ಹೆಜ್ಜೆಯ ಗುರುತುಗಳು
ಡಾ ಪ್ರತಿಭಾ ಕಾಗೆ
ಬದುಕಿನುದ್ದಕೂ ಸವೆಸಿದ
ಹೆಜ್ಜೆಯ ಗುರುತುಗಳು
ಒಂದು ಅಳಿಸಿ ಮತ್ತೊಂದು
ಅಳಿಸಲಾಗದೆ ಗಟ್ಟಿಯಾಗಿ
ಮೂಡಿ.
ತುಂಬು ಉತ್ಸಾಹದ
ಕೆಲ ತುಣುಕುಗಳು
ಗಾಢ ಬಣ್ಣವಾಗಿ ತೋರಿ
ಗೊತ್ತಿದ್ದೊ ,ಗೊತ್ತಿಲ್ಲದೆಯೋ
ಯಾರದೊ ಮನ ನೊಯಿಸಿದ

ಮತ್ತಿನ್ನಾರದೊ ಮನ ಗೆದ್ದ
ತಪ್ಪು ಮಾಡದೆಯೆ ಕೆಂಗಣ್ಣಿಗೆ
ಗುರಿಯಾದ ಅಪ್ಪಟ ಗುರುತುಗಳು
ಬೆಟ್ಟದಷ್ಟು ನಿರೀಕ್ಷೆಗಳು
ಕೆಲವು ಗಟ್ಟಿ ,ಕೆಲವು ಜೊಳ್ಳು.
ಮುಟ್ಟಲಾಗದೆ ಹಾಗೆ ಉಳಿದಿಹವು.
ಬೇಕು ,ಬೇಡಗಳ ದ್ವಂದ್ವ
ಬರಿ ತಾಕಲಾಟ ಬದುಕಿನ
ಪರಿಪಾಠ.






ತುಂಬಾ ಚೆನ್ನಾಗಿದೆ ಕವಿತೆ