ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತುಳಿಯುತ್ತಲೇ ಇರುತ್ತಾರೆ ನಿಷ್ಪಾಪಿ ರಸ್ತೆಗಳನ್ನು..

 ಶಿವಕುಮಾರ್ ಮಾವಲಿ

‘ಶೋಷಿತರು ಪ್ರತಿಭಟಿಸಲೇಬೇಕು’
ಎಂಬುದು ನಿರ್ವಿವಾದದ ಸಂಗತಿ
ಹಾಗಿದ್ದಲ್ಲಿ‌ ರಸ್ತೆಗಳೇನು ತುಸು
ತುಳಿಯಲ್ಪಟ್ಟಿವಿಯೇ ?

ನಡೆಯುವವ,ಓಡುವವ,
ನೆಗೆಯುವವ, ನಿಗರಾಡುವವ
ಪ್ರತಿಭಟಿಸುವವ, ಫರಾಕು ನೀಡುವವ
ಹೀಗೆ ಎಲ್ಲರೂ ಎಗ್ಗಿಲ್ಲದೆ
ತುಳಿಯುತ್ತಲೇ ಇರುತ್ತಾರೆ
ಸುಮ್ಮನೆ ಹೊದ್ದು ಮಲಗುವ
ಈ ನಿಷ್ಪಾಪಿ ರಸ್ತೆಗಳನ್ನು .

ಅಣಕು ಶವದ ಮೆರವಣಿಗೆ
ಬೆಲೆಯಿಲ್ಲದ ಟೊಮ್ಯಾಟೊ ಸುರಿಯುವಿಕೆ
ವಿಜಯ ಯಾತ್ರೆ – ವಿಕಾಸ ಯಾತ್ರೆ
ಅದ್ದೂರಿ ಅಂತಿಮ ಯಾತ್ರೆ
ಎಲ್ಲ ಜಾತ್ರೆಗಳಿಗೂ ರಸ್ತೆಗಳೇ ಬೇಕು

ಎಲ್ಲ ಶೋಷಿತರೂ ತಮ್ಮನ್ನು ಮೆಟ್ಟಿಲುಗಳಂತೆ ಬಳಸಿ ಶೋಷಣೆಯ ವಿರುದ್ಧ ಪ್ರತಿಭಟಿಸಿದರೂ
ಈ ರಸ್ತೆಗಳೇಕೆ ಪ್ರತಿಭಟಿಸುವುದಿಲ್ಲ

ಎಲ್ಲ ರಸ್ತೆಗಳೂ ಗುಂಪುಗೂಡಿ ಒಮ್ಮೆ ಪ್ರತಿಭಟನೆಗಿಳಿಯಲು ಇನ್ನೂ ಯೋಚಿಸಿಲ್ಲವೇಕೆ ?
ಆ ಆಗಸವಿನ್ನೂ ಈ ರಸ್ತೆಗಳ
ಪ್ರತಿಭಟನೆಗೆ ಅಣಿಯಾಗಿಲ್ಲವೇಕೆ ?

‍ಲೇಖಕರು Avadhi GK

15 March, 2018

1 Comment

  1. nutana doshetty

    fresh thought..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading