ತೇಜಸ್ವಿಯವರ ಹೊರತು ಯಾರಿಗೂ ಹೇಳಬೇಕೆನಿಸಿರಲಿಲ್ಲ…

ಸಹ್ಯಾದ್ರಿ ನಾಗರಾಜ್

ಅಲಿಖಿತ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯಮಟ್ಟದ ಕಲಾಪ್ರತಿಭೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭ. ನನ್ನ ಮೆಚ್ಚಿನ ಸಾಹಿತಿ ಭಾಷಣದಲ್ಲಿ ದ್ವಿತೀಯ ಬಹುಮಾನವಿತ್ತು ನನಗೆ. ತೇಜಸ್ವಿ ಬಗೆಗೆ ಮನಸಾರೆ ಚಂದ ಮಾತಾಡಿದ್ದೆ ಅವತ್ತು.

ಸಮಾರಂಭ ಮುಗೀತು. ಅತ್ತ ಹೋಗಿ ಕನ್ನಡ ಭವನದ ಮೆಟ್ಟಿಲ ಮೇಲೆ ಮಂಕು ಕವಿದವನಂತೆ ಸಂಜೆಬಾನ ದಿಟ್ಟಿಸುತ್ತಾ ಕುಳಿತ್ತಿದ್ದೆ. (ಅದ್ಯಾಕೋ ಅವತ್ತೊಂದು ದಿನ ಮಾತ್ರ ಅಷ್ಟೊಂದು ಗದ್ದಲದೊಳಗಿದ್ದರೂ ನಾನು ಬೆಂಗಳೂರಿನಲ್ಲಿದ್ದೇನೆ ಅನ್ನೋದು ಮರೆತುಹೋಗಿತ್ತು.) ನನ್ನ ಪಕ್ಕ ಭಾಷಣದಲ್ಲಿ ತೃತೀಯ ಬಹುಮಾನ ಪಡೆದ ಹಂಪಿ ವಿವಿಯ ವಿದ್ಯಾಥರ್ಿಯೊಬ್ಬ ಆನಂದತುಂದಿಲನಾಗಿ ಎಲ್ಲರಿಗೂ ಫೋನಾಯಿಸುತ್ತಲಿದ್ದ. ನನ್ನ ಮೌನದಿಂದ ದಂಗಾದ ಆತ ಕೇಳಿದ್ದ ನಾನೇ ಎಲ್ರಿಗೂ ಫೋನಚ್ಚಿ ಹೇಳ್ತಿದ್ದೀನಿ. ನೀವ್ಯಾಕ್ರಿ ಹಿಂಗ್ ಕುಂತೀರಿ?!!
ಅದೆಲ್ಲಿತ್ತೋ ದಟ್ಟ ವಿಷಾದದ ನಗುವೊಂದು ಮಿಂಚಿನಂತೆ ಸುಳಿದುಹೋಯ್ತು. ಏಕೆಂದರೆ ನನಗೆ ಈ ವಿಷಯವನ್ನು ತೇಜಸ್ವಿಯವರ ಹೊರತು ಯಾರಿಗೂ ಹೇಳಬೇಕೆನಿಸಿರಲಿಲ್ಲ. ಆದರೆ ಆ ಹೊತ್ತಿಗೆ ತೇಜಸ್ವಿ ಇರಲಿಲ್ಲ.
 

‍ಲೇಖಕರು G

September 8, 2015

ನಿಮಗೆ ಇವೂ ಇಷ್ಟವಾಗಬಹುದು…

ತೇಜಸ್ವಿ ಜೀಪು

ತೇಜಸ್ವಿ ಜೀಪಿನಲ್ಲಿ ಸವಾರಿ ಚಿನ್ನಸ್ವಾಮಿ ವಡ್ಡಗೆರೆ  ಇದು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರು ಬಳಸುತ್ತಿದ್ದ ಜೀಪು. ಈಗ ಆ ಜೀಪು ತೇಜಸ್ವಿ...

1 Comment

  1. D.RAVI VARMA

    heart touching…..

    Reply

Submit a Comment

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This