ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಯವಿಟ್ಟು ಕಳುಹಿಸಿಕೊಡಿ..

ಧರ್ಮೇಶ್ 

buddhaಅಪ್ಪಾ……!
ಬುದ್ದ, ಎಂದರೆ ಯಾರು?
ಮಗಳು ಕೇಳಿದಳು.

ಬುದ್ದ! ಎಂದರೆ,
ಪ್ರೀತಿ, ಪ್ರೇಮ, ವಿಶ್ವಾಸ, ಕರುಣೆ
ಸಹಜ, ಸರಳ, ಸುಂದರ, ಸಂತೋಷ
ಸಹಬಾಳ್ವೆ, ಸಮಾನತೆ, ಸಹೋದರತೆ

ಸಂತೃಪ್ತಿ, ಸಂವೃದ್ಧಿ, ಬೆಳಕು, ನೆರಳು
ನಗು, ಶಾಂತಿ, ನೆಮ್ಮದಿ..!
ಎನ್ನುತ್ತಾ, ಕಪಾಟಿನಲ್ಲಿರುವ
ಮೂರ್ತಿಯನ್ನು ತೋರಿಸಿದೆ.

ಅದಕ್ಕವಳು, ದಡ್ಡ!
‘ಬುದ್ದ’ನನ್ನು ಕಪಾಟಿನಲ್ಲಿಡುವುದೇ
ಮನಸ್ಸಿನಲ್ಲಿಟ್ಟುಕೊಳ್ಳಬೇಕು
ಎನ್ನುವಂತೆ ನೋಡಿ!

ಆವನನ್ನು ಮನೆಗೆ
ಕರೆದುಕೊಂಡು ಬಾ!
ಎಂದು ಹಠ ಹಿಡಿದಿದ್ದಾಳೆ.
ನಿಮ್ಮಲ್ಲಿದ್ದರೆ!
ದಯವಿಟ್ಟು ಕಳುಹಿಸಿಕೊಡಿ.

ಪ್ರತಿ ಮನೆಯ ಮಕ್ಕಳೂ
ಹೀಗೆ ಹಠ ಹಿಡಿದರೆ!!

‍ಲೇಖಕರು Admin

14 May, 2016

1 Comment

  1. Shama, Nandibetta

    ಪ್ರತಿ ಮಗು ಕೂಡ ಬುದ್ಧ ಅಲ್ಲವೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading