’ಕರ್ವಾಲೋ’ ಮತ್ತು ’ಅವನತಿ’

ತೇಜಸ್ವಿಯವರ ಶ್ರೇಷ್ಠ ಕಾದಂಬರಿ ‘ಕರ್ವಾಲೋ’ ಮತ್ತು ಕಥೆ ‘ಅವನತಿ’

gs1ಗೊರೂರು ಶಿವೇಶ್

ನೀವು ಓದಲು ಬಯಸುವ ಉತ್ತಮ ಕೃತಿಯೊಂದರಿಂದ ಬಯಸುವುದಾದರೆ ಏನು? ರಂಜನೆ, ಬೋಧನೆ, ಆತ್ಮೋನ್ನತಿಯ ಹಾದಿ, ಅರಿವಿನ ವಿಸ್ತರಣೆ, ಸಾಂತ್ವನ ಇವೆಲ್ಲವೂ ಒಂದು ಕೃತಿಯಲ್ಲಿ ದೊರೆಯುವುದು ದುರ್ಲಭವೇ ಸರಿ. ಆದರೆ ಇವೆಲ್ಲವನ್ನು ಒಂದೇ ಪ್ಯಾಕೇಜಿನಲ್ಲಿ ನೀಡುವ ಪುಸ್ತಕವೆಂದರೆ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ.

ಶಿರೋನಾಮೆಯನ್ನು ನೋಡಿದರೆಇದುಒಬ್ಬ ವಿಜ್ಞಾನಿಯಚರಿತ್ರೆಎಂದು ಭಾಸವಾಗಹುದಾದರೂಇದುಜೀವ ವಿಜ್ಞಾನದಕಥೆ.ಇಲ್ಲಿಯ ಪಾತ್ರಗಳು ಕುವೆಂಪುರವರ ಭಾಷೆಯಲ್ಲಿ ಹೇಳಬಹುದಾದರೆಇಲ್ಲಿಯಾರು ಮುಖ್ಯರಲ್ಲ. ಯಾರುಅಮುಖ್ಯರಲ್ಲ. ಇಲ್ಲಿಯಎಲ್ಲಾ ಪಾತ್ರಗಳು ವಿಭಿನ್ನವಾಗಿದ್ದು, ತಮ್ಮದೇರೀತಿಯಲ್ಲಿಓದುಗರ ಮನದಲ್ಲಿ ತಳವೂರುತ್ತವೆ.

ಕಾದಂಬರಿಕಾರರುಕಥಾ ನಿರೂಪಣೆಗೆ ಬಳಸಿರುವುದು ಪತ್ತೇದಾರಿ ಶೈಲಿ. ಹೀಗಾಗಿ ಕೊನೆಯವರೆವಿಗೂ ಮುಂದೇನು ?ಎಂಬ ಕುತೂಹಲ ಮೂಡಿಸುವುದರಜೊತೆಗೆಅದರಅದ್ಭುತಕ್ಲೈಮ್ಯಾಕ್ಸ್ಓದುಗನಿಗೆ ಹೊಸ ಅನುಭವ ನೀಡುತ್ತದೆ.

ಕಥೆಯುತುಂಬ ಸರಳ.ಮೂರರ ಮುಂದೆ ಏಳು ಸೊನ್ನೆ ಹಾಕಿದರೆ ಬರುವಷ್ಟು ವರ್ಷಗಳ ಹಿಂದಿನ ಕಾಲದಲ್ಲಿಇದ್ದ ಹಾರುವ ಓತಿಯ ಅನ್ವೇಷಣೆಗಾಗಿ ಕೀಟಶಾಸ್ತ್ರಜ್ಞ ಕರ್ವಾಲೋ ನೇತೃತ್ವದತಂಡ ಹೊರಡುತ್ತದೆ.ಈ ಹುಡುಕಾಟ ನಮಗೆ ಅರಣ್ಯ ಪ್ರಪಂಚದ ನಿಗೂಢತೆಯನ್ನು, ಪ್ರಕೃತಿಯ ವೈಚಿತ್ರ್ಯವನ್ನುಪರಿಚಯಿಸುತ್ತಾ ಹೋಗುತ್ತದೆ. ಕೃತಿಯ ಕೊನೆಯಲ್ಲಿ ಅನಾವರಣಗೊಳ್ಳುವ ಹಾರುವ ಓತಿಯು ಅದ್ಭುತ ಭ್ರಮಾ ಲೋಕವನ್ನು ಸೃಷ್ಟಿಸುತ್ತದೆ.

ಕಾದಂಬರಿಯಲ್ಲಿ ಪ್ರಸ್ತಾಪವಾಗುವ ವಿಕಾಸವಾದದ ವಿವಿಧ ಮಜಲುಗಳು, ಜೇನು ಸಾಕಾಣಿಕೆಯ ವೈವಿಧ್ಯಗಳು, ಗ್ಲೋ ವಮರ್್, ಕಾವು ಕೂತ ಮುಂಗಟ್ಟೆ ಹಕ್ಕಿಯ ಸುತ್ತ ಬಲೆ ನೇಯ್ದು ಕೊಕ್ಕು ಹೊರಬರುವಂತೆಕಂಡಿ ಬಿಟ್ಟುಆಹಾರತಂದುಕೊಡುವಗಂಡು ಮುಂಗಟ್ಟೆ ಪಕ್ಷಿ …. ಹೀಗೆ ಜೀವ ವಿಜ್ಞಾನ, ಪ್ರಕೃತಿ ವಿಜ್ಞಾನ, ಮಾನವ ಶಾಸ್ತ್ರ ಮೊದಲಾದವುಗಳತನ್ನ ನಿರೂಪಣೆಯಲ್ಲಿ ಒಳಗೊಂಡಿದ್ದು, ನಮ್ಮಅರಿವನ್ನು ವಿಸ್ತರಿಸುತ್ತಾ ಹೋಗುತ್ತದೆ.ಆದರೆ ವೈಜ್ಞಾನಿಕ ಅಂಶಗಳು ಶ್ರೀಸಾಮಾನ್ಯನಿಗೂ ಅರ್ಥವಾಗುವಷ್ಟು ಸಹಜವಾಗಿಕಾದಂಬರಿಯಲ್ಲಿ ಸಂವಹನಗೊಂಡಿದೆ.

ಇನ್ನುಕಾದಂಬರಿಯ ಪೂರ್ತಿ ಹಾಜರಾಗುವ ಹಾಸ್ಯ ಪ್ರಸಂಗಗಳು ಓದುಗನ ಮೊಗದಲ್ಲಿ ಮಂದಹಾಸ ಮೂಡಿಸುತ್ತದೆ.ಸಾರ್ವಜನಿಕ ಸಮಾರಂಭದಲ್ಲಿಜೇನು ನೊಣಗಳ ದಾಳಿ, ಮಂದಣ್ಣನ ಮದುವೆ ಪ್ರಸಂಗಗಳು, ಮಂದಣ್ಣ ಪೊಲೀಸ್ ಪೇದೆಯ ಬಾಯಲ್ಲಿ ಮುಂಡಾನಆಗುವುದು…..ಇಂಥ ಅನೇಕ ಹಾಸ್ಯ ಪ್ರಸಂಗಗಳು ಮನಸ್ಸನ್ನು ಆಹ್ಲಾದಗೊಳಿಸುತ್ತವೆ.

ಕೆಲವೊಂದು ಸಂದರ್ಭಗಳಲ್ಲಿ ನಮ್ಮದಲ್ಲದ ಬೇರೆಯವರ ಕಷ್ಟ ಪರಿಹಾರಕ್ಕೆ ಹೊರಟು ಸಮಸ್ಯೆಗಳಿಗೆ ಸಿಲುಕಿ ಹಾಕಿಕೊಂಡು ಪರಿತಪಿಸುವುದು ಉಂಟು. ಮಂದಣ್ಣನಿಗೆ ಜಾಮೀನು ನೀಡಿ ನಿರೂಪಕರು ಕೋರ್ಟ್ ಗೆ ಅಲೆಯಬೇಕಾದ ಪ್ರಸಂಗ ಬಂದು ಇದಕ್ಕಾಗಿ ಪರಿತಪಿಸುತ್ತಿರುತ್ತಾರೆ. ಆಗ ಅವರ ಹೆಂಡತಿ ಮಂದಣ್ಣ ನಿರಪರಾಧಿಯಾಗಿದ್ದರೆ ನೀವಾಗಲಿ, ಕರ್ವಾಲೋ ಅವರಾಗಲಿ ಯಾಕೆ ಕೋರ್ಟ್ ಗೆ ಹೋಗಿ ಸಾಕ್ಷ್ಯ ಹೇಳಬಾರದು, ಅದರಲ್ಲೇನು ಅವಮಾನ ಎಂದು ಪ್ರಶ್ನಿಸುತ್ತಾಳೆ. ಈ ಪ್ರಶ್ನೆ ಸಮಸ್ಯೆಯನ್ನು ಸ್ಪಷ್ಟ, ಸರಳವನ್ನಾಗಿ ಮಾಡುತ್ತದೆ.ನೊಂದ ಮನಸ್ಸಿಗೆ ಇಂಥ ಸಾಂತ್ವನದ ನುಡಿಗಳು ಚೈತನ್ಯ ನೀಡುತ್ತವೆ.
ನಿರೂಪಕ, ವಿಖ್ಯಾತ ವಿಜ್ಞಾನಿ ಕರ್ವಾಲೋ, ಹಳ್ಳಿಯ ಮಂದಣ್ಣ ಪ್ರಭಾಕರ, ಕರಿಯಪ್ಪ ಮುಂತಾದವರೊಡನೆ ನಡೆಸುವದೇವರಕುರಿತ.ಜಿಜ್ಞಾಸೆಯು ವಿನೋದದ ಜೊತೆಗೆ ಕುತೂಹಲಕಾರಿಯಾಗಿದೆ. ಕೊನೆಗೆ ಕರ್ವಾಲೋ ಹೇಳಿದ ಉದಾಹರಣೆಗಳಷ್ಟೇಸತ್ಯ. ಅವುಗಳನ್ನು ಉಪಯೋಗಿಸಿಕೊಂಡುಮಾಡುವ ತೀರ್ಮಾನಗಳೆಲ್ಲ ಭ್ರಾಂತಿ ಮಾತುಗಳು ಆಧ್ಯಾತ್ಮದ ಹೊಸ ಚಿಂತನೆಗೆ ನಾಂದಿ ಹಾಡುತ್ತವೆ.

ಈಗಾಗಲೇ ಮೂವತ್ತಕ್ಕೂ ಹೆಚ್ಚು ಬಾರಿ ಮರು ಮುದ್ರಣಗೊಂಡುಕನ್ನಡದಜನಪ್ರಿಯಕಾದಂಬರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕೃತಿಮೇಲಿನ ಕಾರಣಗಳಿಂದಾಗಿ ಶ್ರೇಷ್ಠವೂ ಹೌದು.ಕವರ್ಾಲೋಇಂಗ್ಲೀಷ್, ಹಿಂದಿ, ಮರಾಠಿ, ಮಲಯಾಳಂ ಮತ್ತುಜಪಾನಿ ಬಾಷೆಗೆ ಅನುವಾದಗೊಂಡಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ಪುಸ್ತಕ ಪ್ರಕಾಶನದಿಂದ ಹೊರತಂದ ಮೂರು ಪ್ರಮುಖಕಥಾಸಂಕಲನಗಳೆಂದರೆ ಹುಲಿಯೂರಿನ ಸರಹದ್ದು, ಅಬಚೂರಿನ ಪೋಸ್ಟಾಪೀಸ್ ಮತ್ತುಕಿರಗೂರಿನ ಗಯ್ಯಾಳಿಗಳು. ಈ ಕಥಾ ಸಂಕಲನಗಳಲ್ಲಿ ಹದಿನೇಳು ಕಥೆಗಳಿವೆ. ಅಬಚೂರಿನ ಪೋಸ್ಟಾಫಿಸ್ಕಥಾ ಸಂಕಲನದಲ್ಲಿರುವ ಅಬಚೂರಿನ ಪೋಸ್ಟಾಫೀಸ್, ತಬರನಕಥೆ, ಕುಬಿ ಮತ್ತು ಇಮಾಲ ಚಲನಚಿತ್ರವಾಗಿ ಜನಪ್ರಿಯಗೊಂಡಿದ್ದೆ ಅಲ್ಲದೆ ರಾಜ್ಯ, ರಾಷ್ಟ್ರ ಮಟ್ಟದ ಪುರಸ್ಕಾರಕ್ಕೂ ಪಾತ್ರವಾಗಿವೆ. ಇನ್ನೂ’ಕಿರಗೂರಿನ ಗಯ್ಯಾಳಿಗಳು’ಕಥಾಸಂಕಲನದಲ್ಲಿರುವ’ಮಾಯಾಮೃಗ’ ಆ 4 ವರ್ಷದ ಭಾರತೀಯ ಕಥಾಸಂದರ್ಭದ 10 ಶ್ರೇಷ್ಠ ಕಥೆಗಳಲ್ಲೊಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಕಥಾ ಪ್ರಶಸ್ತಿಯನ್ನು ಪಡೆದಿದೆ.

ಅಬಚೂರಿನ ಪೋಸ್ಟಾಫೀಸ್ಕಥಾಸಂಕಲನದಲ್ಲಿರುವ’ಅವನತಿ’ನನ್ನನ್ನುಗಾಢವಾಗಿತಟ್ಟಿದಕಥೆ ಜ್ಞಾನಪೀಠಪ್ರಶಸ್ತಿ ವಿಜೇತ ಲೇಖಕ ಯು.ಆರ್.ಅನಂತಮೂರ್ತಿ ಯವರು ಜಗತ್ತಿನ ಶ್ರೇಷ್ಠ ಕಥೆಗಳಲ್ಲೊಂದು ಎಂದು ಈ ಕಥೆಯನ್ನು ಗುರುತಿಸಿದ್ದಾರೆ. ಅಸಾಮಾನ್ಯ ಕೌಶಲ್ಯ, ಕಲೆಗಾರಿಕೆಯನ್ನು ಹೊಂದಿದ ಸೂರಾಚಾರಿ ಆಧುನಿಕ ಸಮಾಜದಲ್ಲಿ ತನ್ನ ಕಲಾವಂತಿಕೆಯನ್ನು ಬಳಸಿಕೊಳ್ಳಲಾರದೆ ತನಗೆ ಉಪಯೋಗಕ್ಕೆ ಬಾರದ ಹತ್ತು ಹಲವು ಉದ್ಯೋಗ ಹಿಡಿದು ಅವನತಿಯತ್ತ ಸಾಗುವುದರ ಜೊತೆಗೆ ಅಪೂರ್ವ ಸುಂದರಿಗೌರಿಯ ಸುಂದರಕಾಯವನ್ನು ಸುಟ್ಟು ಹಾಳುಮಾಡುವ ಮಟ್ಟಕ್ಕೆ ಇಳಿಯುವ ದುರಂತವನ್ನು’ಅವನತಿ’ಕಥೆಯುಚಿತ್ರಿಸುತ್ತದೆ.

ಇಸ್ಲಾಪುರದ ವಾಸಿ ಸೂರಾಚಾರಿಯ ಮೂಲಕಸುಬು ಕಲ್ಲಿನಕತ್ತನೆಯ ಕೆಲಸ. ಹಳೇಬೀಡಿನ ಮೂಲವಾಸಿಯಾಗಿದ್ದ ಆತಇಸ್ಲಾಪುರಕ್ಕೆ ಬರುವ ಮುಂಚೆ ಮಹಾನ್ಕಲಾವಿದನಾಗಿದ್ದ. ಆತ ಶ್ರದ್ಧೆಯಿಂದತನ್ನ ಕೆಲಸ ನಿರ್ವಹಿಸುತ್ತಿದ್ದ. ಮಲೆಸೀಮೆಗೆ ಬಂದನಂತರದೇವಸ್ಥಾನದಕಂಭ, ದೇವರ ವಿಗ್ರಹಗಳ ಕೆಲಸ ಸಿಗದೆ ಮರದ ಮಾರಿಗೊಂಬೆಗಳನ್ನು ಮಾಡಿಕೊಡುವ ಕೆಲಸಕ್ಕೆ ಇಳಿಯುತ್ತಾನೆ. ಆ ಗೊಂಬೆಗಳ ಪ್ರಮಾಣಬದ್ಧ ನಿಲುವು, ಮುಖದಅಭಿವ್ಯಕ್ತಿ, ಸಮಪ್ರಮಾಣದ ಕುಚಗಳು, ಕರಾರುವಾಕ್ಕಾದ ಭಂಗಿಯನ್ನುಕಂಡುನಿಮ್ಮ ಬೊಂಬೆ ನೋಡಿದರೆ ಮಾರಿಜಪ್ತಿಗೆ ಬರೋದೆಇಲ್ಲ !ಎಂದುವಣರ್ಿಸಲು ಪ್ರಾರಂಭಿಸಿದಾಗ ಸೂರಾಚಾರಿ ಬೇರೆದಾರಿಕಾಣದೆಕೊಕ್ಕರೆ ಮೂಗು, ಬಿಡುಗಣ್ಣಿನಕಿಸುಬಾಯಿಯ ಮಡಕೆಮಾಲೆಗಳ ಮಾರಿಗೊಂಬೆಗಳನ್ನು ಮಾಡಿಕೊಡತೊಡಗುತ್ತಾನೆ. ಜೀವನೋಪಾಯಕ್ಕಾಗಿಇದೂ ಸಾಲದೆ ಮಂತ್ರ, ತಂತ್ರ, ತಾಯಿತಕೊಡುವುದು, ಭತ್ತದ ವ್ಯಾಪಾರ, ಎತ್ತಿನ ವ್ಯಾಪಾರ ಮುಂತಾಗಿ ಅರ್ಥಹೀನವಾಗಿ ಅಸಂಬದ್ಧವಾದ ಯಾವು ಯಾವುವೋ ಕಸುಬುಗಳನ್ನು ಮಾಡತೊಡಗುತ್ತಾನೆ. ಈ ವ್ಯವಹಾರದಿಂದಒಂದೇ ಕಾಸಿನ ಲಾಭಇರದಿದ್ದರೂ ಸುಮ್ಮನೆ ಕಾಲ ಕಳೆಯಲೆಂದೇ ಸೂರಾಚಾರಿಇಷ್ಟನ್ನೆಲ್ಲ ಹಚ್ಚಿಕೊಂಡು ಲಾಟರಿ ಹೊಡಯುತ್ತಿರುತ್ತಾನೆ.

karvalho

ಇತ್ತಾವಾರದ ಸುಬ್ಬಯ್ಯನ ಹೆಂಡತಿ ಗೌರಿ ಸೌಂದರ್ಯದಲ್ಲಿ ಸಕಲ ಶಿಲ್ಪಶಾಸ್ತ್ರಗಳ ಲಕ್ಷಣಗಳ ಅವತಾರದಂತೆ ಆಶ್ಚರ್ಯದ್ಭುತವಾಗಿದ್ದಳು.ಆಕೆಯ ನಡೆ, ಚರ್ಯೆ, ನಿಲ್ಲುವ ನಡೆಯುವ ಭಂಗಿ ಇವುಗಳ ವಿನ್ಯಾಸವಂತೂ ಸೌಂದರ್ಯವೇ ಛಂದೋಬದ್ಧವಾದಂತೆ ಕಾಣುತ್ತಿತ್ತು. ತನ್ನ ಸೌಂದರ್ಯದ ಬಗ್ಗೆ ಆಕೆಗಿದ್ದ ಅಸ್ಪಷ್ಟ ಪ್ರಜ್ಞೆಯೊಂದನ್ನು ಬಿಟ್ಟರೆ ಬೇರಾರಿಗೂ ಅತ್ತ ಗಮನ ಹೋದಂತಿರಲಿಲ್ಲ. ಅವಳು ಸುಂದರಿ ಎಂದು ಕ್ಷೀಣವಾಗಿ ಅನಿಸಿದ ಕೆಲವರು ಅವಳನ್ನು ಸಂದೇಹದ ಕಣ್ಣಿನಿಂದ ಕಾಣುವವರು. ಆಕೆ ಸುಬ್ಬಯ್ಯನನ್ನು ಮದುವೆಯಾದ ನಾಲ್ಕು ವರ್ಷದಲ್ಲಿ ಮೂರು ಮಕ್ಕಳು ಹುಟ್ಟಿ ಕೆಲವೇ ವಾರಗಳಲ್ಲಿ ಅವು ತೀರಿಕೊಂಡವು. ಸುಬ್ಬಯ್ಯನಿಗೆ ಏನಾದರೂ ಒಳರೋಗ, ದೋಸ ಉಂಟಾ ಎಂಬ ಈರೇಗೌಡನ ಮಾತನ್ನು ಕೇಳಿ  ಹಲ್ಲುಕಡಿದಿದ್ದೆ ಅಲ್ಲದೆ ಚಿಂತಿತನಾಗಿದ್ದಾನೆ.
ಸೂರಾಚಾರಿ ಈರೇಗೌಡನೊಂದಿಗೆ ಎತ್ತಿನ ಖರೀದಿಗಾಗಿ ಸುಬ್ಬಯ್ಯನ ಮನೆಗೆ ಬಂದಿದ್ದಾನೆ. ಸುಬ್ಬಯ್ಯನ ಚಿಕ್ಕಪ್ಪನ ಕಣ್ಣಿಗೆ ಈಚಲ ಮುಳ್ಳು ಹೊಡೆದು ಎಡಕಣ್ಣಿನ ಕಿಸುರು ನೀರು ಸೋರುತ್ತಿದೆ. ಇದಕ್ಕೆ ಸೂರಾಚಾರಿ ಒಣಶುಂಠಿ ಸುಟ್ಟು ಭಸ್ಮಮಾಡಿ ಎದೆಹಾಲಿಗೆ ಬೆರಸಿ ಹಾಕಲು ಸೂಚಿಸಲಾಗಿ ಆತ ಸುಬ್ಬಯ್ಯನ ಹೆಂಗ್ಸಿಗೆ ಹೇಳಿ ‘ಒಂದು ವಳಲೇಲಿ ಈಟು ಹಾಲು ಇಸ್ಕೊಂಡು ಬರಲು’ ಗೌರಿಯ ಬಳಿಗೆ ಅಲ್ಲಿದ್ದ ಹುಡುಗ ವಿಶ್ವನಾಥನನ್ನು ಅಟ್ಟುತ್ತಾನೆ.

ಮುಂದೆ ಸುಬ್ಬಯ್ಯ ಹುಟ್ಟಿದ ಮೂರು ಮಕ್ಕಳು ಕೆಲದಿನ ಇದ್ದು ಸತ್ತ ವಿಷಯ ತಿಳಿಸಿದಾಗ ಸೂರಾಚಾರಿಇದು’ಮಲೆದೋಸಾನೆ’ ಎಂಬ ತೀರ್ಮಾನಕ್ಕೆ ಬರುತ್ತಾನೆ. ‘ಮಲೇಲಿ ಮೇಲುಗಡೆ ಒಂದು ನೀಲಿ ನರ ಇರ್ತದೆ. ಅದರೊಳಗಿರ್ತದೆ. ನೋಡು ಹುಳ. ಅರಿಶಿನದ ಕೊಂಬಿನ ಕೆಂಡಾ ಮಾಡಿ ಅದನ್ನು ಸುಟ್ಟುತಗೀಬೇಕು. ಇಲ್ಲದಿದ್ದರೆ ಒಂದಲ್ಲಾ ಮೂರಲ್ಲಾ ನೂರು ಮಕ್ಕಳಾದರೂ ಒಂದು ಉಳಿಯಕಿಲ್ಲ’ಎನ್ನುತ್ತಾನೆ ಸೂರಾಚಾರಿ.

ನೋಡಾನ, ಈಗೇನಾದ್ದು, ಇನ್ನೊಂದು ಮೊಗ ಆಗಲಿ, ಆಮೇಲೂ ತೊಂದರೆ ಕಂಡರೆ ಸೂರಾಚಾರ್ರಿದ್ದರಲ್ಲ ಎಂದು ಇಷ್ಟು ಹೊತ್ತು ತೆಪ್ಪನಿದ್ದ ಈರೇಗೌಡ ತಟ್ಟನೆ ಮೈ ತಿಳಿದವನಂತೆ ಮಾತನಾಡಿದ.
ನೋಡಾನಂದರೆ ಇನ್ನೆಂತ ನೋಡದು. ಈಗಾಗಲೇ ಮೂರು ಹೊದ್ವು. ಬೇಗ ಅದಕ್ಕೇನಾದರೂ ಔಷಧಿ ಮಾಡದಿದ್ದರೆ ನಾನೇನು ಮಕ್ಕಳ ಮಾರೆ ನೋಡ ಹಂಗಿಲ್ಲ. ಸತ್ತರೆ ಹಾಲು ತುಪ್ಪ ಇಲ್ಲ ಎಂದು ಸೂರಾಚಾರ್ರ ಕಡೆ ಆರ್ತದೃಷ್ಠಿ ಬೀರಿದ ಸುಬ್ಬಯ್ಯ.

ಸಿಕ್ಕಬಿದ್ದ ಕೂದಲಿನಲ್ಲಿ ಓಡಾಡುವ ಬಾಚಣಿಗೆಯಂತೆ ಕರ್ಮಜಾಲದ ಬಾಗಿಲಿಲ್ಲದ ಕೋಣೆಯೋಳಗೆ ಬಿದ್ದಾಂತಾದ ಸೂರಾಚಾರಿ ಸುಬ್ಬಯ್ಯನ ಅಂಗಲಾಚುವಿಕೆಯನ್ನು ಕಂಡು ನಾಳಿದ್ದಿನ ಅಮಾಸೆ ಕಳಕುಂಡು ಹೆಂಗ್ಸು ಕರಕೊಂಡು ಬಾ. ಏನಾರು ಒಂದು ಮಾಡಾನ ಎಂದು ಹೇಳುತ್ತಾನೆ. ಇಲ್ಲಿಗೆ ಕಥೆ ಮುಗಿಯುತ್ತದೆ.

ನೈಪುಣ್ಯತೆ ಹೊಂದಿದ ಅದ್ಭುತ ಕಲಾವಿದ ಅವಕಾಶ ವಂಚಿತನಾಗಿ ಆ ಪರಿಸರಕ್ಕೆತಕ್ಕ ಅಸಂಬದ್ಧ ಜೀವನ ನಡೆಸಿ ಸುಂದರ ವಿಗ್ರಹಗಳನ್ನು ವಿಕೃತಿಗೊಳಿಸುವುದರ ಜೊತೆಗೆ ಬರುಬರುತ್ತಾ ಗೌರಿಯಂತಹ ಸುಂದರಕಾಯರು ವಿಕೃತಗೊಳ್ಳಲಾರಂಭಿಸುತ್ತಾರೆ. ಆಸಕ್ತಿ ಅಭಿರುಚಿ ಇರುವ ಕ್ಷೇತ್ರದಲ್ಲಿ ಅವಕಾಶಗಳ ಕೊರತೆ.ತನಗೆಆಸಕ್ತಿಯಿಲ್ಲದ ಕ್ಷೇತ್ರಗಳಲ್ಲಿ ಇದ್ದು ಸಂಪೂರ್ಣವಾಗಿ ತೊಡಗಿಸಿಕೊಳ್ಳಲಾರದೆ ಏಗುವ, ತನ್ಮೂಲಕ ಆ ಕ್ಷೇತ್ರಕ್ಕೂ ನ್ಯಾಯಸಲ್ಲಿಸದ ಅನೇಕರ ಜೀವನವನ್ನುಕಥೆ ಸಾಂಕೇತಿಕಾಗಿ ಬಿಂಬಿಸುತ್ತದೆ. ಓದುತ್ತಾ ಓದುತ್ತಾ ಹತ್ತು ಹಲವು ಚಿಂತನೆಗಳಿಗೆ ದಾರಿ ಮಾಡಿಕೊಡುವ ‘ಅವನತಿ’ ನಿಜಕ್ಕೂ ಒಂದು ಶ್ರೇಷ್ಠಕಥೆ.

ತೇಜಸ್ವಿಯವರು ಬದುಕಿದ್ದರೆ ಸೆಪ್ಟೆಂಬರ್ 8ಕ್ಕೆ (ಜನನ ಸೆ. 8-1938) ಅವರಿಗೆ 77 ವರ್ಷತುಂಬುತ್ತಿತ್ತು. ತಾವುಅಂದುಕೊಂಡಂತೆ ಬದುಕಿತಮ್ಮ ಕೃತಿಗಳ ಮೂಲಕ ಅಪಾರ ಓದುಗರನ್ನು ಸೃಷ್ಠಿಸಿಹೋದ ಅವರ ಕೃತಿಗಳನ್ನು ಓದುತ್ತಾ ಪರಿಸರ ಪ್ರೇಮಿ ಹಾಗೂ ಸಾಮಾಜಿಕ ಪ್ರಜ್ಞೆಯನ್ನು ಬೆಳಸಿಕೊಳ್ಳುವುದು ನಾವು ಅವರಿಗೆ ಸಲ್ಲಿಸುವ ಕೃತಜ್ಞತೆ.

‍ಲೇಖಕರು avadhi-sandhyarani

September 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಚಂದ್ರಗೌಡ ಕುಲಕರ್ಣಿ

    ತೇಜಸ್ವಿಯೂ ಅವರನ್ನು ಸಕಾಲಕ್ಕೆ ..ಪರಿಚಯಿಸಿದ್ದೀರಿ.
    ಪತ್ರಿಕೆಗಳಲ್ಲಿ ಯಾಕೊತೇಜಸ್ವಿ ಅವರ ಬಗೆಗೆ ಹೆಚ್ಚು ಬರಹಗಳಿಲ್ಲ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: