
ನನ್ನ ಮಗ ಕನ್ನಡ ಪುಸ್ತಕಗಳನ್ನು ಓದಲಿ ಅನ್ನೋದು ನನಗೆ ಇದ್ದ ಏಕೈಕ ಆಸೆ. ಅದಕ್ಕಾಗಿ ಪಠ್ಯ ಪುಸ್ತಕದ ಜೊತೆಗೆ ಕಥೆ ಕಾದಂಬರಿ ಓದುವ ಅಭ್ಯಾಸ ಕಲಿಸಿದೆ.
ಚಿತ್ರದುರ್ಗ ಅವನಿಗೆ ಅಜ್ಜನ ಮನೆ. ಅಲ್ಲಿನ ಕೋಟೆ ಹತ್ತೋದು ಮೆಚ್ಚಿನ ಹವ್ಯಾಸ.
ಹೀಗಾಗಿ ತ.ರಾ.ಸು ಚಿತ್ರದುರ್ಗದ ಬಗ್ಗೆ ಬರೆದ ಕಂಬನಿ ಕೊಯಿಲು, ರಕ್ತರಾತ್ರಿ, ತಿರುಗುಬಾಣ ಎಲ್ಲವನ್ನೂ ಚಪ್ಪರಿಸಿಕೊಂಡು ಓದಿದ. ಹುಲ್ಲೂರು ಶ್ರೀನಿವಾಸ ಜೊಯಿಸ ಪಾಳೆಗಾರರ ಕಥೆಗಳನ್ನು ಓದಿದ. ಈ ಹಸಿವು ದುರ್ಗಾಸ್ತಮಾನ ಓದಬೇಕು ಅನ್ನೋ ಆಸೆಗೆ ಬಂದು ನಿಂತಿತು.
ದೊಡ್ಡ ಕಾದಂಬರಿ ಅಂತ ನಾನು ಹಿಂಜರಿದೆ. ಆದರೆ ಅವರ ಚಿಕ್ಕಪ್ಪ ಕೊಡಿಸಿಯೇ ಬಿಟ್ಟರು. ಮೂರು ಹಗಲು ರಾತ್ರಿ ನಿದ್ದೆಗೆಟ್ಟು ಓದಿದ. ಕಣ್ಣ ತುಂಬ ಮದಕರಿ ನಾಯಕನೇ ಆ ಗುಂಗಿನಿಂದ ಹೊರಗೆ ಬರಲು ಅವನಿಗೆ ವರ್ಷವೇ ಬೇಕಾಯಿತು
ನನ್ನ ಮಗ ಎನ್.ಎಸ್.ಭರತನ ಕೈಯಲ್ಲಿ ದುರ್ಗಾಸ್ತಮಾನ ಇರೋ ಚಿತ್ರ ಇಲ್ಲಿದೆ.. ತ.ರಾ.ಸು ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು
-ಎನ್.ಎಸ್.ಶ್ರೀಧರ ಮೂರ್ತಿ




ಇದು ನಾನು ಪದೇ ಪದೇ ಓದುವ ಮತ್ತು ನನ್ನನ್ನು ಯಾವತ್ತೂ ಕಾಡುವ ಪುಸ್ತಕ