
ಸಂತೆಬೆನ್ನೂರು ಫೈಜ್ನಟ್ರಾಜ್
೧
ದಾರವೇ ಧನ್ಯ
ಸೂಜಿಯೊಳಗೆ ಹೋಗಿ
ತೇಪೆಯಾಗಿ ಮೈ ಮುಚ್ಚಿತು
೨
ಕಣ್ಣಿಗೂ ನೂರು ಕೆಲಸ
ನೀರ ಹಾಕುವಷ್ಟು
ಪುರುಸೊತ್ತಿಲ್ಲ; ನೀನಿಲ್ಲದಿದ್ದರೂ!
೩
ಚಪ್ಪಲಿಯ ಉಂಗುಷ್ಟ
ಹರಿದಿದೆ; ದಾರಿ ದೂರವಿದೆ
ಬರಿಗಾಲಿಗೂ….ನೋವುಂಡ ಅನುಭವವಿದೆ.
೪
ಮಗುವಂತಾಗಬೇಕು
ಅಂತ
ಮನ ಅಂದುಕೊಂಡಾಗೆಲ್ಲಾ
ಮಾಡಿದ ಪಾಪ ಕಣ್ಮುಂದೆ!





Tumba artha heluva chikka kavitegalu heege saagali nimma kavitegala rachane
last one sooooooooper