ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತೂತುಗೊಂಡಿರುವುದು ನನ್ನ ಮನೆಯ ದೋಸೆಯೋ ಕಾವಲಿಯೋ…

ದಾಂಪತ್ಯ

download

ಜಾನ್ ಸುಂಟಿಕೊಪ್ಪ

1
ಹೃದಯ ಹೃದಯಗಳ ಸಮ್ಮಿಲನ
ಎರಡು  ದೇಹ ಒಂದಾಗಿ
ಮನಸು ಕರಗಿದೆ,
ಇಳೆಯೆಲ್ಲಾ ಇಬ್ಬನಿ ತಬ್ಬಿದ ಅನುಭವ;
ಬಿಸುಪಿನ ಆರೋಹಣ-ಅವರೋಹಣ
ನಗ್ನತೆಯಲ್ಲಿ ಮಾತ್ರ,
ಇರುಳಿನ ಕರುಳೊಳಗೆ ತೊಳಲಾಡಿದಾಗಷ್ಟೇ
ಕಾಮಕ್ಕೆ ಕೆಲಸ;
ಕೈಗೊಂದು ಕಾಲಿಗೊಂದು ಅಡರುವ
ಆ ಕಂದಮ್ಮಗಳ ಮುದ್ದು ಮಾಯೆ
ನಾಳಿನ ಅಸಹಾಯಕತೆಯ ಬಂದವಾಳವಷ್ಟೇ;
ಅವನ ಬಿಗಿತವೆಲ್ಲಾ ಕೊಸರಾಟವಾಗಿ
ಅವಳ ಚಂಚಲತೆಯೆಲ್ಲಾ ನಿಟ್ಟುಸಿರಾಗಿ
ದಾಂಪತ್ಯ ಬದಲಾಗುವುದರಲ್ಲಿ ಸಂಶಯವಿಲ್ಲ;
ಕಾಮದ ಸುಳಿಗೆ ಸಿಕ್ಕ ಪ್ರೀತಿ
ಮುಳುಗಿ ಏಳಿ ಮುಳುಗಿ ಏಳಿ
ಕಡೆಗೊಮ್ಮೆ ಅನಾಥ ಹೆಣವಾಗುತ್ತದೆ;
ಇತ್ತ ಅಹಮ್ಮಿನ ಬಸಿರು ಕಟ್ಟಿ
ಆ ಬಸಿರು ಬೆಳೆದಂತೆ
ಗೋಡೆಗೋಡೆಗಳೆಲ್ಲಾ ಜೈಲುಕಂಬಗಳಾಗಿ
ತೆರೆದ ಕಿಟಕಿ ಬಾಗಿಲುಗಳು
ಕನಸುಗಳ ಕೈ ಬೀಸಿ ಕರೆಯುತ್ತವೆ;
ಮಾತಿನ ಮುತ್ತು ಮುಳ್ಳಾಗಿ
ಎದೆಯ ತುಂಬಾ ಗೀರಿದ ಗಾಯವಾಗಿ
ಕಣ್ಣೀರು ಕರಗಿ ಇಬ್ಬನಿ ತಬ್ಬಿದ ನೆಲ
ಬರಡು ಬರಡು,,,,..
ನನಗೀಗ ಚಿಂತೆ,
ತೂತುಗೊಂಡಿರುವುದು
ನನ್ನ ಮನೆಯ ದೋಸೆಯೋ
ಕಾವಲಿಯೋ….
 

‍ಲೇಖಕರು avadhi-sandhyarani

22 August, 2015

5 Comments

  1. Noorulla Thyamagondlu

    ತುಂಬ ಚೆನ್ನಾಗಿ ಬರೆದಿದ್ದೀರಿ.

  2. Paramesh

    Chennagide 🙂

  3. mmshaik

    very nice poem..

  4. ಜೆ.ವಿ.ಕಾರ್ಲೊ, ಹಾಸನ

    ಚೆನ್ನಾಗಿದೆ ಜಾನ್.

    • John sunticoppa

      Thank you ,,

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading