ಸುರೇಶ್ ಕಂಜರ್ಪಣೆ
ನಾನು ಕೆಲಸ ಬಿಟ್ಟು ಊರು ಸೇರಿ ಸಾವಯವ ಪ್ರಯೋಗಕ್ಕೆ ಇಳಿದು ಸಾಲ ಮೈಮೇಲೆ ಎಳಕೊಂಡಾಗ ತೇಜಸ್ವಿಯವರು ಬರೆದ ಪತ್ರ!!!
ಓದಲು ಕಷ್ಟವಾದರೆ ಅಂತ ಪತ್ರ ಇಲ್ಲಿ ಟೈಪು ಮಾಡಿದ್ದೇನೆ.
” ಅಯ್ಯಾ ಮಹಾನುಭಾವಾ,ನಿನ್ನ ತೋಟದ ಕೆಲಸ ಕೇಳಿ ಆಶ್ಚರ್ಯ ಆಯಿತು. ಮೊದಲನೆಯದಾಗಿ ಯಾರು ನಿನಗೆ ತೋಟಕ್ಕೆ ಹೊಗಿ ತಿದ್ದುವ ತಲೆಹರಟೆ ಕೆಲಸ ಮಾಡು ಅಂದಿದ್ದು. ಉತ್ಪಾದನೆಗೆ ತೊಂದರೆ ಕೊಡುವಂಥಾ ಪ್ರತಿಕೂಲ ಪರಿಸ್ಥಿತಿಯನ್ನು ಕೊಂಚ ನಿವಾರಿಸಿ ತಾಳ್ಮೆಯಿಂದ ಕೊಂಚ ದಿನ ಕಾಯಿ, ಅಷ್ಟರ ವಳಗೆ ಗಡಿಬಿಡಿ ಮಾಡಿ ಬೇವಿನ ಎಣ್ಣೆ ಇತ್ಯಾದಿಗಳನ್ನು ಯಾಕೆ ಸಿಂಪಡಿಸುತ್ತೀಯಾ
ಇನ್ನು ಸಾಲದ ಚಿಂತೆ ಬಗ್ಗೆ. ಇದಂತೂ ಮೂರ್ಖತನದ ಪರಮಾವಧಿ. ಯಾಕೆಂದರೆ ಇದು ಕೊಟ್ಟವರಿಗೆ ಇರಬೇಕಾದ್ದೇ ಹೊರತು ತಗೊಂಡವರಿಗಲ್ಲ.. ಸಾಲ ವಿಮುಕ್ತಿ ಆಗದಿದ್ದರೂ ಅದರ ಚಿಂತೆಯಿಂದಾದರೂ ವಿಮುಕ್ತನಾಗಯ್ಯಾ”
ನನ್ನ ಬದುಕಿನ ಸಾಹಸಗಳಲ್ಲಿ URA ಮತ್ತು ತೇಜಸ್ವಿ ನನ್ನ ಬಗ್ಗೆ ತೆಗೆದುಕೊಂಡ ಕಾಳಜಿ ನನ್ನ ಭಾಗ್ಯ ವಿಶೇಷ.
ಕೃಷಿ ಬಗ್ಗೆ ಅನುಸರಿಸಬೇಕಾದ ಕಾಮನ್ ಸೆನ್ಸ್ ನ್ನು ಇಂದಿಗೂ ನಾನು ಪಂಡಿತರಿಗಿಂತ ಚೆನ್ನಾಗಿ ವಿವರಿಸಬಲ್ಲೆ. ಅದು ತೇಜಸ್ವಿಯವರ ಶಿಷ್ಯತ್ವದಿಂದ ಲಭಿಸಿದ್ದು.
ಆಹಾ.. ಪರಮಗುರುವಿನ ಪ ತ್ರ
Dayavittu neevu Thoota madidda bagge bareyiri… Naavu krushi madbeku andukondavari upayoga agutte. Dhanyavadagalu.