ಬೆಂಗಳೂರಿನ ‘ಆಕೃತಿ’ ಪುಸ್ತಕ ಮಳಿಗೆಯಲ್ಲಿ ಮೇಫ್ಲವರ್ ನ ಪ್ರಕಟಣೆ ‘ತುಂಗಾ’ ಕಾದಂಬರಿ ತುಂಗಾ ರೀತಿಯೇ ಇದ್ದ ಹುಡುಗಿಯಿಂದ ಬಿಡುಗಡೆಗೊಂಡಿತು. ಆಕೆ ಅವನಿ. ಪುಸ್ತಕ ಬಿಡುಗಡೆ ಮಾಡಿದ ಮೇಲೆ ಲೇಖಕಿ ವಿ ಗಾಯತ್ರಿ ಈ ಕಾದಂಬರಿಯ ಆತ್ಮೀಯ ಪುಟವನ್ನು ಕೇಳುಗರ ಎದುರು ಹರಡುತ್ತಾ ಹೋದರು.
ಇದಕ್ಕೆ ಸುಘೋಷ್ ಎಸ ನಿಗಳೆ ಸಹಾ ದನಿಗೂಡಿಸಿದರು. ನಂತರ ಲೇಖಕಿಯೊಂದಿಗೆ ನಡೆದ ಸಂವಾದ ಇಂದಿನ ಶಿಕ್ಷಣ ವ್ಯವಸ್ಥೆಯ ಮೇಲೆ ಸ್ಪಾಟ್ ಲೈಟ್ ಬೀರಿತು. ಆಕೃತಿಯ ರೂವಾರಿಗಳಾದ ಗುರು ದಂಪತಿ ಒತ್ತಾಸೆಯಿಂದ ಈ ಕಾರ್ಯಕ್ರಮ ಜರುಗಿತು.













0 Comments
Trackbacks/Pingbacks