲ್ಲಿ ಮತ್ತೇರಿದೆ ದಸರೇ—-
ಕಾಲದಿಂದ ಕಾಲಕ್ಕೆ ಕೃಷವಾದೆ ತಾಯೆ
ಮಂಜು ಕಣ್ಣನು ಮಸುಕಾಗಿಸಿದೆ ಮಾಯೆ 4
ಮಾನವರ ದಾನವರ ಗುರುತಿಸದ ನೀನು
ಕೇಳಿದೆಲ್ಲವ ಕೊಟ್ಟೆ ಕೆಲವರಿಗೆ
ಯಾಕೆ ದಸರೇ———-?
ಹಸನಾದ ಮಣ್ಣೆಲ್ಲ ಮಸಣವಯ್ಯಯ್ಯೋ
ಬರಬಿದ್ದ ಮನದಲ್ಲಿ ಕಿರಣ ಕರಗಿತ್ತಯ್ಯೋ 5
ಬತ್ತಲು ಗಿಡಗಳ ಮೇಲೆ ಕತ್ತಲು ಕವಿದಿತ್ತಯ್ಯೋ
ಹೂಗಳಿಗೆ ಬದಲಾಗಿ ಹಣವು ಕುಣಿದಿತ್ತಯ್ಯೋ
ನಿಜವೇ ದಸರೇ—?
ಹದಿನಾರರ ಆಗಸ್ತ್ಯ ಸಾವಿರದ ಸರದಾರ
ಬರಿಗಾಲು ಬರಿಗೈ ಬಂದೊದಗಿದ ಮೆತ್ತಗೆ 6
ಒದ್ದ ನರಸತ್ತ ಸತ್ತೆಗೆ, ಸಂಸತ್ತೆಗೆ
ಒಳಕೂತ ಭೃಷ್ಟೋತ್ಪಾದಕರ ಗತ್ತಿಗೆ, ಬೋಳು ನೆತ್ತಿಗೆ
ಕಂಡೆಯಾ ದಸರೇ—
ಜನ ಗಣ ಮನ ಅಧಿನಾಯಕ ಗಣಗಳು
ಅಗಣಿತ ಗಣಿತದ ಗಣಕಗಳು 7
ಗುಣಿಗಳು ಹೆಗ್ಗಣಿಗಳು ನಿನ್ನಡಿಗೆ ಮಣಿದಿವೆ
ನರಬಲಿಗೆ ಕರಗಿ ಅವರಿಗೇ ಒರಗಿ
ನಿನ್ನ ಕಂಗಳು ತಣಿದಿವೆ
ಕಣ್ಣ ಬಿಡು ದಸರೇ——
ಬಿತ್ತಿ ಬೆಳೆದವರ ಬುತ್ತಿ ಕಿತ್ತು
ಅವರ ಕತ್ತಿಗೆ ಕ್ರೂರ ಉರುಳನಿತ್ತು 8
ಇಳೆ ಜೀವ ರಸ ಹೀರಿ ವಿಷಕಾರಿ
ಬೆಂದಿತಿಲ್ಲಿಯ ಬದುಕು ನಂದಿತಿಲ್ಲಿಯ ಬೆಳಕು
ಎಲ್ಲಿರುವೆ ದಸರೇ——-
ತಾಯಿಯೇ ಮಹದಾಯಿಯೇ
ಮಲತಾಯಿಯೇ ಅತತಾಯಿಯೇ 9
ಕಾವೇರಿ ವರಕೊಟ್ಟೆ ಕಾವಿಳಿಸಿ ಬರಕೊಟ್ಟೆ
ಕರಕೊಟ್ಟು ಗರಬಡಿಸಿ ನಡುವಲ್ಲಿ ನೀ ಬಿಟ್ಟೆ
ಏಕೆ ದಸರೇ—–?
ಹೊತ್ತುರಿವ ಹಸಿವಿನ ಜ್ವಾಲಾಗ್ನಿಯಲ್ಲಿ
ಷಟ್ಕೋಟಿ ಜೀವಿಗಳ ವಿಸ್ಪೋಟದಲ್ಲಿ 10
ಗುಡುಗೀತು ಬಾನು ನಡುಗೀತು ಭೂಮಿ
ಜಡ ಸಾಗರ ವಲ್ಲವಿದು ಜನಸುನಾಮಿ.
ಕೇಳಿದೆಯ ದಸರೇ
–







Poem is very nice sir.
sir,nimma kavite tumba chennagide,infact sarakara prativarshavu heege dasara,hampi,badami.heege heege utsavagalannu maduttide,adare,raitaru prativarshavu,nenugambakke eruttiddare,ofcourse raitaronde alla,metre baddi kodalarada,magalige maduve madalu sadyavagada,dina nityada himse,anyaya,hadahaghalina mosa,sahisikollalu sadyavagada suksma janaru atmahatye madikolluttiddare,illi pampananu odidava pampu hodeyuttane,rannanu odidava rammu saraburaju maduttane,enanannu odalaradava oc bareyuttane,club nadesuttane,shooleyara adde nadesi rokka maduttane,taratigadi baravidye gottillade papa amayka jana badukalarade savige sharanaguttiddare. ee ellakku pariskara elli,bekkige gante kattuvaru yaru kalave ellakku uttara koduttade,kayuva talme bekenoastaralli savira kolegalu,savira atmahatyegalu nadedu hoguttaveno,ole hatti uridode nilabahude tane dhare hatti uridade nilalahude kana ramanatha
d,ravi varma hospet