-ಸೂತ್ರಧಾರ ರಾಮಯ್ಯ
ಮಂತ್ರಿಗಿರಿ ಕೊಟ್ಟೆಯೋ “ನೀ ಹೇಳಿದಂಗೆ” ; ಕೊಡಲಿಲ್ಲವೋ “ಏಳು ದಂಗೆ”
ಕಮಲ ಕೀಳೋಕೆ ಹೋಗಿ; ಕೆಸರಲ್ಲಿ ಸಿಕ್ಕಿಕೊಂಡರಂತೆ!
ಭಿನ್ನಮತ ಬಹುಮತದ ಶತ್ರು ;ಪಕ್ಷಾಂತರಿ ಜನತೆಯ ಶತ್ರು.
ಕಮಲಕ್ಕನ ಆಪರೇಶನ್ ಅಂದ್ರೆ; ಕೈ ಯಾಕೋ ಮುಚ್ಚಿಕೊಂಡು ಕೂತ್ರಂತೆ,
(ಕವನ ಬರೀತಾ) ಯಾರೋ ಅಳುತ್ತಿದ್ದಾರೆ..,ಕೋಯಿ ರೋ ರಹಾ ಹೈ! ಅಂತ ವಾಜಪೇಯಿ ಅಂದ್ರೆ ; ಅದು ನಾನಲ್ಲ ಅಂದರಂತೆ ಸೀಯಮ್ಮು .
ಗುಣಶೀಲ ಹೈ ಕಮಾಂಡ್ ಅಂದ್ರೆ ; ಹಣಚೀಲ “ಐ ಕಮ್ಯಾಂಡ್ ” ಅಂದನಂತೆ.
ರಾಜಕಾರಣೀನ ‘ಅನರ್ಹ’ ಅನ್ನೋಕೆ; ಡಿಸ್ಕ್ವಾಲಿಫಿಕೇಶನ್ ಆಕ್ಟ್ ಹುಡುಕಾಡಿದ್ರಂತೆ!
ಮ್ಯಾಡರ್ನ್ ಭಾರತದಲ್ಲಿ ಕುರ್ಚಿ ಏರಿದವ ಕೌರವ ; ಪಟ್ಟ ಕಳಕೊಂಡವ ಪಾಂಡವ.
ಧನತಂತ್ರ ಜನತಂತ್ರನ ಕೆಡಿಸ್ತು ;ದುಡ್ಡಿನವರ ಧಿಮಾಕ್ ಕ್ರಸಿ ಡೆಮಾಕ್ ಕ್ರಸಿ ಕೆಡಿಸ್ತು.
ಪಾಪ.., ನಾಯಕರ ಪಾಡು!
ಪಕ್ಷ ಪರದಾಡಲಿ, ಜನತೆ ಜರೆದಾಡಲಿ ,ನಿನ್ನ ನೆಮ್ಮದಿಗೆ ಭಂಗವಿಲ್ಲ. ಎಮ್ಮೆಲ್ಯೇ ನಿನಗೆ ಸಾಟಿಯಿಲ್ಲ.
(ಲಾಸ್ಟ್) ರೆಸಾರ್ಟ್’ ನಿಂದ ಘನ ಕೋರ್ಟವರೆಗೆ ನೀ
ಅಳುಕದೆ ಮುಂದೇ ಸಾಗುವೆ! ಅರೆ ಹೊಯ್ ಅರೆ ಹೊಯ್!






0 Comments