ಎಂದೋ ಬರೆದ ನನ್ನದೇ ಕವಿತೆ

ರಾಜಕುಮಾರ ಮಡಿವಾಳರ
ಎಂದೋ ಬರೆದ ನನ್ನದೇ ಕವಿತೆ
ತೆರೆದ ಬಾಗಿಲಿಂದೊಳಬಂತು…!
ಮುಸುಕಿದ ನಸುಕು ಮಬ್ಬಿನಲೂ
ನಿಚ್ಚಳ ಬೆಳಕದಕೆ ಅವಳಿ ದೀಪದ ಕಣ್ಣಿತ್ತ…
ಮತ್ತಾ..? ಮತ್ತಾ..? ಮಾತು ಮಾತಿಗೆ
ಮತ್ತಾ.. ಅನ್ನುತ್ತ ತನ್ನ ತಾನ ಬಿಡಿಸಿತ್ತ
ನನ್ನದೇನಿದೆ? ಕವಿತೆ ಇನ್ನೂ ಹಾಗೇ ಇದೆ
ಪರಮಾದ್ಬುತ! ದಿಗಿಲೆದ್ದೆದೆ ಮೂಕವಾಗಿತ್ತ!
ಪದ ಪದ ಜೇನಲ್ಲಿ ಅದ್ದಿ ಆ ದಿನದ
ಮಾತೆರಡ ಜೇನುಗೂಡಂತ ತುಟಿ ಜಿನುಗಿತ್ತ
ಒಂದೇ ಕವಿತೆಯ ಸಡಗರ ಮನೆಯೊಳಗಿನ
ಇಡೀ ಸಂಕಲನಕೆ ದಂಗು ಬಡಿಸಿತ್ತ!
ಭರ್ತಿ ಶ್ರಾವಣದೊಳು ಭಾರಿ ಕಾರ್ತಿಕ
ನಾ ಬರ್ತಿ ನಿನ್ನ ಹೊರಟು ನಿಂತಿರಲು
ಒಂದೇ ಭಾರಿ ಧೈರ್ಯ ಮಾಡಿ ನೋಡಿದೆ ಚರಣ
ನವಿಲು ಗೆಜ್ಜೆ….! ಯಾರೋ ಕಟ್ಟಿದ ಆಭರಣ!





ಕವಿತೆ ಚನ್ನಾಗಿದೆ
ಕವಿತೆಯೊಳಗಿನ ನವಿಲು ಗೆಜ್ಜೆಯ ನಾದದ ನೆನಪು ಯಾವಗಲು ಹಿತ.ಚೆನ್ನಾಗಿದೆ.