ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಣಿಗಳಿಗೆ ಸತ್ಯ ಪಥ್ಯವಾಗುವುದಿಲ್ಲ..

ಕು.ಸ. ಮಧುಸೂದನ, ರಂಗೇನಹಳ್ಳಿ

ದಣಿಗಳಿಗೆ
ಸತ್ಯ
ಪಥ್ಯವಾಗುವುದಿಲ್ಲ
ಪ್ರಜೆಗಳಿಗೆ
ಸುಳ್ಳು ಅರ್ಥವಾಗುವುದಿಲ್ಲ.

ರಾಜನ ಕೆಳಗೆ
ಮಂತ್ರಿಗಳಿರುತ್ತಾರೆ
ಮಂತ್ರಿಗಳಿಗೊ
ಕಾಲಾಳುಗಳಿರುತ್ತಾರೆ.
ಪ್ರಜೆಗಳು
ಕಾಣದ ದೇವರ
ನಂಬಿ ಬದುಕುತ್ತಾರೆ.

ರಾಜ
ಅರಮನೆಯಲ್ಲಿರುತ್ತಾನೆ
ಮಂತ್ರಿಗಳು
ಮಹಲಿನಲ್ಲಿರುತ್ತಾರೆ
ಜನ ಬೀದಿ ಬದಿಯಲ್ಲಿ ಬದುಕುತ್ತಾರೆ.

ಹಲವು ಕೋಟಿ ಜನರಿಗೆ
ಒಬ್ಬ ರಾಜ
ಒಬ್ಬ ರಾಜನಿಗೆ
ಹತ್ತಾರು ಮಂತ್ರಿಗಳು
ಪ್ರಜೆಗಳಿಗೊ
ಮುಕ್ಕೋಟಿ ದೇವರುಗಳು.

ರಾಜ
ಭಕ್ತಿಯ ಮಾತಾಡುತ್ತಾನೆ
ಮಂತ್ರಿ
ದ್ರೋಹದ ಲೆಕ್ಕವಿಡುತ್ತಾನೆ
ಪ್ರಜೆಗಳಿಗೆ
ಪಾಪಪುಣ್ಯದ ಭಯ

ಭಕ್ತಿಗೆ
ಭಕ್ಷೀಸಿದೆ
ದ್ರೋಹಕೆ
ಕುಣಿಕೆ
ಕಾಯುತಿದೆ.

ಹೇಗೆ ಸಾಬೀತುಪಡಿಸುವುದು?

 

ಹಣಕಬಾರದು ಒಡೆದ ಕನ್ನಡಿಯಲ್ಲಿ

ಮರೆತೆವು

ಚೂರುಗಳಲ್ಲಿ ದಕ್ಕಿದ ಬಿಂಬವನ್ನೇ

ನಿಜವೆಂದು ನಂಬಿಕೊಂಡೆವು.

 

ಖಾಲಿ ಜೋಳಿಗೆಯೊಳಗೆ ಕೈಬಿಟ್ಟು

ತಡಕಾಡಿದ್ದಷ್ಟೆ ಲಾಭ

ಗುರುತೇ ಹಿಡಿಯಲಾಗದಷ್ಟು ಬದಲಾದ ನಾವು

ಕಳೆದುಕೊಂಡಿದ್ದು ಚಹರೆಗಳನ್ನು

ಮಾತ್ರವಲ್ಲ

ಬೇರುಗಳನ್ನು ಕೂಡ.

 

ಅರ್ಥಮಾಡಿಕೊಳ್ಳುವಷ್ಟರಲ್ಲಿ

ನಮ್ಮ ದೇಹಗಳು

ಚಿತೆಗೇರಿಸಲ್ಪಟ್ಟಿದ್ದವು

ನಾವೀಗ ಬದುಕಿದ್ದೇವೆಂದು

ಹೇಗೆ ಸಾಬೀತುಪಡಿಸುವುದು?

‍ಲೇಖಕರು avadhi

3 January, 2020

10 Comments

  1. Nirmala

    ಸುಂದರ

    • ಕು.ಸ.ಮಧುಸೂದನ್ ರಂಗೇನಹಳ್ಳಿ

      ಥ್ಯಾಂಕ್ಸ್

  2. Akila

    ಪಾಪಪುಣ್ಯದ ಭಯ….
    ಭಕ್ತಿಗೆ ಭಕ್ಷೀಸಿದೆ….
    ದ್ರೋಹಕೆ ಕುಣಿಕೆ
    ಕಾಯುತಿದೆ.

    ನಗ್ನ ಸತ್ಯ… ಸುಂದರವಾಗಿದೆ.

    • ಕು.ಸ.ಮಧುಸೂದನ್ ರಂಗೇನಹಳ್ಳಿ

      ದನ್ಯವಾದಗಳು ಮೇಡಂ

  3. T S SHRAVANA KUMARI

    ತುಂಬಾ ಅರ್ಥಗರ್ಭಿತ ಸಾಲುಗಳು

  4. ಕು.ಸ.ಮಧುಸೂದನ್ ರಂಗೇನಹಳ್ಳಿ

    ಥ್ಯಾಂಕ್ಸ್

  5. ಕು.ಸ.ಮಧುಸೂದನ್ ರಂಗೇನಹಳ್ಳಿ

    ಥ್ಯಾಂಕ್ಸ್

  6. Nagraj Harapanhalli

    ಇವತ್ತಿನ ಕಹಿ ವಾಸ್ತವಕ್ಕೆ ತಿವಿದ ಕವಿತೆಗಳು….

    • ಕು.ಸ.ಮಧುಸೂದನ್ ರಂಗೇನಹಳ್ಳಿ

      ದನ್ಯವಾದ ಸರ್

  7. Nagraj Harapanahalli.karwar

    ವಾಸ್ತವಕ್ಕೆ ತಿವಿದ ಕವಿತೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading