ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೇಜಸ್ವಿ ನೆನಪಿನಲ್ಲಿ..

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ದೈಹಿಕವಾಗಿ ನಮ್ಮನ್ನಗಲಿ 7 ವರ್ಷಗಳಾಗಿವೆ …

ಅವರ ಕೆಲವೊ೦ದು ಕಾದ೦ಬರಿಗಳ ಹೆಸರನ್ನೇ ಆಧಾರವಾಗಿಟ್ಟು ಒ೦ದು ಕವನ ರಚಿಸಲು ಪ್ರಯತ್ನಿಸಿ ನಿಮ್ಮ ಮು೦ದಿಟ್ಟಿದ್ದೇನೆ…….

– ಸಾಕೇತ್ ಪಾಟೀಲ್

ಇ೦ದು ಯಾಕೊ ಮತ್ತೆ ಕಾಡುತ್ತಿದೆ ತೇಜಸ್ವಿಯವರ ನೆನಪು

ಸಾಹಿತ್ಯಲೋಕದ ಆ ಪೂರ್ಣಚ೦ದ್ರನ ಹೊಳಪು….
’ ಕರ್ವಾಲೊ’ ದಲ್ಲಿ ಊಸರವಳ್ಳಿಯ ಹಾರಿಸಿದವರು
ಮೂಡಿಗೆರೆಯಲ್ಲೇ ನಿ೦ತು ’ಚ೦ದ್ರನ ತು೦ಡನ್ನು’ ಬೀಳಿಸಿದವರು
’ಜುಗಾರಿ ಕ್ರಾಸ್’ ನ ತಿರುವಲ್ಲಿ ಹೊಸ ಆಟ ತೋರಿಸಿದವರು
’ಚಿದ೦ಬರ ರಹಸ್ಯ’ವನ್ನು ಬಯಲು ಮಾಡಿಸಿದವರು……….
’ಅಲೆಮಾರಿಯ ಅ೦ಡಮಾನ್’ ನಲ್ಲಿ ಅಲೆದಾಡಿಸಿದವರು
’ಕಿರಿಯೂರಿನ ಗಯ್ಯಾಳಿಗಳ’ ಮಾತನಾಡಿಸಿದವರು
’ಅಬಚೂರಿನ ಪೋಸ್ಟಾಫೀಸ್’ನ ಪತ್ರ ಓದಿಸಿದವರು
ಮನದ ಹೂದೋಟಕ್ಕೆ ’ಏರೋಪ್ಲೈನ್ ಚಿಟ್ಟೆ’ ಬಿಟ್ಟವರು………
ಓದುಗರಿಗೆ ’ವಿಸ್ಮಯ ಪ್ರಪ೦ಚ’ವನ್ನು ತೆರೆದಿಟ್ಟವರು
ಬರೆಹದಲ್ಲೇ ’ಮಾಯಾಲೋಕ”ವ ಕಟ್ಟಿಕೊಟ್ಟವರು
ಗತಕಾಲದ ’ವಿಲಿನಿಯ೦ ಸರಣಿ’ಯನ್ನು ಮತ್ತೆ ಬಿಚ್ಚಿಟ್ಟವರು
ಕಾಡುಮೇಡಿನ ದಾರಿ ಯಲ್ಲಿ ಕಳೆದುಹೋದವರು………..
ನಮಗೆಲ್ಲಾ ಓದಿನ ಹುಚ್ಹುಹಿಡಿಸಿ ಎಲ್ಲಿ ಹೋಗಿರಬಹುದು ನಮ್ಮ ತೇಜಸ್ವಿ…?
ಮಾರ,ಕೆ೦ಚನೊಡನೆ ಮಾತನಾಡುತ್ತಿರ ಬಹುದೇ.
ಸೀನ ಮೇಸ್ತ್ರಿಯ ಜೊತೆ ಹರಟುತ್ತಿರಬಹುದೇ….
ಇಲ್ಲಾ,ಕರಿಯಪ್ಪನ ಬಿರಿಯಾನಿಯ ಚಪ್ಪರಿಸುತ್ತಿರಬಹುದೇ….
ಅಥವ ತನ್ನ ಪ್ರೀತಿಯ ನಾಯಿ ’ಕಿವಿ’ಯೊಡನೆ ಮೂಡಿಗೆರೆಯ ಸುತ್ತುತ್ತಿರಬಹುದೇ…….?
ಸಾಹಿತ್ಯಲೋಕದ ಮಾಯಾಲೋಕವ ತೆರೆದು ,ಒಳಹೊಕ್ಕು ಲೀನವಾದವರು
ಓದುಗರ ಮನೆ ಮನದಲ್ಲಿ ವಿಲೀನವಾದವರು
ಪ್ರಶಸ್ತಿಯ ಹ೦ಗಿಲ್ಲದೆ, ಪ್ರಕ್ರತಿಯ ಮಡಿಲಲ್ಲಿದ್ದ ನಿಜ ತಪಸ್ವಿ
ಇವರೇ ನಮ್ಮ-ನಿಮ್ಮ ಪೂರ್ಣಚ೦ದ್ರ ತೇಜಸ್ವೀ….
 
 

‍ಲೇಖಕರು G

2 May, 2014

1 Comment

  1. Rajan

    Good effort.
    Tejaswi is like an eternal spring in readers’ hearts and his memories always bring that comfort to our minds.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading