ಅಮೀನ್ ಸಯಾನಿ ಇನ್ನಿಲ್ಲ. ಅವರ ದನಿಯಿಂದಲೇ ದೇಶಾದ್ಯಂತ ಪರಿಚಿತರಾಗಿದ್ದ ಅವರು ಶ್ರವ್ಯ ಮಾಧ್ಯಮಕ್ಕೆ ಹೊಸ ಬ್ರಾಂಡ್ ನೇಮ್ ತಂದುಕೊಟ್ಟವರು. ಅವರನ್ನು ಬಹುತೇಕರು ಆಕಾಶವಾಣಿಯ ಸಿಬ್ಬಂದಿ ಎಂದೇ ಭಾವಿಸಿದ್ದಾರೆ. ಆದರೆ ಅಮೀನ್ ಆ ಕಾಲಕ್ಕೆ ಆಕಾಶವಾಣಿಗೂ ವಾಣಿಜ್ಯ ಸಂಸ್ಥೆಗಳಿಗೂ ನಂಟು ಬೆಸೆದವರು. ಈಗಿನ Sponsored Programme ನ ಉದ್ಘಾಟನೆ ಅಂದೇ ಆಗಿತ್ತು.
ಈಗ ಓದಿ. ಆಕಾಶವಾಣಿಯ ಮುಖ್ಯ ಪ್ರತಿಭೆ ಬಿ ಕೆ ಸುಮತಿ ಅವರು ಕಟ್ಟಿಕೊಟ್ಟ ಅಮನ್ ಸಯಾನಿಯ ನೆನಪನ್ನು-
**
ದಶಕಗಳ ಧ್ವನಿ ಮೌನವಾಗಿದೆ.
ಬಿ ಕೆ ಸುಮತಿ
**
ಭಾಯಿಯೊ ಬೆಹನೋ ಎಂದು ಆಕಾಶವಾಣಿ ವಿವಿಧಭಾರತಿ ಯಲ್ಲಿ ನಮ್ಮನ್ನು ಮಂತ್ರಮುಗ್ಧಗೊಳಿಸಿದ ಧ್ವನಿ ಯ ಮೋಡಿಕಾರ ಆಕಾಶಲೋಕಕ್ಕೆ ತೆರಳಿದ್ದಾರೆ.
ಅವರ ಧ್ವನಿ ನಮ್ಮ ಜೊತೆ ಈಗಲೂ ಸಂಭಾಷಿಸುತ್ತದೆ.
ಅಮೀನ್ ಸಯಾನಿ.
ಪ್ರಸ್ತುತಿಕಾರ. ಧ್ವನಿಕಲಾವಿದ. ವೇದಿಕೆ ಕಾರ್ಯಕ್ರಮಗಳಲ್ಲಿ, ರೇಡಿಯೋ ಸಂದರ್ಶನ ಮತ್ತು ಪ್ರಸ್ತುತಿಯಿಂದ ಮನೆ ಮನೆಯ ಮಾತಾದವರು. ಅನೇಕರಿಗೆ ಸ್ಫೂರ್ತಿ ಆದವರು. ರೇಡಿಯೋ ಕ್ಷೇತ್ರದ ಜೊತೆ ಹೆಜ್ಜೆ ಹಾಕಿದವರು.
ಭಾರತೀಯ ರೇಡಿಯೋ 50 ರ ದಶಕದಲ್ಲಿ ಅಂದರೆ ಆಕಾಶವಾಣಿ ಮಾತ್ರ.
ಈಗ ಖಾಸಗಿ ವಾಹಿನಿಗಳು ಇರುವುದರಿಂದ, ರೇಡಿಯೋ ಕ್ಷೇತ್ರವನ್ನು ಆಕಾಶವಾಣಿಯೇ ಬೇರೆ ಇತರ ವಾಹಿನಿಗಳೇ ಬೇರೆ ಎಂದು ಪರಿಗಣಿಸಬೇಕಾಗುತ್ತದೆ.
1951 ರ ದಶಕದಲ್ಲಿ ವಿವಿಧಭಾರತಿ ಹುಟ್ಟುವ ಮುನ್ನವೇ
ಚಲನಚಿತ್ರ ಗೀತೆಗಳ ಜೊತೆ ಆಟ ಆಡಿದ ಜಾದೂಗಾರ ಅಮೀನ್. ಭಾರತೀಯ ರೇಡಿಯೋ ಉದ್ಯಮದ ಖ್ಯಾತ ನಾಮರಾದ ಅಮೀನ್ , ಆಕಾಶವಾಣಿಯೊಂದಿಗೆ ಆಪ್ತ ಸಂಬಂಧ ಹೊಂದಿದ್ದರು.
ಚಿತ್ರರಂಗ ಬೆಳೆಯುತ್ತಿದ್ದ ಕಾಲ ಅದು.
ಭಾರತ ಸರ್ಕಾರ ಚಿತ್ರಗೀತೆಗಳನ್ನು ಪ್ರಸಾರ ಮಾಡಬೇಕೇ ಬೇಡವೇ, ಚಿತ್ರ ಗೀತೆ ಸಂಸ್ಕೃತಿಗೆ ಮಾರಕವೇ , ಪೂರಕವೇ, ಶಾಸ್ತ್ರೀಯ ಸಂಗೀತವೇ ಪರಮೋಚ್ಚ ಎಂಬ ಚರ್ಚೆಯಲ್ಲಿ ಇದ್ದಾಗಲೇ, ಅಮೀನ್ ಶ್ರೀಲಂಕಾ broadcasting ಸಂಸ್ಥೆ ಜೊತೆ ಕೈ ಜೋಡಿಸಿದರು.
ಅಮೀನ್ ಅಪ್ಪಟ ಕಲಾವಿದ.
ಜೊತೆಗೆ ಹಿಂದಿ ,ಉರ್ದು ಭಾಷೆಯನ್ನು ಬಳಸುವ ಸೂಕ್ಷ್ಮ ತೆ ಹೊಂದಿದ್ದರು.
ಅಮೀನ್ ಅವರ ತಾಯಿ ಆಗಲೇ ಪತ್ರಕರ್ತೆ.
ತಂದೆ ವೈದ್ಯರಾಗಿದ್ದರು.ಗಾಂಧೀಜಿ ಅವರಿಂದ ಪ್ರೇರಿತರಾಗಿದ್ದ ಕುಟುಂಬ ಅವರದ್ದು.
ಅಮೀನ್ ಅವರ ಅಣ್ಣ ಆಕಾಶವಾಣಿಯಲ್ಲಿ ಕೆಲಸ ಮಾಡಿದರು.
ಅಮೀನ್ ಆಕಾಶವಾಣಿಯ pay role ನಲ್ಲಿ ಎಂದೂ ಇರಲಿಲ್ಲ. ಅವರು , ಒಂದು ದಿನದ , ವಾರದ, ತಿಂಗಳಿನ, ಕಾರ್ಯಕ್ರಮಗಳಿಗೆ ಒಪ್ಪಂದಕ್ಕೆ ಅನುಸಾರ ಕೆಲಸ ಮಾಡುತ್ತಿದ್ದರು.
ಅವರು ತಾವೇ ಸ್ಥಾಪಿಸಿದ ಖಾಸಗಿ ಸಂಸ್ಥೆ ಮೂಲಕ ಕಾರ್ಯಕ್ರಮ ಗಳನ್ನು ರೂಪಿಸಿದರು.
ಜಾಹೀರಾತು, ಪ್ರಾಯೋಜಕತ್ವ ಅಂದರೆ ಏನು ಎಂದು ಜನಸಾಮಾನ್ಯರಿಗೆ ಅರ್ಥ ಆಗುವ ಮುನ್ನವೇ ಭದ್ರ ನೆಲೆ ಸ್ಥಾಪಿಸಿಕೊಂಡರು ಅಮೀನ್.
ಚಿತ್ರಗೀತೆ ಪ್ರಸಾರ ಮಾಡಬೇಕು, ಆಕಾಶವಾಣಿ ಮನರಂಜನಾ ವಿಭಾಗ ತೆರೆದು ಸಮಯ ವ್ಯಾಪಾರ ಮಾಡಬೇಕು ಎಂದು ಕಾನೂನು ರೂಪುಗೊಳ್ಳುವ ಹೊತ್ತಿಗೇ ಒಪ್ಪಂದ ಮಾಡಿಕೊಂಡು ಬಿನಾಕ ಗೀತಮಾಲ ಪ್ರಸ್ತುತಿ ಮಾಡಿದರು ಅಮೀನ್.
ಅವರು ಎಷ್ಟು ಕಾರ್ಯಕ್ರಮ ನಿರ್ಮಾಣ ಮಾಡಿದರೋ ಅವೆಲ್ಲ ತಮ್ಮ agency ಮೂಲಕವೇ ಮಾಡಿದ್ದು.
ಇದು ತುಂಬಾ ಮಂದಿಗೆ ತಿಳಿದಿಲ್ಲ.
ಅಮೀನ್ ಅವರ ಸೋದರ ಹಮೀದ್ ಆಕಾಶವಾಣಿಗೆ ನಿರ್ಮಾಣ ಮಾಡುತ್ತಿದ್ದ ಸರ್ಕಾರದ ಕಾರ್ಯಕ್ರಮ ಗಳಲ್ಲಿ ಅಮೀನ್ ಹೊರಗಿನ ಕಲಾವಿದರಾಗಿ ಸುಮಾರು ಹತ್ತು ವರ್ಷ ಪಾಲ್ಗೊಂಡರು. English ಕಾರ್ಯಕ್ರಮ ನಿರೂಪಿಸುತ್ತಿದ್ದರು.
ವಿವಿಧಭಾರತಿ ಆರಂಭ ಆಗಿದ್ದು 1957 ರಲ್ಲಿ.
51 ರಿಂದಲೇ ಈ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಅಮೀನ್, ಈ ಕಡೆ ತಿರುಗಿದರು.
ಚಿತ್ರಗೀತೆ ಪ್ರಸಾರ ಮತ್ತು ಪ್ರಾಯೋಜಕತ್ವ ಆದಾಯ ತರುತ್ತದೆ ಎಂದು ಮನಗಂಡ ಸರ್ಕಾರ ಕಾನೂನು ರೂಪಿಸಿತು.
ಹಾಗೇ ಒಪ್ಪಂದ ಆಧಾರಿತ ಕಾರ್ಯಕ್ರಮ ಗಳನ್ನು ಆಕಾಶವಾಣಿಯಿಂದ ಹೊರಗೆ ರೂಪಿಸಿ, ಪ್ರಸ್ತುತ ಪಡಿಸಿ, ಖಾಸಗಿ ಪ್ರಾಯೋಜನೆ ಪಡೆದು ಆಕಾಶವಾಣಿಯಲ್ಲಿ ಪ್ರಸಾರ ಮಾಡಿದರು ಅಮೀನ್.
S kumar filmi mulakat,
Saridon ke ಸಾಥಿ,
ಶಾಲಿಮಾರ್ ಸೂಪರ್ ಜೋಡಿ,
Colgate ಸಂಗೀತ್ ಸಿತಾರೆ..
ಹಲವಾರು ಕಾರ್ಯಕ್ರಮಗಳ ರೂವಾರಿ ಅಮೀನ್.
ಅವರ ಬರವಣಿಗೆ ಶೈಲಿ ಭಿನ್ನವಾಗಿತ್ತು.
ಉರ್ದು ಮಿಶ್ರಿತ ಹಿಂದಿಯ ಹಿಂದೂಸ್ತಾನಿ ಶೈಲಿಯ ಅವರ ಪ್ರಸ್ತುತಿ ಜನ ಮನ ಗೆದ್ದಿತು. ಕಲೆಗಾರಿಕೆ,
ವೃತ್ತಿಪರತೆ ಮತ್ತು ಖಾಸಗಿ ಕೌಶಲ್ಯ ಎಲ್ಲದರ ಸಮ್ಮಿಲನ ಅಮೀನ್.
ದೇಶದಾದ್ಯಂತ ವಿವಿಧಭಾರತಿ ಪ್ರಸಾರ ಆಗುತ್ತಿತ್ತು.
ಅಮೀನ್ ರೂಪಿಸುವ ಕಾರ್ಯಕ್ರಮ ತಮ್ಮ ವ್ಯಾಪಾರ ಹೆಚ್ಚು ಮಾಡುತ್ತವೆ ಎಂದು ಖಾಸಗಿ ಸಂಸ್ಥೆಗಳು ಅರಿತಿದ್ದವು.
ಸರ್ಕಾರದ ವಿವಿಧಭಾರತಿ, ಖಾಸಗಿ ಪ್ರಾಯೋಜಕತ್ವ ಮತ್ತು ಅಮೀನ್ ಸಯಾನಿ ಎಂಬ ಕಲಾ ಕೌಶಲ್ಯ
ಭಾರತೀಯ ಪ್ರಸಾರ ಕ್ಷೇತ್ರದ ಮಹತ್ವದ ಮೈಲಿಗಲ್ಲಾಗಿದೆ.
ಭಾಯಿಯೊ ಬೆಹನೋ ಮನಸುಗಳನ್ನು ಬೆಸೆದಿದೆ.
ಅಮೀನ್ ಸಯಾನಿ ಎಂಬ ಧ್ವನಿ ಮೋಡಿ ಗೆ ನಮನಗಳು.
0 ಪ್ರತಿಕ್ರಿಯೆಗಳು