ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತೆರೆದ ಬಾಗಿಲ ನಡುವೆ ದೀಪ ಹಾಗೇ ಉರಿಯತ್ತಿದೆ…' – ಸ್ಮಿತಾ ಅಮೃತರಾಜ್

ಮುಂಬಾಗಿಲ ಕವಿತೆ

– ಸ್ಮಿತಾ ಅಮೃತರಾಜ್

ಇಳಿ ಸಂಜೆ
ದೀಪ ಹಚ್ಚುವ ಸಮಯ
ವಿಶಾಲವಾಗಿ ಮುಂಬಾಗಿಲು
ತೆರೆದಿಟ್ಟು
ಮನಸು ಏನನ್ನೋ ನೆನೆಯುತ್ತಾ
ಕನಸ ನೇಯುವುದು
ದಿನವೂ ಹೊಸತೆಂಬಂತೆ.
 
ನಿದ್ದೆಗಣ್ಣಿನಿಂದ ತೂಕಡಿಸುವ
ಕೊನೇ ಹಗಲು
ಲಕ್ಷ್ಮಿ ಮನೆಗೆ ಬರುವ ಹೊತ್ತಂತೆ
ಹುಷಾರು ತಪ್ಪಿದರೂ ಮಂಚದ
ಮೇಲೆ ಸುತರಾಂ ಮಲಗಬಾರದಂತೆ.
 
ನನ್ನಜ್ಜಿಯಿಂದ ನನ್ನಮ್ಮನಿಗೆ
ನನ್ನಮ್ಮನಿಂದ ಮತ್ತೆ ರವಾನಿಸಲ್ಪಟ್ಟದ್ದು
ನನ್ನೀ ತನಕ ಹರಿದು ಬಂದಿದೆ
ತೆರೆದ ಬಾಗಿಲ ನಡುವೆ ದೀಪ
ಹಾಗೇ ಉರಿಯತ್ತಿದೆ.
 
ದೂರ ದೂರಿಗೆ ಹೋಗಿ
ನಡು ದಾರಿಯಲಿ ಸಿಲುಕಿ
ಒಂದೇ ಚಡಪಡಿಕೆ
ಮುಚ್ಚಿದ ಬಾಗಿಲು ತಟ್ಟಿ
ಲಕ್ಷ್ಮಿ ಹೊರಟೇ ಹೋದಳೇನೋ?
 
ಮುಂಬಾಗಿಲ ತೆರೆದಿಡಲೋಸುಗ
ನೆವಗಳ ಹೇರಿ
ಪಡಸಾಲೆಯಲ್ಲಿ ಕಾಯುತ್ತಾ
ಕುಂತದ್ದು ಅದೆಷ್ಟೋ ಬಾರಿ.
 
ಇದೀಗ ಮಗಳ ಸರದಿ
ಹೊಸ ಮನೆಯ ಮುಚ್ಚಿದ
ಕದದ ಮೇಲೆ ಚಿತ್ತಾರದ
ಕುಸುರಿಯ ನಡುವೆ
ಅಷ್ಟ ಲಕ್ಷ್ಮಿಯರ ಸವಾರಿ.
 
ಮುಸ್ಸಂಜೆಯ ತಂಪು ಹೊತ್ತಿನಲ್ಲಾದರೂ
ತುಸು ಬಾಗಿಲು ತೆರೆಯಬಾರದೇ..?
ಗೊಣಗಿಕೊಂಡರೆ..
 
ಗೃಹ ಲಕ್ಷ್ಮಿಯರು ನಿಸೂರಾಗಿರ ಬೇಕಾದರೆ
ಬಾಗಿಲು ಮತ್ತಷ್ಟೂ ಭದ್ರವಾಗಿರಬೇಕಮ್ಮಾ
ಅನ್ನುತ್ತಾ..
ಅಗುಳಿ ಬಿಗಿಯುತ್ತಾಳೆ
ನಸು ನಗೆ ನನ್ನೆಡೆಗೆ ತೂರಿ.
 

‍ಲೇಖಕರು G

6 February, 2015

8 Comments

  1. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

  2. Anonymous

    superb mam.

  3. Swarna

    ಇಂದಿನ ಸ್ಥಿತಿ ! ಚೆನ್ನಾಗಿದೆ

  4. mmshaik

    nice….

  5. Manjula

    enthaha viparyasa ? so nice

  6. shwetha r prasad

    Tumba chennagide kane

  7. lakshmikanth itnal

    “ಗೃಹ ಲಕ್ಷ್ಮಿಯರು ನಿಸೂರಾಗಿರ ಬೇಕಾದರೆ
    ಬಾಗಿಲು ಮತ್ತಷ್ಟೂ ಭದ್ರವಾಗಿರಬೇಕಮ್ಮಾ
    ಅನ್ನುತ್ತಾ..
    ಅಗುಳಿ ಬಿಗಿಯುತ್ತಾಳೆ” ಎಷ್ಟೊಂದು ಬಂಧನಗಳ ಸಂಕೋಲೆಗಳು ಪ್ರತಿ ಹೆಜ್ಜೆಜಾಡಿನಲ್ಲೂ ಅಲ್ಲವೇ

  8. shaila

    chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading