ಬೆಳಕು
ವನಮಾಲಾ ಸಂಪನ್ನಕುಮಾರ

ಮೊನ್ನೆ ಮುಸ್ಸಂಜೆ
ಇದ್ದಕ್ಕಿದ್ದಂತೆ
ಮುಗಿಲೇ ಹರಿದು
ಬಿದ್ದಂತೆ ಮಳೆ
ಸಿಡಿಲಿನಬ್ಬರಕ್ಕೆ
ದೀಪಗಳೆಲ್ಲ ಆರಿ
ಮನೆಯೆಲ್ಲ ಕತ್ತಲೋ ಕತ್ತಲು
ಮೊಂಬತ್ತಿ ಹೊತ್ತಿಸಿ
ಕಡ್ಡಿಯಾರಿಸುವ ಮೊದಲೇ
ಗಾಳಿಯ ದಾಳಿಗೆ
ದೀಪದ ಶರಣಾಗತಿ
ನುಗ್ಗಿ ಬಂದ ಮಿಂಚಿನ ಪ್ರಭೆಯಲ್ಲಿ
ಥಟ್ಟನೆ ನಿನ್ನ ನೆನಪಾಯಿತು
ಮತ್ತೆ ಮೊಂಬತ್ತಿ ಹೊತ್ತಿಸಬೇಕೆಂದು
ನನಗನ್ನಿಸಲಿಲ್ಲ.





ಅವನ ನೆನೆಪಿಗೂ ಬೆಳಕಿನ ಪರಿಮಳವಿದೆಯಾ,,,, ಭಾವ ಚೆನ್ನಾಗಿದೆ