ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಿರುಮಲೇಶ್, ಕುಂ ವೀ ಹೇಳಿದ್ದು: ನನಗಂತೂ ತುಂಬ ದುಃಖ ಆಗಿದೆ

rohith vemula suspension

ಬಹಳ ನೋವಿನ ಸಂಗತಿ. ಇಂಥ ಘಟನೆಗಳಿಗೆ ಅಧ್ಯಾಪಕ-ವಿದ್ಯಾರ್ಥಿ ಮಾನವೀಯ ಸಂಬಂಧ ಈ ದಿನಗಳಲ್ಲಿ ಕಡಿಮೆಯಾಗಿರುವುದೂ ಒಂದು ಕಾರಣ ಎಂದು ನನ್ನ ಅನಿಸಿಕೆ. ಈ ಹುಡುಗನ ಮಾನಸಿಕ ತೊಳಲಾಟಕ್ಕೆ ಕಾರಣವೇನೋ ತಿಳಿಯದು.

ಏನಿದ್ದರೂ ಅದನ್ನು ಗ್ರಹಿಸಿ ಸರಿಪಡಿಸುವುದು ಸಾಧ್ಯವಿತ್ತು ಎನಿಸುತ್ತದೆ. ಯುನಿವರ್ಸಿಟಿಗಳ ಪ್ರತಿಯೊಂದು ವಿಭಾಗವೂ ಈ ಕುರಿತು ಗಮನ ನೀಡುವುದು ಅಗತ್ಯ.

-ಕೆ ವಿ ತಿರುಮಲೇಶ್ 

ರೋಹಿತ್ ನಂಥ ಪ್ರತಿಭಾವಂಥ ಯುವಕರಲ್ಲಿ ವರ್ತಮಾನ ಸಂದರ್ಭದ ಕಷ್ಟಕೋಟಲೆಗಳನ್ನು ಎದುರಿಸುವ ಆತ್ಮಸ್ಥೈರ್ಯ ಯಾಕೆ ಕುಂಟಿತಗೊಳ್ಳುತ್ತಿರುವುದೊ? ಇಂಥ ನೋವಿನ ಘಟನೆಗಳಿಗೆ ಯಾರು ಹೊಣೆ?

ಚಂದ್ರಶೇಖರರಾವ್ ರಂಥ ಸನಾತನ ಮನಸ್ಸಿನ ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು, ಇಂಥ ದುರ್ಬಲ ಮನಸ್ಸಿನ ಯುವಕರನ್ನು ಹೆತ್ತವರ ಸದ್ಯದ ಪರಿಸ್ಥಿತಿ ಊಹಿಸಿಕೊಂಡರೇನೆ ಭಯ ಅಗುತ್ತೆ, ನನಗಂತೂ ತುಂಬ ದುಃಖ ಆಗಿದೆ

-ಕುಂವೀ

12509561_1240856079263050_5891349582304129112_n

‍ಲೇಖಕರು Admin

18 January, 2016

1 Comment

  1. Guruprasad

    I too felt bad for the death of Rohit , who was misguided by the Left wing Student association and being part of its protest in condemning the hanging of Yakub Menon and later on events in university fights .

    I hope Avadhi and all the eminent persons here show the same condolence to our own Yellalinga

    ಹೈದರಾಬಾದಿನ ರೋಹಿತ್ ನದ್ದು ‘ಶೈಕ್ಷಣಿಕ ಹತ್ಯೆ’ಯಾದರೆ…??

    ಕೊಪ್ಪಳದ ವಿದ್ಯಾರ್ಥಿ ಯಲ್ಲಾಲಿಂಗ ನದ್ದು ‘ಪ್ರಾಮಾಣಿಕತೆಯ ಹತ್ಯೆ’ ಯಲ್ಲವೇ…??

    ಕೊಪ್ಪಳದ ಬಡವಿದ್ಯಾರ್ಥಿ ‘ಯಲ್ಲಾಲಿಂಗ’ನ ಸಾವಿಗೆ ‘ದಲಿತ’ ಎನ್ನುವ ಟ್ಯಾಗ್ ಲೈನ್ ದಕ್ಕಲಿಲ್ಲ,ಹಾಗಾಗಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಆ ಯುವಕನ ಸಾವು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಲಿಲ್ಲಾ ಪರಗತಿಪರರ ಟೌನ್ ಹಾಲ್ ಓರಾಟಗಳು,ಬಿರಿಯಾನಿ ಮುಕ್ಕಾಟಗಳು ನಡೆಯಲಿಲ್ಲ ಅದೊಂದು ‘ಪ್ರಾಮಾಣಿಕತೆಯ’ ಹತ್ಯೆ ಎನ್ನಿಸಲಿಲ್ಲಾ,ಸಿದ್ದನ ‘ಕುರ್ಚಿ’ ಅಲುಗಾಡಲಿಲ್ಲಾ…!!

    ಅದೇ ಹೈದರಾಬಾದ್ ‘ವಿವಿ’ ಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯ ‘ದಲಿತ’ ಎನ್ನುವ ಟ್ಯಾಗ್ ಲೈನ್ ಸಿಕ್ಕಿಬಿಟ್ಟಿದೆ,(ಕೊಟ್ಟಿದ್ದಾರೆ)ಆದ್ದರಿಂದ ಸಹಜವಾಗಿಯೇ ಪರಗತಿಪರರ ಕಿವಿ ನೆಟ್ಟಗಾಗಿದೆ,
    ಮೈಕೊಡವಿಕೊಂಡು ಟೌನ್ ಹಾಲ್ ಕಡೆಗೆ ಧಾವಿಸಿ ಬರುತ್ತಿದ್ದಾರೆ

    ಇದೊಂದು ‘ಶೈಕ್ಷಣಿಕ ಹತ್ಯೆ’ ಈ ಹತ್ಯೆಗೆ,RSS ,ABVP ಮತ್ತು ಕೇಂದ್ರ ಸರ್ಕಾರವೇ ನೇರ ಹೊಣೆ ನರೇಂದ್ರ ಮೋದಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬೊಬ್ಬೆ ಹೊಡೆಯಲಿದ್ದಾರೆ,ಆದರೆ ಯಲ್ಲಾಲಿಂಗನ ಕೊಲೆಯಾದಾಗ ಅದರ ವಿರುದ್ಧ ಇದೇ ಪ್ರಗತಿಪರರು ತುಟಿಬಿಚ್ಚಲಿಲ್ಲಾ ಕಾರಣ..?.ಈ ಘಟನೆಯಲ್ಲಿ ರಾಜ್ಯಸಚಿವ ಮತ್ತವನ ಬಂಟರ ಹೆಸರು ತಳುಕುಹಾಕಿಕೊಂಡಿತ್ತು ತಮಗೆ ಗಂಜಿಹಾಕಿ ಸಾಕುತ್ತಿರುವ ಸರ್ಕಾರದ ವಿರುದ್ದ ಪ್ರಗತಿಪರರು ಅದು ಹೇಗೆ ತಾನೆ ಪ್ರತಿಭಟನೆ ನಡೆಸುತ್ತಾರೆ ಅಲ್ಲವೇ…?

    ಆ ಸಂಧರ್ಭದಲ್ಲಿ ಕೊಲೆಯ ವಿರುದ್ದ ಗಟ್ಡಿಯಾಗಿ ದ್ವನಿಯೆತ್ತಿ ಪ್ರತಿಭಟನೆ ನಡೆಸಿದ್ದೇ ‘ABVP’
    ಆದರೆ ಈಗ ಹೈದರಾಬಾದ್ ‘ವಿವಿ’ ವಿದ್ಯಾರ್ಥಿಯ ಸಾವನ್ನು ಪ್ರಗತಿಪರರು ,ಸೂಕ್ತ ಸಾಕ್ಷ್ಯಾಧಾರಗಳಿಲ್ಲದೇ ‘ABVP’ ತಲೆಗೆ ಕಟ್ಟುತ್ತಿದ್ದಾರೆ,ಕಾರಣವಿಲ್ಲದೆಯೇ ‘ಸಂಘಪರಿವಾರ’ ವನ್ನು ಪ್ರಕರಣದಲ್ಲಿ ತಳುಕುಹಾಕಿದ್ದಾರೆ ಜೊತೆಗೆ ರೋಹಿತನ ಆತ್ಮಹತ್ಯೆ ಪ್ರಕರಣಕ್ಕೆ ಕೇಂದ್ರ ಸಚಿವರೊಬ್ಬರ ಹೆಸರು ಸೇರಿಕೊಂಡಿದೆ ಹಾಗಾಗಿಯೇ ಪ್ರಗತಿಪರರು ಕೇಂದ್ರ ಸರ್ಕಾರವನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನ ನಡೆಸಿದ್ದಾರೆ…!!

    ಯಲ್ಲಾಲಿಂಗನ ಕೊಲೆಯನ್ನು ಕಂಡೂ ಕಾಣದಂತೆ ಸುಮ್ಮನಿದ್ದು ರಾಜ್ಯಸಚಿವರು ಮತ್ತವನ ಬಂಟರನ್ನು ರಕ್ಷಣೆ ಮಾಡಿದ್ದ ಇದೇ ಪ್ರಗತಿಪರರು,ಈಗ ಹೈದರಾಬಾದಿನ ರೋಹಿತ್ ನ ಆತ್ಮಹತ್ಯೆಯ ಹಿಂದೆ ಕೇಂದ್ರ ಸಚಿವರೊಬ್ಬರ ಹೆಸರು ಕೇಳಿಬಂದ ತಕ್ಷಣ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ‘ಸೆಲೆಕ್ಟಿವ್ ಓರಾಟಗಳು,ನವರಂಗಿ ಆಟಗಳು ಅಂದ್ರೆ ಇದೇ ಅಲ್ಲಾ…??

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading